ಬಿಡುಗಡೆಗೂ ಮುನ್ನ ಮಾರುತಿ ಸೆಲೆರಿಯೊ ಬುಕ್ಕಿಂಗ್ ಆರಂಭ

Written By:

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ತನ್ನ ಬಹುನಿರೀಕ್ಷಿತ ಸೆಲೆರಿಯೊ ಕಾರಿನ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಿದೆ. ಮಾರುತಿ ಸುಜುಕಿ ಸೆಲೆರಿಯೊ ಮುಂಗಡ ಬುಕ್ಕಿಂಗ್‌ಗಾಗಿ ಉತ್ಸಾಹಿತ ಗ್ರಾಹಕರು ರು. 10,000 ಪಾವತಿಸಬೇಕಾಗಿದೆ.

ಈಗಾಗಲೇ ನಿಮ್ಮೆಲ್ಲರ ಗಮನಕ್ಕೆ ಬಂದಿರುವಂತೆಯೇ ಮಾರುತಿ ಸೆಲೆರಿಯೊ ಮುಂಬರುವ 2014 ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗಲಿದೆ. ಇದರಂತೆ ಬಿಡುಗಡೆಗೂ ಮುನ್ನ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ.

Maruti celerio

ಎ-ಸ್ಟಾರ್ ಹಾಗೂ ಎಸ್ಟಿಲೊ ಬದಲಿ ಕಾರಾಗಿ ಗುರುತಿಸಿಕೊಂಡಿರುವ ಸೆಲೆರಿಯೊನಲ್ಲಿರುವ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್‌ಮಿಷನ್ (ಗೇರ್ ಬಾಕ್ಸ್) ಪ್ರಮುಖ ಆಕರ್ಷಣೆಯಾಗಿರಲಿದೆ. ಸಂಸ್ಥೆಯ ಪ್ರಕಾರ ಇದು ವಿಶೇಷವಾಗಿಯೂ ನಗರಗಳಲ್ಲಿ ಸುಲಭ ಚಾಲನೆ ಜತೆಗೆ ಗರಿಷ್ಠ ಇಂಧನ ಕ್ಷಮತೆ ನೀಡುವಲ್ಲಿ ಯಶಸ್ವಿಯಾಗಲಿದೆ.

ಅಂದ ಹಾಗೆ ನಾಲ್ಕು ವೆರಿಯಂಟ್‌ಗಳಲ್ಲಿ ಸೆಲೆರಿಯೊ ಆಗಮನವಾಗಲಿದೆ. ಅವುಗಳೆಂದರೆ - ಎಲ್‌ಎಕ್ಸ್ಐ, ವಿಎಕ್ಸ್‌ಐ, ಝಡ್‌ಎಕ್ಸ್‌ಐ ಮತ್ತು ಝಡ್‌ಎಕ್ಸ್‌ಐ ಆಪ್ಷನ್ ಪ್ಯಾಕ್ (ಎರಡು ಏರ್ ಬ್ಯಾಗ್).

Story first published: Saturday, February 1, 2014, 12:30 [IST]
Please Wait while comments are loading...

Latest Photos