ವಿದೇಶಗಳಿಗೂ ಹ್ಯುಂಡೈ ಎಕ್ಸ್‌ಸೆಂಟ್ ರಫ್ತು

Written By:

ಭಾರತದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಹ್ಯುಂಡೈ ಎಕ್ಸ್‌ಸೆಂಟ್ ಇನ್ನು ಮುಂದೆ ದೇಶದಿಂದಲೇ ವಿದೇಶ ರಾಷ್ಟ್ರಗಳಿಗೂ ರಫ್ತು ಆಗಲಿದೆ. ವರದಿಗಳ ಪ್ರಕಾರ ಮಧ್ಯ ಪೂರ್ವ ಆಫ್ರಿಕಾ ಖಂಡಕ್ಕೆ ಈ ಕಾಂಪಾಕ್ಟ್ ಸೆಡಾನ್ ಕಾರು ರಫ್ತಾಗಲಿದೆ ಎಂಬುದು ತಿಳಿದು ಬಂದಿದೆ.

ಇತ್ತೀಚೆಗಷ್ಟೇ ದೇಶದ ಮಾರುಕಟ್ಟೆ ಪ್ರವೇಶಿಸಿದ್ದ ಹ್ಯುಂಡೈ ಎಕ್ಸ್‌ಸೆಂಟ್ ಉತ್ತಮ ಬೇಡಿಕೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದು ಪ್ರಮುಖವಾಗಿಯೂ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಹಾಗೂ ಹೋಂಡಾ ಅಮೇಜ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿತ್ತು.

To Follow DriveSpark On Facebook, Click The Like Button
Hyundai

ಅಷ್ಟೇ ಅಲ್ಲದೆ ನೇಪಾಳದಲ್ಲೂ ಈ ಬಹುನಿರೀಕ್ಷಿತ ಆವೃತ್ತಿಯನ್ನು ಹ್ಯುಂಡೈ ಲಾಂಚ್ ಮಾಡಲಿದೆ. ಈ ಹಿಂದೆ ಮಾರ್ಚ್ ತಿಂಗಳಲ್ಲಿ ಲಾಂಚ್ ಆಗಿದ್ದ ಹ್ಯುಂಡೈ ಎಕ್ಸ್‌ಸೆಂಟ್ 3995 ಎಂಎಂ ಉದ್ದ, 1660 ಎಂಎಂ ಅಗಲ ಮತ್ತು 1520 ಎಂಎಂ ಎತ್ತರವನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೆ 2425 ಎಂಎಂ ವೀಲ್ ಬೇಸ್ ಸಹ ಇರಲಿದೆ.

ಇದರ 1.2 ಲೀಟರ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ 83 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಡೀಸೆಲ್ ವೆರಿಯಂಟ್ 1.1 ತ್ರಿ ಸಿಲಿಂಡರ್ ಎಂಜಿನ್‌ನಿಂದ (72 ಪಿಎಸ್ ಪವರ್) ನಿಯಂತ್ರಿಸ್ಪಡಲಿದೆ.

Story first published: Friday, May 16, 2014, 17:02 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark