ಆಡಿಯಿಂದ 2020ರ ವೇಳೆಗೆ ಎಲ್ಲ ಪ್ರಮುಖ ಮಾದರಿಗಳ ಹೈಬ್ರಿಡ್ ವರ್ಷನ್

Written By:

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ, 2020ರ ವೇಳೆಗೆ ಎಲ್ಲ ಪ್ರಮುಖ ಮಾದರಿಗಳ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡುವ ಮಹತ್ತರ ಯೋಜನೆ ಹೊಂದಿದೆ. ಈ ಮೂಲಕ ಮುಂದಿನ ದಶಕದಲ್ಲಿ ಹೆಚ್ಚು ಹೈಬ್ರಿಡ್ ಮಾದರಿಯ ವಾಹನಗಳನ್ನು ಅಭಿವೃದ್ಧಿಪಡಿಸಲಿದೆ.

ಈ ಬಗ್ಗೆ ಮಾತನಾಡಿರುವ ಆಡಿ ಅಧ್ಯಯನ ಹಾಗೂ ಅಭಿವೃದ್ಧಿ ವಿಭಾಗದ ಅಧ್ಯಕ್ಷ ಅಲ್‌ರಿಚ್ ಹ್ಯಾಕನ್‌ಬರ್ಗ್, ಹೆಚ್ಚೆಚ್ಚು ಪ್ಲಗ್ ಇನ್ ಹೈಬ್ರಿಡ್ ಮಾದರಿಗಳನ್ನು ಪರಿಚಯಿಸುವುದಾಗಿ ತಿಳಿಸಿದರು. ಈ ಪೈಕಿ ಆಡಿ ಎ3 ಸ್ಪೋರ್ಟ್ಸ್‌ಬ್ಯಾಕ್ ಇ-ಟ್ರಾನ್ ಪ್ರಮುಖವಾಗಿರಲಿದೆ.

Audi

ಗ್ರಾಹಕರ ನಿರೀಕ್ಷೆಗಳನ್ನು ಮುಟ್ಟುವುದು ಆಡಿ ಪ್ರಮುಖ ಗುರಿಯಾಗಿರಲಿದೆ. ಇವೆಲ್ಲವೂ ಎಂಕ್ಯೂಬಿ ತಲಹದಿಯಲ್ಲಿ ನಿರ್ಮಾಣವಾಗಲಿದೆ. ಇದು 1.4 ಟಿಎಫ್‌ಎಸ್‌ಐ ಪೆಟ್ರೋಲ್ ಎಂಜಿನ್ ಜೊತೆಗೆ ಎಲೆಕ್ಟ್ರಾನಿಕ್ ಎಂಜಿನ್ ಪಡೆದುಕೊಳ್ಳಲಿದೆ.

ಇದೇ ಸಂದರ್ಭದಲ್ಲಿ ಫೋರ್ ವೀಲ್ ಡ್ರೈವ್ ವರ್ಷನ್ ಸಹ ಬಿಡುಗಡೆ ಮಾಡುವ ಯೋಜನೆಯಿದೆ ಎಂದಿದ್ದಾರೆ. ಬಿಎಂಡಬ್ಲ್ಯು ವಾಹನಗಳಿಗೆ ವಿರುದ್ಧವಾಗಿ ಕನಿಷ್ಠ ನಾಲ್ಕು ಪ್ಲಗ್ ಇನ್ ಹೈಬ್ರಿಡ್ ಮಾದರಿಗಳನ್ನು ಪರಿಚಯಿಸುವುದು ಆಡಿ ಯೋಜನೆಯಾಗಿದೆ. ಅಂದ ಹಾಗೆ ಆಡಿ ಎ3 ಸ್ಪೋರ್ಟ್ಸ್‌ಬ್ಯಾಕ್ ಇ-ಟ್ರಾನ್ ಮುಂದಿನ ವರ್ಷ ಯುರೋಪ್ ಮಾರುಕಟ್ಟೆಯನ್ನು ತಲುಪಲಿದೆ.

ಕಾರು ಹೋಲಿಸಿ

ಆಡಿ ಎ3
ಆಡಿ ಎ3 ಮಾದರಿ ಆಯ್ಕೆ ಮಾಡಿ
-- ಹೋಲಿಕೆಗಾಗಿ ಆಯ್ಕೆ ಮಾಡು --
Story first published: Thursday, July 3, 2014, 15:28 [IST]
Please Wait while comments are loading...

Latest Photos