2.5 ಲೀಟರ್ ಎಂಜಿನ್‌ನೊಂದಿಗೆ ಆಗಮನವಾಗಲಿರುವ ಫಾರ್ಚ್ಯುನರ್

Written By:

ಕೆಲವು ದಿನಗಳ ಹಿಂದೆಯಷ್ಟೇ ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಟೊಯೊಟಾ, ತನ್ನ ಜನಪ್ರಿಯ ಫಾರ್ಚ್ಯುನರ್ ಮಾದರಿಯಲ್ಲಿ ಹೊಸತಾದ 2.5 ಡೀಸೆಲ್ ಎಂಜಿನ್ ಪರಿಚಯಿಸುವ ಬಗ್ಗೆ ಮಾಹಿತಿ ದೊರಕಿತ್ತು.

ಇದರ ಬೆನ್ನಲ್ಲೇ ಈ ಬಗ್ಗೆ ಇನ್ನಷ್ಟು ಪುಷ್ಠಿ ದೊರಕಿದ್ದು, ಅಕ್ಟೋಬರ್ ತಿಂಗಳ ಹಬ್ಬದ ಸಂಭ್ರಮದ ವೇಳೆಯಲ್ಲೇ ಫಾರ್ಚ್ಯುನರ್ 2.5 ಲೀಟರ್ ಡೀಸೆಲ್ ಎಂಜಿನ್ ವೆರಿಯಂಟ್ ಬಿಡುಗಡೆಯಾಗುವ ಸಾಧ್ಯತೆಯಿದೆ.

toyota fortuner

ವರದಿಗಳ ಪ್ರಕಾರ ಟೊಯೊಟಾ ಫಾರ್ಚ್ಯುನರ್ ಡೀಸೆಲ್ ವೆರಿಯಂಟ್ ಅಕ್ಟೋಬರ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು 142 ಅಶ್ವಶಕ್ತಿ ಉತ್ಪಾದಿಸಲಿದ್ದು, ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ಈ ಎರಡು ವೀಲ್ ಡ್ರೈವ್ ಆವೃತ್ತಿ ಈಗಿರುವ 3.0 ಲೀಟರ್ ಮಾದರಿಯ ಕೆಳಗಡೆ ಗುರುತಿಸಿಕೊಳ್ಳಲಿದೆ. ಇದರ ಜೊತೆಗೆ 3.0 ಲೀಟರ್ ಫೋರ್ ವೀಲ್ ಡ್ರೈವ್ ಆಟೋಮ್ಯಾಟಿಕ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಇದು ಫಾರ್ಚ್ಯುನರ್ ಟಾಪ್ ಎಂಡ್ ಮಾದರಿ ಎನಿಸಿಕೊಳ್ಳಲಿದೆ. ಹಾಗೆಯೇ 168 ಬಿಎಚ್‌ಪಿ ಉತ್ಪಾದಿಸಲಿದೆ.

English summary
Toyota to Introduce Fortuner 2.5-litre diesel engine
Story first published: Saturday, September 27, 2014, 14:26 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark