ಡಿಸ್ಕವರಿ ಸ್ಪೋರ್ಟ್, ಜಾಗ್ವಾರ್ ಎಕ್ಸ್‌ಇ ಮುಂದಿನ ವರ್ಷ ಬಿಡುಗಡೆ

Written By:

ಬಹುನಿರೀಕ್ಷಿತ ಲ್ಯಾಂಡ್ ರೋವರ್ ಸ್ಪೋರ್ಟ್ ಮತ್ತು ಜಾಗ್ವಾರ್ ಎಕ್ಸ್‌ಇ ಮಾದರಿಗಳು ಮುಂದಿನ ವರ್ಷ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇವೆರಡೂ ಆಧುನಿಕ ಹಾಗೂ ಕ್ರೀಡಾ ವಿನ್ಯಾಸವನ್ನು ಕಾಯ್ದುಕೊಳ್ಳಲಿದೆ.

ಹಿಂದಿನ ಮಾದರಿಗಳಿಗೆ ಹೋಲಿಸಿದರೆ ಹೊಸ ಆವೃತ್ತಿಗಳು ಹಗುರವಾಗಿರಲಿದೆ. ಅಲ್ಲದೆ ಪ್ರಯಾಣಿಕರ ಆರಾಮದಾಯಕ ಚಾಲನೆಯ ಜೊತೆಗೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.

land rover

ಸಂಸ್ಥೆಯ ಪ್ರಕಾರ ಹೊಸ ಡಿಸ್ಕವರಿ ಸ್ಪೋರ್ಟ್, ನೀರಿನಲ್ಲಿ ಅರ್ಧ ಗಂಟೆ ಇದ್ದರೂ ಯಾವುದೇ ತೊಂದರೆಗಳಿಲ್ಲದೆ ಸಲೀಸಾಗಿ ಗಾಡಿ ಸ್ಟಾರ್ಟ್ ಆಗಲಿದೆ. ಪ್ರಸ್ತುತ ಎಸ್‌ಯುವಿ 5+2 ಆಸನ ವ್ಯವಸ್ಥೆ ಹೊಂದಿರಲಿದೆ. ಇನ್ನು ಕಾರಿನೊಳಗೆ 8 ಇಂಚಿನ ಮಾಹಿತಿ ಮನರಂಜನಾ ಸಿಸ್ಟಂ, ಸ್ಯಾಟಲೈಟ್ ನೇವಿಗೇಷನ್, ವೈ ಫೈ ಹಾಟ್ ಸ್ಪಾಟ್ ಕನೆಕ್ಟಿವಿಟಿ ಮತ್ತು ಆಲ್ ಟರೈನ್ ಮೋಡ್ ಕೂಡಾ ಇರಲಿದೆ.

ಇನ್ನೊಂದೆಡೆ ಜಾಗ್ವಾರ್ ಎಕ್ಸ್‌ಇ 2015ನೇ ಸಾಲಿನ ದ್ವಿತಿಯಾರ್ಧದಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ. ಈ ಐಷಾರಾಮಿ ಕಾರು 28ರಿಂದ 40 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಇದು ಸ್ಮರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ಪುಣೆ ಘಟಕದಲ್ಲಿ ನಿರ್ಮಾಣವಾಗಲಿದೆ.

English summary
Landrover Discovery sport suv to enter the Indian market sometime late next year.
Story first published: Monday, October 6, 2014, 16:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark