ಮಾರುತಿ, ಹ್ಯುಂಡೈ ಕುಸಿತದ ನಡುವೆ ಹೋಂಡಾ ಬೇಟೆ

By Nagaraja

ದೇಶದ ಸಂಪ್ರದಾಯಿಕ ಕಾರು ತಯಾರಕ ಸಂಸ್ಥೆಗಳಾಗಿರುವ ಮಾರುತಿ ಸುಜುಕಿ ಹಾಗೂ ಹುಂಡ್ಯೈ ಇಂಡಿಯಾ ಕುಸಿತ ಅನುಭವಿಸಿರುವ ಹೊರತಾಗಿಯೂ ಜಪಾನ್ ಮೂಲದ ಹೋಂಡಾ ಕಾರು ತಯಾರಕ ಸಂಸ್ಥೆಯು 2014 ಫೆಬ್ರವರಿ ತಿಂಗಳ ಮಾರಾಟದಲ್ಲಿ ಭರ್ಜರಿ ಶೇಕಡಾ 123ರಷ್ಟು ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಇಲ್ಲಿ ಯಾವುದೇ ಅಚ್ಚರಿಯಿಲ್ಲವೆಂಬಂತೆ ಹೋಂಡಾದ ನೂತನ 2014 ಸಿಟಿ ಕಾರು ಅತ್ಯಂತ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರು ನೆರವಾಗಿದೆ.

2014 honda city

2014 ಫೆಬ್ರವರಿ ತಿಂಗಳ ಮಾರಾಟದಲ್ಲಿ ಹೋಂಡಾ ಒಟ್ಟು 14,543 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಈ ಪೈಕಿ ಸಿಟಿ 7213 ಹಾಗೂ ಅಮೇಜ್ 6030 ಯುನಿಟ್‌ಗಳಷ್ಟು ಮಾರಾಟ ಕಂಡುಕೊಂಡಿದೆ. ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ ಹೋಂಡಾ ಕೇವಲ 6510 ಯುನಿಟ್‌ಗಳನ್ನಷ್ಟು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಬರೋಬ್ಬರಿ ಶೇಕಡಾ 123ರಷ್ಟು ವೃದ್ಧಿ ದಾಖಲಿಸಿಕೊಂಡಿದೆ.

ಇನ್ನುಳಿದಂತೆ 2013 ಎಪ್ರಿಲ್ ತಿಂಗಳಿಂದ 2014 ಮಾರ್ಚ್ ತಿಂಗಳ ವರೆಗಿನ ಅವಧಿ ಪರಿಗಣಿಸಿದಾಗ ಹೋಂಡಾ ಮಾರಾಟದಲ್ಲಿ ಶೇಕಡಾ 83ರಷ್ಟು ವರ್ಧನೆ ದಾಖಲಿಸಿಕೊಂಡಿದೆ. ಈ ಅವಧಿಯಲ್ಲಿ ಹೋಂಡಾ ಒಟ್ಟು 115,913 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಕಳೆದ ಬಾರಿಯಿದು 63,439 ಯುನಿಟ್‌ಗಳಷ್ಟಿತ್ತು.

ಉಳಿದಂತೆ ಹೋಂಡಾ ಬ್ರಿಯೊ ಹ್ಯಾಚ್‌ಬ್ಯಾಕ್ 1235, ಸಿಆರ್‌ವಿ ಎಸ್‌ಯುವಿ 65 ಹಾಗೂ 252 ಯುನಿಟ್‌ಗಳನ್ನು ರಫ್ತು ಮಾಡುವಲ್ಲಿ ಕಂಪನಿ ಯಶ ಕಂಡಿದೆ. ಆಟೋ ತಜ್ಞರ ಪ್ರಕಾರ ಹೋಂಡಾ ಮಾರಾಟ ಬೇಟೆ ಮಾರ್ಚ್ ತಿಂಗಳಲ್ಲೂ ಮುಂದುವರಿಯುವ ಸಾಧ್ಯತೆಯಿದೆ.

Most Read Articles

Kannada
English summary
Even as traditionally stable automakers such as Maruti Suzuki and Hyundai saw sales drop a little last month Honda continued its growth story by an amazing 123 percent.
Story first published: Monday, March 3, 2014, 12:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X