ಭಾರತಕ್ಕೆ ಲೊಡ್ಜಿ ಎಂಪಿವಿ ಪರಿಚಯಿಸಲು ರೆನೊ ಯೋಜನೆ

Written By:

ಭಾರತ ವಾಹನ ಮಾರುಕಟ್ಟೆಯಲ್ಲಿ ಬಹು ಬಳಕೆಯ ವಾಹನಗಳಿಗೂ (ಎಂಪಿವಿ) ನಿಧಾನವಾಗಿ ಬೇಡಿಕೆ ಜಾಸ್ತಿಯಾಗುತ್ತಲೇ ಇದೆ. ಈ ಪೈಕಿ ಮಾರುತಿ ಸುಜುಕಿ ಎರ್ಟಿಗಾ ಈಗಾಗಲೇ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದರೆ ಇನ್ನಷ್ಟೇ ಆಗಮನವಾಗಲಿರುವ ಹೋಂಡಾ ಮೊಬಿಲಿಯೊ ಮತ್ತು ದಟ್ಸನ್ ಗೊ ಪ್ಲಸ್ ಆಗಮನದೊಂದಿಗೆ ಇನ್ನಷ್ಟು ನಿಕಟ ಪೈಪೋಟಿ ಸೃಷ್ಟಿಯಾಗುವ ಸಾಧ್ಯತೆಯಿದೆ.

ಈ ಪಟ್ಟಿಗೀಗ ಲೊಡ್ಜಿ ಎಂಪಿವಿ ಹೊಸ ಸೇರ್ಪಡೆಯಾಗಲಿದೆ. ಹೌದು, ಇಂತಹದೊಂದು ಯೋಜನೆಯನ್ನು ಫ್ರಾನ್ಸ್‌ ಮೂಲದ ರೆನೊ ಇಂಡಿಯಾ ಸಂಸ್ಥೆ ಹೊಂದಿದೆ.

To Follow DriveSpark On Facebook, Click The Like Button

ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಡಸ್ಟರ್ ಎಸ್‌ಯುವಿ ಆಗಮನದೊಂದಿಗೆ ದೇಶದ ಮಾರುಕಟ್ಟೆಯಲ್ಲಿ ತಮ್ಮ ಅದೃಷ್ಟವನ್ನೇ ಬದಲಾಯಿಸಿಕೊಂಡಿರುವ ರೆನೊ ಇನ್ನಷ್ಟು ಆಧುನಿಕ ಮಾದರಿಗಳೊಂದಿಗೆ ದೇಶದಲ್ಲಿ ಭದ್ರ ನೆಲೆ ಸ್ಥಾಪಿಸುವ ಯೋಜನೆ ಹೊಂದಿದೆ.

ಈಗಾಗಲೇ ಚೆನ್ನೈ ಸಹಿತ ಇನ್ನಿತರ ನಗರಗಳಲ್ಲಿ ಟೆಸ್ಟಿಂಗ್ ವೇಳೆ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿರುವ ಲೊಡ್ಜಿ ಎಂಪಿವಿ ತನ್ನದೇ ಆದ ವಿಶಿಷ್ಟ ಲುಕ್ ಹೊಂದಿದೆ. ಇದು ಚೆನ್ನೈನ ಓರಗಡಂ ಘಟಕದಲ್ಲಿ ಉತ್ಪಾದನೆಯಾಗಲಿದೆ.

Renault India

ಇದರ 1.5 ಲೀಟರ್ ಡೀಸೆಲ್ ಮಾದರಿ ಎರಡು ಎಂಜಿನ್ ಟ್ಯೂನ್‌ಗಳಲ್ಲಿ ಲಭ್ಯವಾಗಲಿದೆ. ಇದು 83 ಹಾಗೂ 108 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಅಂತೆಯೇ 5 ಹಾಗೂ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಇರಲಿದೆ. ಹಾಗಿದ್ದರೂ ಪೆಟ್ರೋಲ್ ಮಾದರಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಲ್ಲ.

8ರಿಂದ 10 ಲಕ್ಷ ರು.ಗಳ ಅಸುಪಾಸಿನಲ್ಲಿರುವ ಹೊಸ ಲೊಡ್ಜಿ ಮಾದರಿಯು ಪ್ರಮುಖವಾಗಿಯೂ ಮಾರುತಿ ಎರ್ಟಿಗಾ, ನಿಸ್ಸಾನ್ ಇವಾಲಿಯಾ, ಷೆವರ್ಲೆ ಎಂಜಾಯ್ ಹಾಗೂ ಇನ್ನಷ್ಟೇ ಆಗಮನವಾಗಲಿರುವ ಹೋಂಡಾ ಮೊಬಿಲಿಯೊ ಮತ್ತು ದಟ್ಸನ್ ಗೊ ಪ್ಲಸ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

English summary
The MPV segment in India is heating up fast with two new launches on the way. Honda will be launching its Mobilio first on 23rd July. Japanese car maker Datsun will be coming a little later with its GO+ MPV. The current segment leader is Maruti Suzuki's Ertiga MPV, which has been the choice of many.
Story first published: Saturday, July 12, 2014, 15:00 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark