ರಾಜ್ಯದಲ್ಲಿ ಮಹೀಂದ್ರ ಟ್ರಾಕ್ಟರುಗಳ ದರ ಏರಿಕೆ

By Nagaraja

ವರ್ಷಾಂತ್ಯದಲ್ಲಿ ಕೇವಲ ಕಾರು ತಯಾರಿಕ ಸಂಸ್ಥೆಗಳು ಮಾತ್ರ ದರ ಏರಿಕೆ ಘೋಷಣೆ ಮಾಡಿಲ್ಲ. ಇದರಲ್ಲಿ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್‌ನ ಫಾರ್ಮ್ ಎಕ್ಯೂಪ್‌ಮೆಂಟ್ ವಿಭಾಗ (ಎಫ್‌ಇಎಸ್) ಕೂಡಾ ಸೇರಿದೆ.

ಹೌದು, ಟ್ರಾಕ್ಟರ್ ದರಗಳನ್ನು ಏರಿಕೆಗೊಳಿಸಲು ಮಹೀಂದ್ರ ನಿರ್ಧರಿಸಿದೆ. ಕರ್ನಾಟಕದಲ್ಲಿ ಮಹೀಂದ್ರ ಟ್ರಾಕ್ಟರುಗಳು ಕಳೆದ ಬಾರಿಗಿಂತ ಶೇಕಡಾ 1ರಷ್ಟು ದುಬಾರಿಯೆನಿಸಲಿದೆ. ಅಂದರೆ 4,000 ರು.ಗಳಿಂದ 4,500 ರು.ಗಳ ವರೆಗೆ ವರ್ಧನೆ ಕಂಡುಬರಲಿದೆ. ಇದು ರೈತರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.

Mahindra Tractor Prices

2014 ಜನವರಿ 1ರಿಂದಲೇ ನೂತನ ದರ ಜಾರಿಗೆ ಬಂದಿದೆ. ಆದರೆ ಇಲ್ಲಿಯೂ ದರ ಏರಿಕೆಗಿರುವ ಸಬೂಬು ಸಮಾನವಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಳಗೊಂಡಿರುವುದು ಹಾಗೂ ರುಪಾಯಿ ಮೌಲ್ಯ ಕುಸಿದಿರುವುದರಿಂದ ದರ ಏರಿಕೆಗೊಳಿಸಲು ಪ್ರೇರಿತರಾಗಿದ್ದೇವೆ ಎಂದು ಮಹೀಂದ್ರ ತಿಳಿಸಿದೆ.

ದೇಶದ ಅತಿದೊಡ್ಡ ಟ್ರಾಕ್ಟರ್ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಫಾರ್ಮ್ ಎಕ್ಯೂಪ್‌ಮೆಂಟ್ ಸೆಕ್ಟರ್, ಜಗತ್ತಿನಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಅಮೆರಿಕ, ಚೀನಾ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಆರು ಖಂಡಗಳಲ್ಲೂ ಮಹೀಂದರ್ ಟ್ರಾಕ್ಟರುಗಳು ಮಾರಾಟವಾಗುತ್ತಿದೆ.

Most Read Articles

Kannada
English summary
It is not just car manufacturers that have announced their decision to hike prices from this year. Mahindra & Mahindra Ltd.'s Farm Equipment Sector (FES), part of the Mahindra Group, has also announced its decision to increase prices of tractors.
Story first published: Saturday, January 4, 2014, 14:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X