ಆಸ್ಟನ್ ಮಾರ್ಟಿನ್ ಖರೀದಿಸಲಿರುವ ಬೆಂಝ್?

By Nagaraja

ಜಗತ್ತಿನ ಎರಡು ಐಕಾನಿಕ್ ಸಂಸ್ಥೆಗಳು ಸದ್ಯದಲ್ಲೇ ಒಂದಾಗಲಿದೆ. ಬಲ್ಲ ಮೂಲಗಳ ಪ್ರಕಾರ ಆಸ್ಟನ್ ಮಾರ್ಟಿನ್ ಸದ್ಯದಲ್ಲೇ ಮರ್ಸಿಡಿಸ್ ಬೆಂಝ್ ತೆಕ್ಕೆಗೆ ಸೇರಿಕೊಳ್ಳುವ ಸಾಧ್ಯತೆಯಿದೆ.

ಬಲ್ಲ ಮೂಲಗಳ ಪ್ರಕಾರ ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಬೆಂಝ್ ಇಂತಹದೊಂದು ಯೋಜನೆಯನ್ನು ಹೊಂದಿದೆ. ಈಗಾಗಲೇ ಆಸ್ಟನ್ ಮಾರ್ಟಿನ್ ಜತೆ ತಂತ್ರಗಾರಿಕೆ ಪಾಲುದಾರಿಕೆ ಹೊಂದಿರುವ ಬೆಂಝ್, ಈ ಬ್ರಿಟಿಷ್ ಬ್ರಾಂಡ್ ಅನ್ನು ಕೊಂಡುಕೊಳ್ಳುವ ಇರಾದೆ ಹೊಂದಿದೆ.


ಈ ಸಂಬಂಧ ಹೇಳಿಕೆ ಕೊಂಡಿರುವ ಮರ್ಸಿಡಿಸ್ ಬೆಂಝ್ ಹಾಗೂ ಡೈಮ್ಲರ್ ನಿರ್ದೇಶಕ ಡೀಟೆರ್ ಜೆಟ್ಸ್‌ಚೆ, ಇಂತಹದೊಂದು ಪ್ರಸ್ತಾಪವನ್ನು ತಳ್ಳಿ ಹಾಕುವಂತಿಲ್ಲ ಎಂದಿದ್ದಾರೆ. ಮಾತು ಮುಂದುವರಿಸಿದ ಅವರು ಆಸ್ಟನ್ ಮಾರ್ಟಿನ್ ಅದ್ಭುತ ಬ್ರಾಂಡ್ ಆಗಿದ್ದು, ಅಭಿವೃದ್ಧಿಗಾಗಿ ಇನ್ನಷ್ಟು ನೆರವಾಗುವ ಇರಾದೆ ವ್ಯಕ್ತಪಡಿಸಿದ್ದಾರೆ.

2013 ಡಿಸೆಂಬರ್‌ನಲ್ಲಿ ನಡೆದ ಒಪ್ಪಂದದಂತೆ ಆಸ್ಟನ್ ಮಾರ್ಟಿನ್‌ಗೆ ಬೆಂಝ್ ಹೊಸ ಎಂಜಿನ್‌ಗಳನ್ನು ಪೂರೈಕೆ ಮಾಡುತ್ತಿದೆ. ಇದರ ಪ್ರತಿಫಲವೆಂಬಂತೆ ಮುಂದಿನ ಜನಾಂಗದ ಆಸ್ಟನ್ ಮಾರ್ಟಿನ್ ವ್ಯಾಂಟೇಜ್ ಕಾರುಗಳು ಶಕ್ತಿಶಾಲಿ ಬೆಂಝ್ ಎಎಂಜಿ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

Mercedes-Benz
Most Read Articles

Kannada
English summary
Rumors about Mercedes-Benz considering an all out buyout of Aston Martin have been going on from even before the deal between the two automakers took root late last year.
Story first published: Thursday, March 20, 2014, 15:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X