ವರ್ಷದಲ್ಲಿ 1 ಲಕ್ಷ ಮಾರಾಟ ದಾಟಿದ ಹೋಂಡಾ
ಕಳೆದ ಸಾಲಿನಲ್ಲಿ ಅತಿ ಹೆಚ್ಚು ಯಶಸ್ಸನ್ನು ಕಂಡಿರುವ ಹೋಂಡಾ ಕಾರ್ಸ್ ಇಂಡಿಯಾ ಡಿಸೆಂಬರ್ ತಿಂಗಳ ಮಾರಾಟದಲ್ಲೂ ಶೇಕಡಾ 30ರಷ್ಟು ವರ್ಧನೆ ದಾಖಲಿಸಿದೆ. ಒಟ್ಟಾರೆಯಾಗಿ ಕಳಪೆ ಮಾರಾಟದ ನಡುವೆಯೂ ಹೋಂಡಾ ಉತ್ತಮ ಪ್ರಗತಿ ಸಾಧಿಸಿರುವುದು ಶ್ಲಾಘನೀಯ ಅಂಶವಾಗಿದೆ.
ಈ ಅವಧಿಯಲ್ಲಿ 5493 ಯುನಿಟ್ ಮಾರಾಟ ಕಾಣುವ ಮೂಲಕ ಶೇಕಡಾ 30ರಷ್ಟು ಪ್ರಗತಿ ಸಾಧಿಸಿರುವ ಹೋಂಡಾ ಜನಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ಬಾರಿಯಿದು 4242 ಯುನಿಟ್‌ಗಳಾಗಿದ್ದವು.

ಈ ಪೈಕಿ 2013 ಎಪ್ರಿಲ್‌ನಿಂದ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಹೋಂಡಾ ಶೇಕಡಾ 66ರಷ್ಟು ವೃದ್ಧಿ ದಾಖಲಿಸಿದೆ. ಈ ಸಂದರ್ಭದಲ್ಲಿ ಹೋಂಡಾ 85,856 ಯುನಿಟ್ ಮಾರಾಟ ಕಂಡುಕೊಂಡಿದೆ. ಕಳೆದ ವರ್ಷವಿದು 51,478 ಯುನಿಟ್‌ಗಳಾಗಿದ್ದವು.
ಮಗದೊಮ್ಮೆ ಡಿಸೆಂಬರ್ ತಿಂಗಳಲ್ಲಿ ಅಮೇಜ್ ಹೋಂಡಾಗೆ ಯಶಸ್ಸನ್ನು ತಂದಿಕ್ಕಿದೆ. ಈ ಅವಧಿಯಲ್ಲಿ 4458 ಯುನಿಟ್ ಮಾರಾಟ ಕಂಡಿದ್ದವು. ಈ ಎಲ್ಲದರ ಮೂಲಕ ವರ್ಷವೊಂದರಲ್ಲಿ ಇದೇ ಮೊದಲ ಬಾರಿ ಒಂದು ಲಕ್ಷ ಸೇಲ್ಸ್ ಸಂಖ್ಯೆ (107,661) ದಾಟುವಲ್ಲಿ ಹೋಂಡಾ ಯಶಸ್ವಿಯಾಗಿದೆ.


Click it and Unblock the Notifications








