2015 ಬಿಎಂಡಬ್ಲ್ಯು 6 ಸಿರೀಸ್ ಗ್ರ್ಯಾನ್ ಕೂಪೆ ಅನಾವರಣ

Written By:

ಈ ವರ್ಷಾಂತ್ಯದ ವೇಳೆಯಲ್ಲಿ ಸಿರಿವಂತರಿಗಾಗಿ ಮಗದೊಂದು ಆಕರ್ಷಕ ಕೊಡುಗೆಯೂಂದಿಗೆ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆ ಮುಂದೆ ಬಂದಿದೆ.

ಎಲ್ಲ ಹೊಸತನದಿಂದ ಕೂಡಿರುವ 2015 ಬಿಎಂಡಬ್ಲ್ಯು 6 ಸಿರೀಸ್ ಗ್ರ್ಯಾನ್ ಕೂಪೆ ಭರ್ಜರಿ ಅನಾವರಣಗೊಂಡಿದೆ. ಇವೆಲ್ಲವೂ ಐಷಾರಾಮಿ ಕಾರುಗಳನ್ನು ಇಷ್ಟಪಡುವ ಗ್ರಾಹಕರಿಗೆ ಅದ್ಭುತ ಚಾಲನಾ ಅನುಭವ ನೀಡಲಿದೆ.

ಹೊಸ 2015 ಕೂಪೆ ಕಾರಿನ ಮುಂಭಾಗದಲ್ಲೇ ಮಹತ್ವದ ಬದಲಾವಣೆ ಕಾಣಬಹುದಾಗಿದೆ. ಇವೆಲ್ಲದರ ಗೌರವ ಬಿಎಂಡಬ್ಲ್ಯು ಡಿಸೈನ್ ಹೌಸ್‌ಗೆ ಸಲ್ಲುತ್ತದೆ.

ಬದಿಯಿಂದ ನೋಡುವಾಗಲೂ ಸಣ್ಣ ನಡಿಯಿಂದ ಮುಂದಕ್ಕೆ ಹೆಜ್ಜೆಯಿರಿಸಿರುವ ಸುಂದರ ಚೆಲುವೆಯಂತೆ ಭಾಸವಾಗುತ್ತಿದೆ. ಇದರ ಅಲಾಯ್ ವೀಲ್ ಕಾರಿಗೆ ಇನ್ನಷ್ಟು ಕ್ರೀಡಾತ್ಮಕ ವಿನ್ಯಾಸ ನೀಡುತ್ತಿದೆ.

ಇನ್ನು ಹಿಂದುಗಡೆಯೂ ಫಿಟ್ ಆಂಡ್ ಫಿನಿಶ್ ಬಗ್ಗೆ ಪ್ರಶ್ನೆಯೇ ಎತ್ತುವಂತಿಲ್ಲ. ಕ್ರೀಡಾ ಕಾರಿನ ಭಾವನೆ ನೀಡುವ ನಿಟ್ಟಿನಲ್ಲಿ ಕಾರಿನ ಕೆಳಗಡೆ ಎರಡು ಬಂದಿಗಳಲ್ಲೂ ಡ್ಯುಯಲ್ ಎಕ್ಸಾಸ್ಟ್ ಲಗತ್ತಿಸಲಾಗಿದೆ.

ಇದು ವಿದ್ಯುನ್ಮಾನವಾಗಿ ನಿಯಂತ್ರಿಸುವ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗವನ್ನು ಹೊಂದಿರುತ್ತದೆ. ಅಲ್ಲದೆ ರಿಯರ್ ಅಥವಾ ಫೋರ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಹೊಂದಿರುತ್ತದೆ.

ಕಾರಿನೊಳಗೂ ಹೆಚ್ಚು ಮರದ ಕೆತ್ತನೆ ಪ್ರಯೋಗ ಮಾಡಿರುವುದನ್ನು ಗಮನಿಸಬಹುದಾಗಿದೆ. ಅಲ್ಲದೆ ವಿದೇಶಿ ವಾಹನ ಶೈಲಿಗೆ ಅನುಕೂಲವಾಗುವಂತೆ ಎಡ ಬದಿಯ ಚಾಲನಾ ವ್ಯವಸ್ಥೆಯನ್ನು ಹೊಂದಿರುತ್ತದೆ.

ಒಟ್ಟಾರೆಯಾಗಿ ನಾವೆಲ್ಲರೂ 2015 ಬಿಎಂಡಬ್ಲ್ಯು 6 ಸಿರೀಸ್ ಗ್ರ್ಯಾನ್ ಕೂಪೆ ಭಾರತ ಮಾದರಿಗಾಗಿ ಕಾಯುತ್ತಿದ್ದೇವೆ.

ಕಾರು ಹೋಲಿಸಿ

ಬಿಎಂಡಬ್ಲ್ಯು 3 ಸಿರೀಸ್
ಬಿಎಂಡಬ್ಲ್ಯು 3 ಸಿರೀಸ್ ಮಾದರಿ ಆಯ್ಕೆ ಮಾಡಿ
-- ಹೋಲಿಕೆಗಾಗಿ ಆಯ್ಕೆ ಮಾಡು --
English summary
2015 BMW 6-Series Gran Coupe Revealed: The Beauty Is Still A Beast
Story first published: Saturday, December 13, 2014, 12:31 [IST]
Please Wait while comments are loading...

Latest Photos

X