ಭಾರತಕ್ಕೂ ಬರುತ್ತಂತೆ ರೆನೊ ಟ್ರಾಫಿಕ್ ವ್ಯಾನ್

By Nagaraja

ಬೆಳೆದು ಬರುತ್ತಿರುವ ಭಾರತ ವಾಣಿಜ್ಯ ಮಾರುಕಟ್ಟೆಯಲ್ಲಿ ವ್ಯಾನ್‌ಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಈ ನಡುವೆ ಫ್ರಾನ್ಸ್ ಮೂಲದ ವಾಹನ ತಯಾರಕ ಸಂಸ್ಥೆಯಾದ ರೆನೊ, ನೂತನ ಟ್ರಾಫಿಕ್ (Trafic) ವ್ಯಾನ್ ಅನ್ನು ಅನಾವರಣಗೊಳಿಸಿದ್ದು, ಸದ್ಯದಲ್ಲೇ ಬಿಡುಗಡೆಗೊಳಿಸಲಿದೆ.\

ಇನ್ನಷ್ಟು ರೆನೊ ಸುದ್ದಿಗಳನ್ನು ಓದಿರಿ

ವರದಿಗಳ ಪ್ರಕಾರ, ರೆನೊ ಟ್ರಾಫಿಕ್ ವ್ಯಾನ್ ನಿಕಟ ಭವಿಷ್ಯದಲ್ಲೇ ಭಾರತ ಮಾರುಕಟ್ಟೆಗೂ ಪ್ರವೇಶಿಸಲಿದೆ. ಇದು ದೇಶದ ಗ್ರಾಹಕರ ಪಾಲಿಗೆ ಅತ್ಯುತ್ತಮ ಚಾಲನಾ ಅನುಭವ ನೀಡಲಿದೆ. ಅಷ್ಟಕ್ಕೂ ರೆನೊ ಟ್ರಾಫಿಕ್‌ನಲ್ಲಿರುವ ವೈಶಿಷ್ಟ್ಯಗಳೇನು? ವಿವರಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಭಾರತಕ್ಕೂ ಬರುತ್ತಂತೆ ರೆನೊ ಟ್ರಾಫಿಕ್ ವ್ಯಾನ್

ಇದೀಗ ಮೂರನೇ ಜನಾಂಗದ ಟ್ರಾಫಿಕ್ ವ್ಯಾನ್ ಅನ್ನು ಅನಾವರಣಗೊಳಿಸಲಾಗಿದೆ. ಇದು ಜಾಗತಿಕ ಮಾರುಕಟ್ಟೆಗಳಲ್ಲಿ ಫೋಕ್ಸ್‌ವ್ಯಾಗನ್ ಹಾಗೂ ಫೋರ್ಡ್ ಆವೃತ್ತಿಗಳಿಗೆ ಪೈಪೋಟಿ ನೀಡಲಿದೆ.

ಭಾರತಕ್ಕೂ ಬರುತ್ತಂತೆ ರೆನೊ ಟ್ರಾಫಿಕ್ ವ್ಯಾನ್

2014 ರೆನೊ ಟ್ರಾಫಿಕ್ ಹೊಚ್ಚ ಹೊಸತಾದ ವಿನ್ಯಾಸ ಪಡೆದುಕೊಳ್ಳಲಿದ್ದು, ದಿಟ್ಟ ಹಾಗೂ ವ್ಯಾಪಕವಾದ ಲುಕ್ ಪಡೆದುಕೊಂಡಿದೆ. ಅತ್ಯುತ್ತಮ ನೋಟಕ್ಕಾಗಿ ಹೆಡ್‌ಲೈಟ್ ಹಾಗೂ ವಿಂಡ್‌ಸ್ಕ್ರೀನ್ ಪರಿಷ್ಕೃತಗೊಳಿಸಲಾಗಿದೆ.

ಭಾರತಕ್ಕೂ ಬರುತ್ತಂತೆ ರೆನೊ ಟ್ರಾಫಿಕ್ ವ್ಯಾನ್

ಅಂದ ಹಾಗೆ ರೆನೊ ಟ್ರಾಫಿಕ್ ವ್ಯಾನ್‌ನಲ್ಲಿ, 1.6 ಡಿಸಿಐ ಎಂಜಿನ್ ಆಳವಡಿಸಲಾಗಿದೆ. ಈ ನೂತನ ಎಂಜಿನ್ ಅತ್ಯುತ್ತಮ ಇಂಧನ ಕ್ಷಮತೆ ನೀಡಲು ಯಶಸ್ವಿಯಾಗಲಿದೆ.

ಭಾರತಕ್ಕೂ ಬರುತ್ತಂತೆ ರೆನೊ ಟ್ರಾಫಿಕ್ ವ್ಯಾನ್

ಒಟ್ಟು ಎರಡು ಆಯ್ಕೆಗಳಲ್ಲಿ ಎಂಜಿನ್ ಲಭ್ಯವಿರಲಿದೆ. ಮೊದಲನೆಯದ್ದು ಸಿಂಗಲ್ ವೆರಿಯಬಲ್ ಜಿಯೋಮೆಟ್ರಿ ಟರ್ಬೊ ಆಗಿದ್ದು ಶೇಕಡಾ 15ರಷ್ಟು ಹೆಚ್ಚು ಇಂಧನ ಕ್ಷಮತೆ ನೀಡಲಿದೆ. ಹಾಗೆಯೇ ಟ್ವಿನ್ ಟರ್ಬೊ ಎಂಜಿನ್ ಆಯ್ಕೆಯು ಇನ್ನು ಹೆಚ್ಚು ಇಂಧನ ದಕ್ಷತೆ ಹೊಂದಿರಲಿದೆ.

ಭಾರತಕ್ಕೂ ಬರುತ್ತಂತೆ ರೆನೊ ಟ್ರಾಫಿಕ್ ವ್ಯಾನ್

ಇನ್ನು ಗ್ರಾಹಕರ ಅಗತ್ಯಗಳಿಗಾನುಸಾರವಾಗಿ ರೆನೊ ಟ್ರಾಫಿಕ್ ವ್ಯಾನ್ ಕಸ್ಟಮೈಸ್ಡ್ ಮಾಡುವ ಅವಕಾಶವು ಇರಲಿದೆ. ಸಂಸ್ಥೆಯ ಪ್ರಕಾರ ಇಲ್ಲಿ 270ರಷ್ಟು ಕಸ್ಟಮೈಸ್ಡ್ ಆಯ್ಕೆಯಿರುತ್ತದೆ.

ಭಾರತಕ್ಕೂ ಬರುತ್ತಂತೆ ರೆನೊ ಟ್ರಾಫಿಕ್ ವ್ಯಾನ್

ಫ್ರಾನ್ಸ್‌ನಲ್ಲಿ ನಿರ್ಮಾಣವಾಗಲಿರುವ ರೆನೊ ಟ್ರಾಫಿಕ್, ಜಾಗತಿಕವಾಗಿ 50 ರಾಷ್ಟ್ರಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಆದರೆ ಭಾರತದಲ್ಲೂ ಸ್ಥಳೀಯವಾಗಿ ನಿರ್ಮಿಸಲಾಗುವುದೇ ಎಂಬುದು ತಿಳಿದು ಬಂದಿಲ್ಲ. ಈ ಎಲ್ಲ ವಿಚಾರಗಳಿಗೆ ಮುಂಬರುವ ದಿನಗಳಲ್ಲಿ ಉತ್ತರ ಲಭಿಸಲಿದೆ.

Most Read Articles

Kannada
English summary
Renault has been giving its customers great looking car, this time they will be offering a new van called Trafic.
Story first published: Wednesday, March 19, 2014, 10:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X