ನೀವು ಏಕೆ ಡೀಸೆಲ್ ಕಾರು ಖರೀದಿಸಬೇಕು?

Written By:

ಡೀಸೆಲ್ ಕಾರು ಕೊಳ್ಳಬೇಕೇ ಅಥವಾ ಪೆಟ್ರೋಲ್ ಕಾರು ಅತ್ಯುತ್ತಮವೇ? ಇಂತಹದೊಂದು ಪ್ರಶ್ನೆ ಸಾಮಾನ್ಯ ಗ್ರಾಹಕರನ್ನು ಸದಾ ಕಾಡುತ್ತಲೇ ಇದೆ. ಇದು ಇಂದು ನಿನ್ನೆಯಿಂದ ಆರಂಭವಾದ ಪ್ರಶ್ನೆಯಲ್ಲ. ಮಾರುಕಟ್ಟೆಯಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಕಾರುಗಳು ಸದಾ ಪೈಪೋಟಿ ನಡೆಸುತ್ತಲೇ ಇದೆ.

ಈ ಸಂಬಂಧ ಈಗಾಗಲೇ ನಾವೊಂದು ಲೇಖನವನ್ನು ಪ್ರಕಟಿಸಿರುತ್ತೇವೆ [ಪೆಟ್ರೋಲ್‌ಗಿಂತ ಡೀಸೆಲ್ ಕಾರು ಯಾಕೆ ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ]. ಇದಕ್ಕೆ ಪೂರಕವಾಗಿ ಹೆಚ್ಚುವರಿ ಮಾಹಿತಿ ಒದಗಿಸುವ ಪ್ರಯತ್ನವನ್ನು ಈ ಲೇಖನದ ಮೂಲಕ ಮಾಡಲಿದ್ದೇವೆ.

ಭಾರತದಲ್ಲಿ ಸಮಕಾಲೀನ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಇಂಧನಗಳ ಬೆಲೆ ಬಹುತೇಕ ಸಮಾನವಾಗಿದೆ. ಹಾಗಾಗಿ ಯಾವ ಕಾರು ಖರೀದಿಸಿದ್ದರೇನು? ಎಂಬ ಭಾವನೆ ನಿಮ್ಮಲ್ಲಿ ಉಂಟಾಗಬಹುದು. ಆದರೆ ನಿಜಕ್ಕೂ ಡೀಸೆಲ್ ಕಾರು ಖರೀದಿ ಉತ್ತಮವೇ? ಉತ್ತರಕ್ಕಾಗಿ ಸ್ಲೈಡ್‌ನತ್ತ ಮುಂದುವರಿಯಿರಿ...

To Follow DriveSpark On Facebook, Click The Like Button
ನೀವು ಏಕೆ ಡೀಸೆಲ್ ಕಾರು ಖರೀದಿಸಬೇಕು?

ಸದ್ಯ ಯುರೋಪ್ ಮಾರುಕಟ್ಟೆಯಲ್ಲೂ ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಒಮ್ಮೆ ಹೂಡಿಕೆ ಮಾಡಿದರೆ ಗ್ರಾಹಕರಿಗೆ ದೀರ್ಘ ಬಾಳ್ವಿಕೆ, ಮೈಲೇಜ್ ಮುಂತಾದ ಸೌಲಭ್ಯಗಳು ಲಭಿಸಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಶಕ್ತಿಶಾಲಿ ಡೀಸೆಲ್ ಕಾರು

ಶಕ್ತಿಶಾಲಿ ಡೀಸೆಲ್ ಕಾರು

ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಡೀಸೆಲ್ ಕಾರುಗಳು ಜಾಸ್ತಿ ಟಾರ್ಕ್ ಉತ್ಪಾದಿಸುತ್ತದೆ. ಇದು ತ್ವರಿತ ವೇಗವರ್ಧನೆಗೆ ಸಹಕಾರಿಯಾಗಲಿದೆ. ಇದು ನಿಮ್ಮ ಓವರ್‌ಟೇಕ್ ಕೌಶಲ್ಯವನ್ನು ವೃದ್ಧಿಸಲಿದೆ. ಹಾಗೆಯೇ ಟ್ರಾಫಿಕ್ ಸಿಗ್ನಲ್ ಮುಂತಾದ ಒತ್ತಡ ಪರಿಸ್ಥಿತಿಯಲ್ಲಿ ಬಹುಬೇಗನೇ ಮುಂದಕ್ಕೆ ಸಾಗಲು ಸಹಕಾರಿಯಾಗಲಿದೆ. ಒಟ್ಟಿನಲ್ಲಿ ಸುಲಭ ಚಾಲನೆಗೆ ನೆರವಾಗಲಿದೆ.

ಮೈಲೇಜ್ ಜಾಸ್ತಿ

ಮೈಲೇಜ್ ಜಾಸ್ತಿ

ಪೆಟ್ರೋಲ್ ಕಾರಿಗಿಂತಲೂ ಡೀಸೆಲ್ ಕಾರುಗಳು ದುಬಾರಿಯೆನಿಸಿದರೂ ಜಾಸ್ತಿ ಮೈಲೇಜ್ ನೀಡುವುದರಿಂದ ನಿಮ್ಮಲ್ಲಿ ಸಂತಸಕ್ಕೆ ಕಾರಣವಾಗಲಿದೆ. ವಿಶ್ಲೇಷಕರ ಪ್ರಕಾರ ಪೆಟ್ರೋಲ್ ಮಾದರಿಗಿಂತಲೂ ಡೀಸೆಲ್ ಕಾರುಗಳು ಶೇಕಡಾ 20ರಿಂದ 30ರಷ್ಟು ಜಾಸ್ತಿ ಮೈಲೇಜ್ ನೀಡಲಿದೆ. ಇದು ನಿಮ್ಮ ದೂರ ಪ್ರಯಾಣವನ್ನು ಉಲ್ಲಾಸದಾಯಕವಾಗಿಸಲಿದೆ.

ಪರಿಸರ ಮಾಲಿನ್ಯ ಕಡಿಮೆ

ಪರಿಸರ ಮಾಲಿನ್ಯ ಕಡಿಮೆ

ಇನ್ನು ವಾಹನಗಳು ಹೊರಸೂಸುವ ದಹನಕಾರಿ ಹೊಗೆಯನ್ನು ಪರಿಗಣಿಸಿದಾಗಲೂ ಡೀಸೆಲ್ ಕಾರುಗಳು ಒಂದು ಕೈ ಮೇಲೆ ಎತ್ತಿದಂತಿದೆ. ಇದು ಕಡಿಮೆ ಪರಸರ ಮಾಲಿನ್ಯವನ್ನುಂಟು ಮಾಡುತ್ತದೆ. ಇನ್ನು ಯುರೋಪ್ ಮಾರುಕಟ್ಟೆಯಲ್ಲಿ ಪೆಟ್ರೋಲ್ ಕಾರುಗಳಿಗೆ (ಶೇಕಡಾ 44) ಹೋಲಿಸಿದರೆ ಶೇಕಡಾ 55ರಷ್ಟು ಡೀಸೆಲ್ ಕಾರುಗಳು ಮಾರಾಟವಾಗುತ್ತಿದೆ.

ಎಂಜಿನ್ ಶಬ್ದ ಕಡಿಮೆ

ಎಂಜಿನ್ ಶಬ್ದ ಕಡಿಮೆ

ಹಿಂದೆ ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಡೀಸೆಲ್ ಕಾರುಗಳ ಕ್ಯಾಬಿನ್ ನಾಯ್ಸ್ ತುಂಬಾನೇ ಜಾಸ್ತಿಯೆಂಬ ಆರೋಪವಿತ್ತು. ಆದರೆ ತಂತ್ರಗಾರಿಕೆ ಅಭಿವೃದ್ಧಿಯಾದಂತೆ ಇದರ ಪ್ರಮಾಣದಲ್ಲಿ ಸಾಕಷ್ಟು ವ್ಯತ್ಯಾಸವುಂಟಾಗಿದೆ. ಪ್ರಸ್ತುತ ಎಂಜಿನ್ ನಾಯ್ಸ್ ಹಾಗೂ ವೈಬ್ರೇಷನ್ ವಿಷಯದಲ್ಲಿ ಡೀಸೆಲ್ ಕಾರುಗಳು ಸಹ ಪೆಟ್ರೋಲ್ ಕಾರುಗಳಿಗೆ ಸಮಾನವೆನಿಸಿದೆ.

ಮರು ಮಾರಾಟ ಮೌಲ್ಯ ಜಾಸ್ತಿ

ಮರು ಮಾರಾಟ ಮೌಲ್ಯ ಜಾಸ್ತಿ

ಈ ಮೊದಲೇ ತಿಳಿಸಿರುವಂತೆಯೇ ಪೆಟ್ರೋಲ್‌ಗಿಂತಲೂ ಡೀಸೆಲ್ ಕಾರುಗಳ ಮರು ಮಾರಾಟ ಮೌಲ್ಯ ಜಾಸ್ತಿಯಾಗಿದೆ. ವರದಿಯ ಪ್ರಕಾರ ಪೆಟ್ರೋಲ್ ಕಾರುಗಳ ಮರು ಮಾರಾಟ ಮೌಲ್ಯ ಶೇಕಡಾ 44ರಷ್ಟಿದ್ದರೆ ಡೀಸೆಲ್ ಕಾರುಗಳು ಸ್ಪಷ್ಟ ಮುನ್ನಡೆಯನ್ನು (ಶೇಕಡಾ 50ರಷ್ಟು) ಕಾಯ್ದುಕೊಂಡಿದೆ.

ಎಂಜಿನ್ ಬಾಳ್ವಿಕೆ

ಎಂಜಿನ್ ಬಾಳ್ವಿಕೆ

ಇನ್ನು ಎಂಜಿನ್ ಬಾಳ್ವಿಕ್ ವಿಚಾರದಲ್ಲೂ ಪೆಟ್ರೋಲ್ ಕಾರುಗಳನ್ನು ಡೀಸೆಲ್ ಮಾದರಿಗಳು ಮೀರಿ ನಿಂತಿದೆ. ಆದರೆ ಸಮಯಕ್ಕೆ ಸರಿಯಾಗಿ ನಿರ್ವಹಣೆಯನ್ನು ಕಾಯ್ದುಕೊಳ್ಳುವುದು ಅತಿ ಮುಖ್ಯವೆನಿಸುತ್ತದೆ. ಸಾಮಾನ್ಯವಾಗಿ ಪೆಟ್ರೋಲ್ ಕಾರುಗಳ ಬಾಳ್ವಿಕೆ 1.5 ಲಕ್ಷ ಕೀ.ಮೀ. ಆಗಿದ್ದರೆ ಸರಿಯಾಗಿ ನಿರ್ವಹಣೆ ಕಾಯ್ದುಕೊಂಡ ಡೀಸೆಲ್ ಕಾರುಗಳು 2ರಿಂದ 2.5 ಲಕ್ಷ ಕೀ.ಮೀ. ವರೆಗೂ ಬಾಳ್ವಿಕೆ ಬರುತ್ತದೆ.

ಬಂಡವಾಳ ಹೆಚ್ಚು

ಬಂಡವಾಳ ಹೆಚ್ಚು

ಒಟ್ಟಿನಲ್ಲಿ ಡೀಸೆಲ್ ಕಾರು ಖರೀದಿಗೆ ಪೆಟ್ರೋಲ್‌ಗಿಂತಲೂ ಜಾಸ್ತಿ ಬಂಡವಾಳ ಹೂಡಬೇಕು ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ ಜಾಸ್ತಿ ಹೆಚ್ಚು ಮೈಲೇಜ್, ಎಂಜಿನ್ ಬಾಳ್ವಿಕೆ, ಮರು ಮಾರಾಟ ಮೌಲ್ಯ ಎಂಬಿತ್ಯಾದಿ ವಿಚಾರಗಳನ್ನು ಗಮನಿಸಿದಾಗ ಪೆಟ್ರೋಲ್‌ಗಿಂತಲೂ ಡೀಸೆಲ್ ಕಾರುಗಳು ಒಂದು ಹೆಜ್ಜೆ ಮುಂದೆ ನಿಂತಿದೆ.

English summary
Diesel cars are rapidly increasing across the world. In fact, diesel cars are now outselling the petrol cars. Here are top 6 reasons why you should buy a Diesel car.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark