ಬೆಂಟ್ಲಿ ಚೊಚ್ಚಲ ಎಸ್‌ಯುವಿ - ಬೆನ್‌ಟೈಗಾ

Written By:

ಉತ್ತರ ಅಮೆರಿಕದ ಸುಪ್ರಸಿದ್ಧ ಆಟೋ ಶೋ ಡೆಟ್ರಾಯ್ಟ್‌ ಆಟೋ ಶೋದಲ್ಲಿ ಬ್ರಿಟನ್ ಮೂಲದ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ತನ್ನ ಚೊಚ್ಚಲ ಕ್ರೀಡಾ ವಾಹನ ಬಳಕೆಯನ್ನು (ಎಸ್‌ಯುವಿ) ಪ್ರದರ್ಶನಕ್ಕಿರಿಸಿದೆ.

ವಿಶೇಷವೆಂದರೆ ಬೆಂಟ್ಲಿ ಹೊಸ ಎಸ್‌ಯುವಿ ಮೆಚ್ಚುಗೆಗೆ ಪಾತ್ರವಾಗಿದೆ. ಹೌದು, ಬೆಂಟ್ಲಿ ಚೊಚ್ಚಲ ಎಸ್‌ಯುವಿ ಬೆನ್‌ಟೈಗಾ ಎಂದು ಹೆಸರಿಸಿಕೊಳ್ಳಲಿದೆ. ಸಂಸ್ಥೆಯ ಸಂಸ್ಥಾಪಕ ಟೈಗಾ ಹೆಸರನ್ನೇ ಇದಕ್ಕಿರಿಸಲಾಗಿದೆ. ಅಷ್ಟೇ ಯಾಕೆ ಇದು ರಷ್ಯಾದಲ್ಲಿ ಸ್ಥಿತಗೊಂಡಿರುವ ವಿಶ್ವದ ಅತ್ಯಂತ ದೊಡ್ಡ ಹಿಮರಣ್ಯದ ಹೆಸರು ಕೂಡಾ ಆಗಿದೆ.

bentley bentyaga

ಅಷ್ಟೇ ಯಾಕೆ ಬಿಡುಗಡೆಗೆ ಮೊದಲೇ 4,000ಕ್ಕಿಂತಲೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿದೆ. ಇನ್ನು ತಾಂತ್ರಿಕತೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲದಿದ್ದರೂ 4 ಲೀಟರ್ ವಿ8 ಅಥವಾ 6 ಲೀಟರ್ ಡಬ್ಲ್ಯು12 ಎಂಜಿನ್ ಜೊತೆಗೆ ಆಗಮನವಾಗುವ ನಿರೀಕ್ಷೆಯಿದೆ. ಅಂತೆಯೇ ಪ್ಲಗ್ ಇನ್ ಹೈಬ್ರಿಡ್ ತಂತ್ರಜ್ಞಾನ ಆಳವಡಿಸುವ ಯೋಜನೆಯು ಪರಿಗಣನೆಯಲ್ಲಿದೆ.

ಒಟ್ಟಾರೆಯಾಗಿ ಮುಂಬರುವ ಫ್ರಾಂಕ್‌ಫರ್ಟ್ ಆಟೋ ಶೋದಲ್ಲೂ ಪ್ರದರ್ಶನ ಕಾಣಲಿರುವ ಬೆಂಟ್ಲಿ ಬೆನ್ ಟೈಗಾ ಎಸ್‌ಯುವಿ ಮುಂದಿನ ವರ್ಷ ಮಾರುಕಟ್ಟೆ ಪ್ರವೇಶಿಸಲಿದೆ.

English summary
Bentley’s First SUV Will Be Called Bentayga
Story first published: Tuesday, January 13, 2015, 9:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark