ಅಮೇಜ್ ಬೆನ್ನತ್ತಿದ ಎಕ್ಸ್‌ಸೆಂಟ್; ಭಾರಿ ಬೇಡಿಕೆ

Written By:

ಹೋಂಡಾ ಅಮೇಜ್ ಕಾರನ್ನು ಬೆನ್ನತ್ತಿರುವ ನೂತನ ಹ್ಯುಂಡೈ ಎಕ್ಸ್‌ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರಿಗೆ ನಿರೀಕ್ಷೆಗೂ ಮೀರಿದ ಬೇಡಿಕೆ ವ್ಯಕ್ತವಾಗುತ್ತಿದೆ. ಈಗಾಗಲೇ 10,000 ಬುಕ್ಕಿಂಗ್ ದಾಟಿರುವ ಹ್ಯುಂಡೈ ಎಕ್ಸ್‌ಸೆಂಟ್ ಉತ್ತಮ ಬೇಡಿಕೆ ಕಾಯ್ದುಕೊಂಡಿರುವುದಾಗಿ ಸಂಸ್ಥೆ ತಿಳಿಸಿದೆ.

ಹ್ಯುಂಡೈ ಪ್ರಕಾರ, ದಿನವೊಂದರಲ್ಲಿ ಸರಾಸರಿ 450ರಷ್ಟು ಬುಕ್ಕಿಂಗ್ ದಾಖಲಾಗುತ್ತಿದೆ. ಈ ಪೈಕಿ ಪೆಟ್ರೋಲ್ ವೆರಿಯಂಟ್‌ಗೆ ಅತಿ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಹಾಗೆಯೇ ಡೀಸೆಲ್ ವೆರಿಯಂಟ್ ಸಹ ಉತ್ತಮ ಮಾರಾಟ ಕಾಯ್ದುಕೊಂಡಿದೆ ಎಂದಿದೆ.

To Follow DriveSpark On Facebook, Click The Like Button
Hyundai Xcent

ಹ್ಯುಂಡೈ ನಿರ್ಮಾಣ ಗುಣಮಟ್ಟತೆ ಹಾಗೂ ವಿಶ್ವಾಸಾರ್ಹತೆ ಮೇಲೆ ಗ್ರಾಹಕರು ಇಟ್ಟಿರುವ ನಂಬಿಕೆಯೇ ಇಷ್ಟೊಂದು ಅಭೂತಪೂರ್ವ ಪ್ರತಿಕ್ರಿಯೆಗೆ ಕಾರಣವಾಗಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ಅಂತೆಯೇ ಎಕ್ಸ್‌ಸೆಂಟ್ ಬೆಲೆ ಬುಕ್ಕಿಂಗ್ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದಿದೆ.

1.2 ಲೀಟರ್ ಕಪ್ಪ ಡ್ಯುಯಲ್ ವಿಟಿವಿಟಿ ಎಂಜಿನ್ ಹೊಂದಿರುವ ಎಕ್ಸ್‌ಸೆಂಟ್ ಪೆಟ್ರೋಲ್ ವೆರಿಯಂಟ್ 4.66 ಲಕ್ಷ ರು.ಗಳಷ್ಟು ದುಬಾರಿಯಾಗಿದೆ. ಹಾಗೆಯೇ 1.1 ಲೀಟರ್ ಯು2 ತಂತ್ರಗಾರಿಕೆಯ ಡೀಸೆಲ್ ಎಂಜಿನ್ ಕಾರಿನ ದರ 5.56 ಲಕ್ಷ ರು.ಗಳಾಗಿವೆ. ಇದು ಆಟೋಮ್ಯಾಟಿಕ್ ವೆರಿಯಂಟ್‌ನಲ್ಲೂ ಲಭ್ಯವಿದೆ.

ಸಂಸ್ಥೆಯ ಪ್ರಕಾರ, 40,000ರಷ್ಟು ಮಂದಿ ಟೆಸ್ಟ್ ಡ್ರೈವ್‌ಗೆ ವಿನಂತಿ ಸಲ್ಲಿಸಿದ್ದು, ಒಂದು ಲಕ್ಷದಷ್ಟು ಮಂದಿ ಕಾರಿನ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಇದುವರೆಗೆ ಸಂಸ್ಥೆಯು 11,000ಗಳಷ್ಟು ಬುಕ್ಕಿಂಗ್ ದಾಖಲಿಸಿಕೊಂಡಿದೆ.

ಕಳೆದ ವರ್ಷವಷ್ಟೇ ಲಾಂಚ್ ಆಗಿದ್ದ ಹೋಂಡಾ ಅಮೇಜ್ ಹಾಗೂ ಮಾರುತಿ ಡಿಜೈರ್, ಹ್ಯುಂಡೈ ಎಕ್ಸ್‌ಸೆಂಟ್‌ನ ಪ್ರಮುಖ ಎದುರಾಳಿಯಾಗಿದೆ. ಈ ನಡುವೆ ವರ್ಷವೊಂದರಲ್ಲಿ 80,000 ಮಾರಾಟದ ಮೈಲುಗಲ್ಲು ತಲುಪಿರುವ ಅಮೇಜ್, ಇದೀಗಷ್ಟೇ ವಾರ್ಷಿಕ ಸೀಮಿತ ಆವೃತ್ತಿಯನ್ನು ಲಾಂಚ್ ಮಾಡಿತ್ತು. ಅಷ್ಟಕ್ಕೂ ಅಮೇಜ್, ಎಕ್ಸ್‌ಸೆಂಟ್ ಹಾಗೂ ಡಿಜೈರ್ ಕಾಂಪಾಕ್ಟ್ ಸೆಡಾನ್ ಕಾರುಗಳಲ್ಲಿ ಯಾವ ಕಾರು ಬೆಸ್ಟ್? ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...

English summary
Hyundai recently launched their new sub-four-metre sedan, the Xcent. The new car has generated great demand and the dealers are being hounded with enquiries.
Story first published: Friday, April 18, 2014, 12:11 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark