1.48 ಕೋಟಿಯ ಬೆಂಝ್ ಎಂಎಲ್ 63 ಎಎಂಜಿ ಭರ್ಜರಿ ಲಾಂಚ್

Posted By:

ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಭಾರತದಲ್ಲಿ ಅತ್ಯಂತ ಶಕ್ತಿಶಾಲಿ ಎಲ್‌ಎಲ್ 63 ಎಎಂಜಿ ಕಾರನ್ನು ಲಾಂಚ್ ಮಾಡಿದೆ.

ದೆಹಲಿ ನಡೆದ ಸಮಾರಂಭದಲ್ಲಿ ಬೆಂಝ್ ಪವರ್‌ಫುಲ್ ಗಾಡಿ ದೇಶಕ್ಕೆ ಪರಿಚಯವಾಗಿದೆ. ಇದು 1.49 ಕೋಟಿ ರು.ಗಳಷ್ಟು ದುಬಾರಿಯಾಗಿದೆ. ಅಷ್ಟೇ ಅಲ್ಲದೆ ಬೆಂಗಳೂರು ಲಾಂಚ್ ಇಂದು ನೆರವೇರಲಿದೆ.

To Follow DriveSpark On Facebook, Click The Like Button
Mercedes Benz

ಇದನ್ನು ವಿಶಿಷ್ಟ ರೀತಿಯ ಎಎಂಜಿ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಈ ಐಷಾರಾಮಿ ಎಸ್‌ಯುವಿ ಕಾರಲ್ಲಿರುವ ಎಲ್‌ಇಡಿ ಡೇ ಟೈಮ್ ರನ್ನಿಂಗ್ ಹೆಡ್‌ಲೈಟ್ ಆಕರ್ಷಣೆಗೆ ಪಾತ್ರವಾಗಲಿದೆ.

ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಎಎಂಜಿ ಸ್ಪೋರ್ಟ್ಸ್ ಸೀಟು, ರಿಯರ್ ಸೀಟು ಬ್ಯಾಕ್ ರೆಸ್ಟ್ ಮುಂತಾದ ಹಲವಾರು ವೈಶಿಷ್ಟ್ಯಗಳು ದೊರಕಲಿದೆ.

ಅಂದ ಹಾಗೆ ಹಾಗೆ ಬೆಂಝ್ ಎಎಂಜಿ ಎಸ್‌ಯುವಿ 5461 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 550 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ 7 ಜಿ ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಇದು ಕೇವಲ 4.7 ಸೆಕೆಂಡುಗಳ್ಲಿಲ 0-100 ಕೀ.ಮೀ. ವೇಗವರ್ಧಿಸುವ ಅದೇ ರೀತಿ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಚಲಿಸಲಿದೆ. ಇದರಲ್ಲಿ ಐಚ್ಛಿಕ ಡ್ರೈವರ್ ಪ್ಯಾಕೇಜ್ ಆಳವಡಿಸಿದ್ದಲ್ಲಿ ಈ ವೇಗವು ಗಂಟೆಗೆ 280 ಕೀ.ಮೀ.ಗೆ ವರ್ಧಿಸಲಿದೆ.

English summary
Mercedes-Benz today launched the ML 63 AMG in an event in Delhi. The launch event was held at the new AMG Performance Center - the first of its kind in India that was simultaneously inaugurated.
Story first published: Friday, May 16, 2014, 12:29 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark