ಹಬ್ಬದ ಆವೃತ್ತಿ ಬೆನ್ನಲ್ಲೇ ಬೆಲೆ ಏರಿಕೆ ಚಾಟಿ ಬೀಸಿದ ಮಹೀಂದ್ರ, ಟಾಟಾ

Written By:

ದೀಪಾವಳಿ ಹಬ್ಬದ ಆವೃತ್ತಿಯ ಸಂದರ್ಭದಲ್ಲಿ ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ತಮ್ಮ ಮಾದರಿಗಳಿಗೆ ಭಾರಿ ಕೊಡುಗೆ ನೀಡುವ ಮೂಲಕ ಗರಿಷ್ಠ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುವುದರತ್ತ ಪ್ರಯತ್ನ ಮಾಡಿತ್ತು.

ಆದರೆ ಹಬ್ಬದ ಆವೃತ್ತಿ ಮುಗಿದ ಬೆನ್ನಲ್ಲೇ ಪ್ರಮುಖ ಕಾರು ಸಂಸ್ಥೆಗಳು ಬೆಲೆಯೇರಿಕೆ ಘೋಷಿಸುವ ಮೂಲಕ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಮತ್ತು ಟಾಟಾ ಮೋಟಾರ್ಸ್ ಈಗಾಗಲೇ ಬೆಲೆ ಏರಿಕೆ ಘೋಷಿಸಿದೆ.

To Follow DriveSpark On Facebook, Click The Like Button
Mahindra

ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಪ್ರಯಾಣಿಕ, ವಾಣಿಜ್ಯ ಹಾಗೂ ಟ್ರಾಕ್ಟರ್‌ಗಳಿಗೆ 2,500 ರು.ಗಳಿಂದ 11,500 ರು.ಗಳ ವರೆಗೆ (ಎಕ್ಸ್ ಶೋ ರೂಂ) ಬೆಲೆ ಏರಿಕೆಗೊಳಿಸಿದೆ. ಇನ್ನೊಂದೆಡೆ ಟಾಟಾ ಸಂಸ್ಥೆಯ ತನ್ನ ಶ್ರೇಣಿಯ ವಾಣಿಜ್ಯ ವಾಹನಗಳಿಗೆ ಶೇ. 1ರಿಂದ 2ರಷ್ಟು ದರ ಏರಿಕೆಗೊಳಿಸಿದೆ. ಆದರೆ ಟಾಟಾ ಪ್ರಯಾಣಿಕ ವಾಹನಗಳಿಗೆ ಇದು ಅನ್ವಯವಾಗುವುದಿಲ್ಲ.

ಕಾರ್ ಕೇರ್ ಸೆಟ್ - ಸೀಮಿತ ಆಫರ್ ತ್ವರೆ ಮಾಡಿ

ಕಾರಣ ಏನು?

ನಿರ್ಮಾಣ ವೆಚ್ಚ ಹೆಚ್ಚಳವಾಗಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಎರಡು ವಾಹನ ತಯಾರಿಕ ಸಂಸ್ಥೆಗಳು ಸ್ಪಷ್ಟನೆ ನೀಡಿದೆ. ಮೂಲ ಸಾಮಾಗ್ರಿಗಳ ಬೆಲೆ ಏರಿಕೆಗೊಳ್ಳುತ್ತಿದ್ದು, ಇದರಿಂದಾಗಿ ನಿರ್ಮಾಣ ವೆಚ್ಚದಲ್ಲಿ ವರ್ಧನೆ ಕಂಡುಬಂದಿದೆ.

"ಬೆಲೆ ಏರಿಕೆಯನ್ನು ನಾವು ತಡೆ ಹಿಡಿಯುತ್ತಲೇ ಬಂದಿದ್ದೇವೆ. ಆದರೆ ನಿರ್ಮಾಣ ವೆಚ್ಚ ಹೆಚ್ಚಾಗಿದ್ದರಿಂದ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ" ಎಂದು ಮಹಿಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಕಾರ್ಯನಿರ್ವಾಹಕ ಮುಖ್ಯಸ್ಥ ಪ್ರವೀಣ್ ಷಾ ತಿಳಿಸಿದ್ದಾರೆ.

English summary
Mahindra & Mahindra raised prices by up to Rs. 11,500 (ex-showroom) of passenger and commercial vehicles, and tractors, while Tata Motors hiked prices of its commercial vehicles in the range of 1-2 per cent.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark