ಡಸ್ಟರ್, ಟೆರನೊ ಎಸ್‌ಯುವಿಗಳಿಗೂ ಆಕರ್ಷಕ ಆಫರ್
ಹ್ಯಾಚ್‌ಬ್ಯಾಕ್, ಸೆಡಾನ್ ಕಾರುಗಳಾಯ್ತು. ಇದೀಗ ಕ್ರೀಡಾ ಬಳಕೆಯ ವಾಹನಗಳ ಸರದಿ. ಹೌದು, ದೇಶದ ಮಾರುಕಟ್ಟೆಯಲ್ಲಿ ಗಮನಾರ್ಹ ಮಾರಾಟ ಸಾಧಿಸಿರುವ ರೆನೊ ಡಸ್ಟರ್ ಹಾಗೂ ನಿಸ್ಸಾನ್ ಟೆರನೊ ಎಸ್‌ಯುವಿಗಳಿಗೆ ಆಕರ್ಷಕ ಆಫರ್ ಮುಂದಿಡಲಾಗಿದೆ.
ರೆನೊ ಡಸ್ಟರ್ ರಿ ಬ್ಯಾಡ್ಜ್ ಪ್ರೀಮಿಯಂ ಅವತಾರವಾಗಿರುವ ನಿಸ್ಸಾನ್ ಟೆರನೊ ಆವೃತ್ತಿಗೂ ಆಫರ್ ನೀಡುತ್ತಿರುವುದು ವಾಹನ ಪ್ರೇಮಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.

ಮಾರಾಟ ಇಳಿಕೆ ಕಂಡಾಗ ಅದನ್ನು ಉತ್ತೇಜಿಸಲು ಆಕರ್ಷಕ ಕೊಡುಗೆ ನೀಡುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ಪ್ರಕ್ರಿಯೆ. ಇದರಂತೆ ಮುಂಗಾರು ಮಳೆ ಅವಧಿಯಲ್ಲಿ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ಎಕ್ಸ್‌ಚೇಂಜ್ ಬೋನಸ್ ಹಾಗೂ ಉಚಿತ ವಿಮಾ ಸೌಲಭ್ಯ ನೀಡಲಾಗುತ್ತಿದೆ.
ಇದಕ್ಕೂ ಮೊದಲು ಟಾಟಾ ಮೋಟಾರ್ಸ್, ಮಾರುತಿ ಸುಜುಕಿ ಹಾಗೂ ಮಹೀಂದ್ರ ಆಂಡ್ ಮಹೀಂದ್ರಗಳಂತಹ ಅಗ್ರ ಸಂಸ್ಥೆಗಳು ಸಹ ಆಕರ್ಷಕ ಆಫರ್‌ಗಳೊಂದಿಗೆ ಮುಂದೆ ಬಂದಿತ್ತು.

ಇನ್ನೊಂದೆಡೆ ಅಬಕಾರಿ ಸುಂಕ ರಿಯಾಯಿತಿ ನೀತಿಯನ್ನು ಡಿಸೆಂಬರ್ ವರೆಗೂ ಮುಂದುವರಿಸಲು ನೂತನ ಸರಕಾರ ನಿರ್ಧಾರ ಕೈಗೊಂಡಿರುವುದು ಸಹ ಮುಂದಿನ ದಿನಗಳಲ್ಲಿ ವಾಹನ ಮಾರಾಟಕ್ಕೆ ಉತ್ತೇಜನ ನೀಡುವ ನಿರೀಕ್ಷೆಯಿದೆ.


Click it and Unblock the Notifications








