ರುಕ್, ಜಾನಾ ನಹಿ; ಅಂತಿಮ ಮಾರುತಿ 800 ಕಾರು ರಸ್ತೆಗೆ

Written By:

ಈ ಮೊದಲೇ ತಿಳಿಸಿರುವಂತೆಯೇ ಐಕಾನಿಕ್ ಮಾರುತಿ 800 ಉತ್ಪಾದನೆಯನ್ನು ಕೊನೆಗೊಳಿಸಲಾಗಿದೆ. ಇದರಂತೆ ಅಂತಿಮ ಮಾರುತಿ 800 ಕಾರನ್ನು ಬಿಡುಗಡೆಗೊಳಿಸಲಾಗಿದೆ.

2014 ಜನವರಿ 18ರಿಂದ ಅನ್ವಯವಾಗುವಂತೆ ಮಾರುತಿ 800 ಉತ್ಪಾದನೆಯನ್ನು ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ನಿಲುಗಡೆಗೊಳಿಸಿತ್ತು. ಈ ಮೂಲಕ ಕಳೆದ ಮೂರು ದಶಕಗಳಲ್ಲಿ 2.9 ಮಿಲಿಯನ್ ಯಶಸ್ವಿ ಗ್ರಾಹಕರನ್ನು ಪೆಡಿದಿದ್ದ ಮಾರುತಿ 800 ತನ್ನ ಜೈತ್ರಯಾತ್ರೆಯನ್ನು ಕೊನೆಗೊಳಿಸಿತ್ತು.

To Follow DriveSpark On Facebook, Click The Like Button

ಮಧ್ಯಮ ವರ್ಗದ ಕಾರೆಂದೇ ಪ್ರಖ್ಯಾತಿ ಪಡೆದಿದ್ದ ಮಾರುತಿ 800 ಪ್ರಪ್ರಥಮ ಕಾರು 1983ನೇ ಇಸವಿಯಲ್ಲಿ ಹೊರಬಂದಿತ್ತು. ಇದನ್ನು ನವದೆಹಲಿಯ ಹರ್ಪಲ್ ಸಿಂಗ್ ಎಂಬವರಿಗೆ ಮಾರಾಟ ಮಾಡಲಾಗಿತ್ತು. ಇದೀಗ ಕೊನೆಯ ಕಾರನ್ನು ಶಿಲ್ಲಾಂಗ್ ಡೀಲರ್‌ಶಿಪ್‌ಗೆ ಒಪ್ಪಿಸಲಾಗಿದೆ.

ಈ ನಡುವೆ ದೇಶದ ಪ್ರಖ್ಯಾತ ಹಾಲು ಉತ್ಪಾದಕ ಸಂಸ್ಥೆಯಾಗಿರುವ ಅಮೂಲ್, ವಿಶೇಷ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಮಾರುತಿ 800 ನಮ್ಮನ್ನು ಬಿಟ್ಟು ಹೋಗದಂತೆ ವಿನಂತಿಸಿಕೊಳ್ಳಲಾಗುತ್ತಿದೆ.

Maruti 800
English summary
The very last Maruti 800 rolled out of the company's Gurgaon, Haryana manufacturing facility on January 18, 2014. This ‘Firebrick Red' 800 went to a dealership in Shillong.
Story first published: Monday, February 17, 2014, 11:53 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark