ಲಂಬೋರ್ಗಿನಿಯಿಂದ ಹೊಸ ರೇಸರ್ ಕಾರು ಲಾಂಚ್

Written By:

ಇಟಲಿಯ ಸೂಪರ್ ಕಾರು ತಯಾರಕ ಸಂಸ್ಥೆಯಾಗಿರುವ ಲಂಬೋರ್ಗಿನಿ ಇತ್ತೀಚೆಗಷ್ಟೇ ಹೊಸ ತಲೆಮಾರಿನ ಹ್ಯುರಕೇನ್ ಎಲ್‌ಪಿ 620-2 ಸೂಪರ್ ಟ್ರೋಫಿಯೊ ರೇಸರ್ ಕಾರನ್ನು ಬಿಡುಗಡೆಗೊಳಿಸಿದೆ.

ಲಂರ್ಬೋಗಿನಿಯ ಹೊಸ ರೇಸರ್ ಕಾರನ್ನು ಸಂಸ್ಥೆಯ ಮೋಟಾರ್‌ಸ್ಪೋರ್ಟ್ ವಿಭಾಗ ವಿನ್ಯಾಸಗೊಳಿಸಿದೆ. ಅಲ್ಲದೆ ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಮಾನಿಟರಿ ಕಾರ್ ವೀಕ್‌ನಲ್ಲಿ ಪ್ರದರ್ಶಿಸಲಾಗಿತ್ತು.

To Follow DriveSpark On Facebook, Click The Like Button
Lamborghini

ಈ ಹೊಸ ಕಾರು 2015ರ ಎಲ್ಲ ಮೂರು ಸಿರೀಸ್‌ನಲ್ಲಿ (ಬ್ಲಾಂಕ್‌ಪೈನ್ ಸೂಪರ್ ಟ್ರೋಫಿಯೋ, ಟೇಕಿಂಗ್ ಪ್ಲೇಸ್ ಇನ್ ಯುರೋಪ್, ಏಷಿಯಾ ಮತ್ತು ಉತ್ತರ ಅಮೆರಿಕ) ಪಾದಾರ್ಪಣೆಗೈಯಲಿದೆ.

ಇನ್ನು ದೇಹದ ಭಾರವನ್ನು ಹಗುರಗೊಳಿಸುವ ನಿಟ್ಟಿನಲ್ಲಿ ಕಾಂಪೋಸಿಟ್ ಉಪಕರಣಗಳ ಬಳಕೆ ಮಾಡಲಾಗಿದೆ. ಅಂತೆಯೇ ಇದರ ವಿ10 ಎಂಜಿನ್ ಬರೋಬ್ಬರಿ 620 ಅಶ್ವಶಕ್ತಿ (570 ಎನ್‌ಎಂ) ಉತ್ಪಾದಿಸಲಿದ್ದು, 6 ಸ್ಪೀಡ್ ಸಿಕ್ವೇನ್ಸಿಯಲ್ ಗೇರ್ ಬಾಕ್ಸ್ ಇರಲಿದೆ.

ಅದೇ ರೀತಿ ಇದರಲ್ಲಿರು ಎಂಒಟಿಇಸಿ ಎಂ181 ಘಟಕವು, ಮಾಹಿತಿ, ಗೇರ್ ಬದಲಾವಣೆ ಮತ್ತು ಡ್ಯಾಶ್‌ಬೋರ್ಡ್‌ನಲ್ಲಿರುವ ಹೊಸ ಟಿಎಫ್‌ಟಿ ಪರದೆಯನ್ನು ನಿಯಂತ್ರಿಸಲಿದೆ.

Read in English: New Racer From Lamborghini
English summary
Automobili Lamborghini have recently launched their new generation racer, the Huracan LP 620-2 Super Trofeo. Designed by their motorsport department, it was unveiled a few days ago at Monterey Car Week, in California,USA.
Story first published: Saturday, August 23, 2014, 7:03 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark