ಕೆಎಸ್‌ಆರ್‌ಟಿಸಿ ಮುಡಿಗೆ ಮಗದೊಂದು ಪ್ರಶಸ್ತಿ ಗರಿ
ದೇಶದ ನಂ.1 ಸಾರಿಗೆ ಸಂಸ್ಥೆಯಾಗಿರುವ ನಮ್ಮ ಹೆಮ್ಮೆಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮನವನ್ನು (ಕ.ರಾ.ರ.ಸಾ.ನಿ) ಮಗದೊಂದು ಪ್ರಶಸ್ತಿ ಹರಸಿಕೊಂಡು ಬಂದಿದೆ.
ಹೌದು; 'ಭಾರತದ ಅತ್ಯುತ್ತಮ ಸಾರ್ವಜನಿಕ ಸಾರಿಗೆ ಆಯೋಜಕರು 2014' (India's Best Public Fleet Operator) ಪ್ರಶಸ್ತಿಗೆ ಕೆಎಸ್‌ಆರ್‌ಟಿಸಿ ಭಾಜನವಾಗಿದೆ. ಕೆಎಸ್‌ಆರ್‌ಟಿಸಿಯ ಪ್ರಯಾಣಿಕ ಸ್ನೇಹಿ, ಸಮರ್ಥ ಮತ್ತು ಶಿಸ್ತಿನ ಆಡಳಿತಾತ್ಮಕ ಕಾರ್ಯ ನೀತಿಗಳು ಮತ್ತು ಸಂಚಾರಿ ಕಾರ್ಯಾಚರಣೆಯನ್ನು ಪರಿಗಣಿಸಿ ಪ್ರತಿಷ್ಠಿತ 'ಸಿವಿ 2014' ಪ್ರಶಸ್ತಿಗೆ ಅರ್ಹ ಮಾಡಲಾಗಿದೆ.

ಒಟ್ಟು 56 ರಾಜ್ಯವಾರು ಸಾರಿಗೆ ಸಂಸ್ಥೆಗಳ ಪೈಕಿ 8400 ಬಸ್ಸುಗಳನ್ನು ಹೊಂದಿರುವ ಕೆಎಸ್‌ಆರ್‌ಟಿಸಿ 2013-14ನೇ ಸಾಲಿನಲ್ಲಿ ಲಾಭಾಂಶ ದಾಖಲಿಸಿದ ಏಕೈಕ ಸಂಸ್ಥೆ ಎನಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಉತ್ತಮ ಆಡಳಿತಾತ್ಮಕ ಕಾರ್ಯಾಚರಣೆಗಾಗಿ ತೀರ್ಪುಗಾರರ ಸಂಘವು ಕರಾರಸಾನಿಯನ್ನು ವಿಶೇಷವಾಗಿ ಪ್ರಶಂಸಿಸಿದೆ.
ವಾಹನೋದ್ಯಮದ ಜನಪ್ರಿಯ ನಿಯಕಾಲಿಕ ನೆಕ್ಸ್ಟ್‌ಜೆನ್ ಸಿವಿ, ಅಪೊಲೊ ಸಿಬಿ ಅವಾರ್ಡ್ 2014 ಏರ್ಪಡಿಸಿತ್ತು. ಇದರಂತೆ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಝಿ ಮೀಡಿಯಾ ಉಪಾಧ್ಯಕ್ಷೆ ಮಿನಿ ಹರಿಸ್ಸನ್ ಎಂಬವರಿಂದ ಕೆಎಸ್‌ಆರ್‌ಟಿಸಿ ಮಹಾ ನಿರ್ದೇಶಕ ಎನ್. ಮಂಜುನಾಥ ಪ್ರಸಾದ್ ಐಎಎಸ್ ಪ್ರಶಸ್ತಿ ಸ್ವೀಕರಿಸಿದ್ದರು.


Click it and Unblock the Notifications








