2018ರ ವೇಳೆಗೆ 7 ಆಲ್ಫಾ ರೊಮಿಯೊ ಸ್ಪೋರ್ಟ್ಸ್ ಕಾರುಗಳು ಲಾಂಚ್

Written By:

ಫಿಯೆಟ್ ಗ್ರೂಪ್ ಆಟೋಮೊಬೈಲ್ಸ್‌ನ ಭಾಗವಾಗಿರುವ ಆಲ್ಫಾ ರೊಮಿಯೊ, ಜಗತ್ತಿನ ದುಬಾರಿ ಸ್ಪೋರ್ಟ್ಸ್ ಕಾರು ಬ್ರಾಂಡ್‌ಗಳಲ್ಲಿ ಒಂದಾಗಿದೆ. ಸರಿ ಸುಮಾರು 100 ವರ್ಷಕ್ಕೂ ಹಿಂದೆ ಸ್ಥಾಪಿತಗೊಂಡ ಈ ಐಕಾನಿಕ್ ಬ್ರಾಂಡ್ ಇಟಲಿ ಮೂಲದವರೇ ಆದ ಫಿಯೆಟ್ 2007ನೇ ಇಸವಿಯಲ್ಲಿ ತನ್ನದಾಗಿಸಿಕೊಂಡಿತ್ತು.

ಪ್ರಸ್ತುತ ಆಲ್ಫಾ ರೊಮಿಯೊ ಐಷಾರಾಮಿ ಕಾರು ಬ್ರಾಂಡ್ ಅನ್ನು ಸಕ್ರಿಯವಾಗಿಸುವ ಯೋಜನೆಯಲ್ಲಿರುವ ಫಿಯೆಟ್, 2018ರ ವೇಳೆಯಾಗುವಾಗ ಏಳು ನೂತನ ಆಲ್ಫಾ ರೊಮಿಯೊ ಕಾರುಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ.

ಅಂದರೆ ಮುಂದಿನ ನಾಲ್ಕು ವರ್ಷ ಆಲ್ಪಾ ರೊಮಿಯೊ ಪಾಲಿಗೆ ಮಹತ್ವದಾಯಕವಾಗಲಿದೆ. ಇತ್ತೀಚೆಗಷ್ಟೇ ಅಮೆರಿಕದ ಆಯ್ದ ಡೀಲರುಶಿಪ್‌ಗಳಲ್ಲಿ ಆಲ್ಫಾ ರೊಮಿಯೊ 4ಸಿ ಕ್ರೀಡಾ ಕಾರುಗಳನ್ನು ಪರಿಚಯಿಸಿತ್ತು. ಪ್ರಸ್ತುತ ಮಾರಾಟ ಸಂಖ್ಯೆಯನ್ನು 100000 ಲಕ್ಷದಿಂದ 5,00,000 ಯುನಿಟ್‌ಗಳಿಗೆ ಏರಿಸುವ ಯೋಜನೆ ಹೊಂದಿದೆ.

ಒಟ್ಟಾರೆಯಾಗಿ ಆಲ್ಫಾ ರೊಮಿಯೊ ದುಬಾರಿ ಕನ್ವರ್ಟಿಬಲ್, ಸೆಡಾನ್ ಹಾಗೂ ವ್ಯಾಗನ್ ಕಾರುಗಳು ಮುಂಬರುವ ವರ್ಷಗಳಲ್ಲಿ ಕಾಣಸಿಗಲಿದೆ. ಇವೆಲ್ಲವೂ ಕಂಪನಿಗೆ ಲಗ್ಷುರಿ ಕಾರು ಮಾರುಕಟ್ಟೆಯಲ್ಲಿ ಇನ್ನು ಎತ್ತರಕ್ಕೆ ಬೆಳೆಯಲು ನೆರವಾಗಲಿದೆ.

Fiat
English summary
Fiat Chrysler Automobiles (FCA) which has been trying to review the fortunes of its luxury brand Alfa Romeo for a long time, has reportedly decided to go full throttle in the coming years.
Story first published: Saturday, March 22, 2014, 15:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark