ನಿಸ್ಸಾನ್‌ಗೆ ತಲೆಬಾಗಿದ ಮಾರುತಿ; ರಫ್ತಿನಲ್ಲಿ ನಂ.2 ಸ್ಥಾನ

Written By:

ಭಾರತದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಿರಬಹುದು. ಆದರೆ ವಿದೇಶದಲ್ಲಿ ಬೇಡಿಕೆ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ.

ಹೌದು, ಪ್ರಯಾಣಿಕ ಕಾರುಗಳ ರಫ್ತು ವಹಿವಾಟಿನಲ್ಲಿ ಮಾರುತಿ ತನ್ನ ನಂ.2 ಸ್ಥಾನವನ್ನು ನಿಸ್ಸಾನ್‌ಗೆ ಬಿಟ್ಟುಕೊಟ್ಟಿದೆ. ಈ ಮೂಲಕ ಜಪಾನ್ ಮೂಲದ ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಉತ್ತಮ ಮಾರಾಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

To Follow DriveSpark On Facebook, Click The Like Button
nissan micra

ನಿಮಗೆಲ್ಲರಿಗೂ ತಿಳಿದಿರುವಂತೆಯೇ ರಫ್ತು ವಹಿವಾಟಿನಲ್ಲಿ ಹ್ಯುಂಡೈ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಇನ್ನು ನಿಸ್ಸಾನ್ ಬಗ್ಗೆ ಮಾತನಾಡುವುದ್ದಾದ್ದಲ್ಲಿ ಚೆನ್ನೈ ಓರಗಡಂನಲ್ಲಿ ಘಟಕ ಹೊಂದಿರುವ ನಿಸ್ಸಾನ್, ಮೈಕ್ರಾ ಹ್ಯಾಚ್‌ಬ್ಯಾಕ್ ಮತ್ತು ಸನ್ನಿ ಸೆಡಾನ್ ಕಾರುಗಳನ್ನು ಯುರೋಪ್, ಆಫ್ರಿಕಾ ಮತ್ತು ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ. ನೂತನ ರಫ್ತು ನಿಯಮ ಮಾರುತಿ ಮೇಲೆ ಕೆಟ್ಟ ಪರಿಣಾಮ ಬೀರುವಂತಾಗಿದೆ.

2013 ಎಪ್ರಿಲ್‌ನಿಂದ 2014 ಜನವರಿ ಅವಧಿಯಲ್ಲಿ ಅಂದರೆ ಈ ಆರ್ಥಿಕ ಸಾಲಿನ ಮೊದಲ ಹತ್ತು ತಿಂಗಳಲ್ಲಿ ನಿಸ್ಸಾನ್ 94,931 ಯುನಿಟ್‌ಗಳನ್ನು ರಫ್ತು ಮಾಡಿವೆ. ಇದೇ ಸಂದರ್ಭದಲ್ಲಿ ಮಾರುತಿ 79,945 ಯುನಿಟ್‌ಗಳನ್ನಷ್ಟೇ ಮಾರಾಟ ಮಾಡಿವೆ. ಇನ್ನು ಈ ಅಂಕಿಅಂಶಗಳನ್ನು ಕಳೆದ ಬಾರಿಗೆ ಹೋಲಿಸಿದರೆ ಕಳೆದ ವರ್ಷ ಮಾರುತಿ 95,526 ಯುನಿಟ್ ಹಾಗೂ ನಿಸ್ಸಾನ್ 80,867 ಯುನಿಟ್‌ಗಳನ್ನು ರಫ್ತು ಮಾಡಿದ್ದವು.

ಹಾಗಿದ್ದರೂ ಒಟ್ಟಾರೆ ರಫ್ತು ವಹಿವಾಟು ಶೇಕಡಾ 7ರಷ್ಟು ವೃದ್ಧಿ ಸಾಧಿಸಿದೆ. ಅಂದರೆ ಒಟ್ಟು 4,91,882 ಯುನಿಟ್ ರಫ್ತು ಮಾಡಲಾಗಿದೆ. ಈ ಪೈಕಿ ಕಾರು ರಫ್ತು 460711 ಯುನಿಟ್‌ಗಳಾಗಿದ್ದವು. ಅಗ್ರಸ್ಥಾನದಲ್ಲಿರುವ ಹ್ಯುಂಡೈ 2.04 ಲಕ್ಷ ಯುನಿಟ್‌ಗಳನ್ನು ರಫ್ತು ಮಾಡಿವೆ.

Story first published: Thursday, February 13, 2014, 16:02 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark