4ನೇ ತಲೆಮಾರಿನ ಹೋಂಡಾ ಸಿಟಿ ಮುಂಬೈನಲ್ಲಿ ಲಾಂಚ್

Posted By:

ಕಳೆದ ದಿನವಷ್ಟೇ ರಾಷ್ಟ್ರ ರಾಜಧಾನಿ ಪ್ರವೇಶಿಸಿದ್ದ ನಾಲ್ಕನೇ ತಲೆಮಾರಿನ ಹೋಂಡಾ ಸಿಟಿ ವಾಣಿಜ್ಯ ನಗರಿ ಮುಂಬೈನಲ್ಲೂ ಭರ್ಜರಿ ಲಾಂಚ್ ಕಂಡಿದೆ. ದೇಶದ ಅತ್ಯಂತ ಹೆಚ್ಚು ಇಂಧನ ಕ್ಷಮತೆಯುಳ್ಳ ಕಾರೆಂಬ ಕೀರ್ತಿಗೆ ಪಾತ್ರವಾಗಿರುವ ಹೋಂಡಾ ಸಿಟಿಯ 1.5 ಲೀಟರ್ ಐ-ಡಿಟೆಕ್ ಈಗಾಗಲೇ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ನೂತನ ಹೋಂಡಾ ಸಿಟಿ ಪೆಟ್ರೋಲ್ ವೆರಿಯಂಟ್ ಮುಂಬೈ ಎಕ್ಸ್ ಶೋ ರೂಂ ದರ 7.42 ಲಕ್ಷ ರು.ಗಳಿಂದ ಆರಂಭವಾಗಲಿದೆ. ಅದೇ ರೀತಿ ಡೀಸೆಲ್ ವೆರಿಯಂಟ್‌ಗಾಗಿ 9.28 ಲಕ್ಷ ರು. ಪಾವತಿಸಬೇಕಾಗಿದೆ.

Honda city launched in mumbai

ಪರಿಷ್ಕೃತ ವಿನ್ಯಾಸ, ಅತ್ಯುತ್ತಮ ನಿರ್ವಹಣೆ ಮತ್ತು ಮೈಲೇಜ್ ಇತರ ಕಾರುಗಳಿಂದ ಹೋಂಡಾವನ್ನು ವಿಭಿನ್ನವಾಗಿಸಲಿದೆ. ಅಲ್ಲದೆ ಈಗಾಗಲೇ 9,000ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಗಿಟ್ಟಿಸಿಕೊಂಡಿದೆ.

ಇದು ಪ್ರಮುಖವಾಗಿಯೂ ದೇಶದ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈನ ಜನಪ್ರಿಯ ವರ್ನಾ ಆವೃತ್ತಿಗೆ ಸೆಡ್ಡು ನೀಡಲಿದೆ.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark