ಆಡಿಯಿಂದ ಬರಲಿದೆ ಎಂಟ್ರಿ ಲೆವೆಲ್ ಎಸ್‌ಯುವಿ

Written By:

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಆಡಿ ಎಂಟ್ರಿ ಲೆವೆಲ್ ಕ್ರೀಡಾ ಬಳಕೆಯ ವಾಹನವೊಂದನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಅದುವೇ ಕ್ಯೂ1. ಪ್ರಸ್ತುತ ಎಸ್ ಯುವಿ ಮುಂದಿನ ವರ್ಷ ಅಂದರೆ 2016ರಲ್ಲಿ ಜಾಗತಿಕವಾಗಿ ಅನಾವರಣಗೊಳ್ಳಲಿದೆ.

ಜಾಗತಿಕವಾಗಿ ಹಲವು ನೂತನ ಮಾದರಿಗಳನ್ನು ಪರಿಚಯಿಸುವುದರಲ್ಲಿ ಬದ್ಧವಾಗಿರುವ ಆಡಿ, ಈ ಮೂಲಕ ಸಾಮಾನ್ಯ ಶ್ರೀಮಂತ ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲಿದೆ. 2020ರ ವೇಳೆಯಾಗುವಾಗ 60ರಷ್ಟು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದು ಆಡಿ ಯೋಜನೆಯಾಗಿದೆ.

To Follow DriveSpark On Facebook, Click The Like Button
ಆಡಿ ಕ್ಯೂ1

ಆಡಿ ವಾಹನಗಳ ಪೈಕಿ ಅತಿ ಸಣ್ಣ ಕ್ರೀಡಾ ಬಳಕೆಯ ವಾಹನ ಇದಾಗಿರಲಿದೆ. ಪ್ರಸ್ತುತ ಭಾರತದಲ್ಲಿ ಆಡಿ ಕ್ಯೂ3, ಕ್ಯೂ5 ಹಾಗೂ ಕ್ಯೂ7 ಮಾದರಿಗಳು ಮಾರಾಟದಲ್ಲಿದೆ. ಇದಲ್ಲದೆ ಹೊಸ ಕಾರಿನ ಮುಖಾಂತರ ತನ್ನ ಬ್ರಾಂಡ್ ಮೌಲ್ಯವನ್ನು ವೃದ್ಧಿಸಿಕೊಳ್ಳುವ ಇರಾದೆಯನ್ನು ಸಂಸ್ಥೆ ಹೊಂದಿದೆ.

ಆಡಿ ಕ್ಯೂ1 ಸರಿ ಸುಮಾರು 24 ಲಕ್ಷ ರು.ಗಳ ಅಸುಪಾಸಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಅಂದರೆ ಈಗ ಮಾರಾಟದಲ್ಲಿರುವ ಎ4 ಮಾದರಿಗಿಂತಲೂ ಕಡಿಮೆ ಬೆಲೆಯಲ್ಲಿ ಗ್ರಾಹಕರನ್ನು ತಲುಪಲಿದೆ.

ಆಡಿ ಕ್ಯೂ1

ಇನ್ನು ಪೆಟ್ರೋಲ್, ಡೀಸೆಲ್ ಸೇರಿದಂತೆ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪರಿಚಯಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

English summary
Audi has planned to launch several new and interesting products in India. The German manufacturer will also be introducing several new products globally.
Story first published: Wednesday, May 27, 2015, 7:14 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark