ಗುಜರಾತ್ ನ್ಯಾನೋ ಘಟಕಕ್ಕೆ ಬೀಗ ಜಡಿದ ಟಾಟಾ ?

Written By:

ಇತ್ತೀಚೆಗಷ್ಟೇ ನ್ಯಾನೋ ಟ್ವಿಸ್ಟ್ ಆವೃತ್ತಿಯನ್ನು ಟಾಟಾ ಮೋಟಾರ್ಸ್ ಬಿಡುಗಡೆಗೊಳಿಸಿತ್ತು. ಆದರೆ ಇದೀಗ ಅಚ್ಚರಿಗೊಳಿಸುವ ವಿಚಾರದಲ್ಲಿ ಈ ಹ್ಯಾಚ್‌ಬ್ಯಾಕ್ ಕಾರಿನ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯು ನಿರ್ಧರಿಸಿದೆ.

ಗುಜರಾತ್‌ನಲ್ಲಿ ಸ್ಥಿತಗೊಂಡಿರುವ ಸನಂದ್ ಘಟಕದಲ್ಲಿನ ನ್ಯಾನೋ ಉತ್ಪಾದನೆಯನ್ನು ಸದ್ಯಕ್ಕೆ ನಿಲುಗಡೆಗೊಳಿಸಲಾಗುತ್ತಿದೆ. ಅಂದರೆ 30ರಿಂದ 40 ದಿನಗಳ ಕಾಲ ನ್ಯಾನೋ ಯೋಜನೆಯನ್ನು ಕೈಬಿಡಲಾಗುತ್ತದೆ.

To Follow DriveSpark On Facebook, Click The Like Button
Tata nano

ಬೇಡಿಕೆ ಕುಸಿದಿರುವುದೇ ನ್ಯಾನೋ ಯೋಜನೆಗೆ ಕತ್ತರಿ ಪ್ರಯೋಗ ಮಾಡಲು ಕಾರಣವಾಗಿದೆ. ದೇಶದ ಅತಿ ದೊಡ್ಡ ವಾಹನ ತಯಾರಕರ ಪ್ರಕಾರ, ನ್ಯಾನೋ ಸ್ಟೋಕ್ ಈಗಾಗಲೇ ಹೆಚ್ಚಿದೆ. ಅಲ್ಲದೆ ಮುಂಬರುವ ಹಬ್ಬದ ಆವೃತ್ತಿಗಾಗಿ ಹೊಸ ಕಾರಿನ ಉತ್ಪಾದನೆಯತ್ತ ಗಮನ ಕೇಂದ್ರಿಕರಿಸಬೇಕಾಗಿದೆ.

ಅಷ್ಟೇ ಅಲ್ಲದೆ ಸನಂದ್ ಘಟಕವನ್ನು ಪರಿಷ್ಕೃತಗೊಳಿಸಲಾಗುತ್ತಿದ್ದು, ಹೊಸ ಕೈಟ್ ಸಣ್ಣ ಕಾರು, ಕಾಂಪಾಕ್ಟ್ ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ಕಾರುಗಳು ಇದೇ ಘಟಕದಲ್ಲಿ ನಿರ್ಮಾಣವಾಗುವ ಸಾಧ್ಯತೆಯಿದೆ.

ಟಾಟಾ ವಕ್ತಾರ ಪ್ರಕಾರ, ವಾರ್ಷಿಕ ನೀತಿಯ ವಾಡಿಕೆ ಪ್ರಕಾರ ಸನಂದ್ ಘಟಕವನ್ನು ಅಪ್‌ಗ್ರೇಡ್ ಮಾಡಲಾಗುತ್ತಿದ್ದು, ನಿರ್ವಹಣೆ ಕಾರ್ಯ ನಿಮಿತ್ತ 3ರಿಂದ 6 ವಾರಗಳ ಕಾಲ ನಿರ್ಮಾಣ ಸ್ಥಿಗತಿಗೊಳಿಸಲಾಗುತ್ತಿದೆ ಎಂದಿದ್ದಾರೆ.

English summary
Tata Motors has recently launched the updated and refreshed Nano Twist in India. They have done an excellent job of repositioning the hatchback as a smart city car.
Story first published: Saturday, June 14, 2014, 9:55 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark