ಜ. 6ರಂದು ಆಡಿ ಸ್ಪೋರ್ಟ್ಸ್ ಕಾರು ದೇಶದಲ್ಲಿ ಲಾಂಚ್

Written By:

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ ಹೊಸ ವರ್ಷದಲ್ಲಿ ನೂತನ ಆರ್‌ಎಸ್7 ಸ್ಪೋರ್ಟ್ಸ್ ಸೆಡಾನ್ ಕಾರನ್ನು ಭಾರತಕ್ಕೆ ಪರಿಚಯಿಸಲಿದೆ. ಇದು ಎ7 ಸೆಡಾನ್ ಕಾರಿನ ನಿರ್ವಹಣಾ ವರ್ಷನ್ ಎನಿಸಿಕೊಳ್ಳಲಿದೆ.

ಪ್ರಸ್ತುತ ಆರ್‌ಎಸ್7 ಸ್ಪೋರ್ಟ್ಸ್ ಸೆಲೂನ್ ಕಾರು ಜನವರಿ 6ರಂದು ಬಿಡುಗಡೆಯಾಗಲಿದೆ. ಪ್ರಮುಖವಾಗಿಯೂ ಮರ್ಸಿಡಿಸ್ ಬೆಂಝ್ ಎಎಂಜಿ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದೆ. ಪ್ರಸ್ತುತ ಕಾರು ಮರ್ಸಿಡಿಸ್ ಬೆಂಝ್ ಇ63 ಎಎಂಜಿ ಮತ್ತು ಬಿಎಂಡಬ್ಲ್ಯು ಎಂ5 ಆವೃತ್ತಿಗೆ ಪೈಪೋಟಿ ನೀಡಲಿದೆ.

To Follow DriveSpark On Facebook, Click The Like Button
Audi RS 7

ಅಂದ ಹಾಗೆ ಆಡಿ ಆರ್‌ಎಸ್7 ಸ್ಪೋರ್ಟ್ಸ್ ಕಾರು 4.0 ಲೀಟರ್ ಟಿಎಫ್‌ಎಸ್‌ಐ ಟ್ವಿನ್ ಟರ್ಬೊ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಇದು 560 ಪಿಎಸ್ ಪವರ್ (700 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಇದು ಗಂಟೆಗೆ 250 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಹಾಗಿದ್ದರೂ ಜಾಗತಿಕ ಮಾರುಕಟ್ಟೆಯಲ್ಲಿ ಈ ವೇಗ ಗಂಟೆಗೆ 305 ಕೀ.ಮೀ. ವರೆಗೂ ವರ್ಧನೆಯಾಗಲಿದೆ. ಅದೇ ರೀತಿ ಕೇವಲ 3.9 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಅಂತಿಮವಾಗಿ ದರದ ಬಗ್ಗೆ ಮಾತನಾಡುವುದಾದ್ದಲ್ಲಿ ಆಡಿ ಆರ್‌ಎಸ್ 7 ಸೆಡಾನ್ ಐಷಾರಾಮಿ ಕಾರು 1.5 ಕೋಟಿ ರು.ಗಳಷ್ಟು ದುಬಾರಿಯಾಗಲಿದೆ.

English summary
Audi India has revealed through its official Facebook page that it will launch the RS 7 sports saloon in the country on January 6th. Audi RS 7 is the performance version of the A7 sedan
Story first published: Saturday, January 4, 2014, 12:05 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark