ಫೆಬ್ರವರಿಯಲ್ಲಿ ಬಿಎಂಡಬ್ಲ್ಯು ಹೈಬ್ರಿಡ್ ಸ್ಪೋರ್ಟ್ಸ್ ಕಾರು ಬಿಡುಗಡೆ

Written By:

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಮುಂದಿನ ತಿಂಗಳಲ್ಲಿ ಬಹುನಿರೀಕ್ಷಿತ ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈಗಾಗಲೇ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಎಲ್ಲ ಹಂತದಲ್ಲೂ ಭಾರತ ಪ್ರವೇಶಕ್ಕೆ ಸಜ್ಜಾಗಿ ನಿಂತಿದೆ.

ಕ್ರಿಕೆಟ್‌ನ ಜೀವಂತ ದಿಗ್ಗಜ ಹಾಗೂ ಭಾರತದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರ ದಿವ್ಯ ಹಸ್ತದಲ್ಲಿ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಅನಾವರಣಗೊಂಡಿದ್ದ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಮೋಟಾರುಗಳನ್ನು ಹೊಂದಿದೆ. ಇದರ ದು 1.5 ಲೀಟರ್ ಪೆಟ್ರೋಲ್ ಎಂಜಿನ್‌ 227.74 ಅಶ್ವಶಕ್ತಿ (320 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರು ಹೆಚ್ಚುವರಿ 129.15 ಅಶ್ವಶಕ್ತಿ (250 ತಿರುಗುಬಲ) ಉತ್ಪಾದಿಸಲು ನೆರವಾಗುತ್ತದೆ.

bmw i8

ಬಿಎಂಡಬ್ಲ್ಯು ಪ್ರಕಾರ ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಕೇವಲ 4.4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. (ವಿದ್ಯುನ್ಮಾನ ನಿಯಂತ್ರಣ) ವೇಗದಲ್ಲಿ ಸಂಚರಿಸಲಿದೆ. ಇನ್ನು ಸಂಪೂರ್ಣ ಎಲೆಕ್ಟ್ರಿಕ್ ಮೋಡ್‌ನಲ್ಲಿ ಗಂಟೆಗೆ ಗರಿಷ್ಠ 120 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಭಾರತ ಪ್ರವೇಶ ಪಡೆಯಲಿದ್ದು, ಎರಡು ಕೋಟಿ ರು.ಗಳಷ್ಟು ದುಬಾರಿಯೆನಿಸಲಿದೆ.

bmw i8

ಮೈಲೇಜ್ 40 ಕೀ.ಮೀ.

ಬಿಎಂಡಬ್ಲ್ಯು ಹೈಬ್ರಿಡ್ ಸೂಪರ್ ಕಾರಿನ ಮತ್ತೊಂದು ವೈಶಿಷ್ಟ್ಯವೆಂದರೆ ಇದು ಪ್ರತಿ ಲೀಟರ್‌ಗೆ 40 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಕಂಫರ್ಟ್, ಸ್ಪೋರ್ಟ್ ಹಾಗೂ ಇಕೊ ಪ್ರೊಗಳೆಂಬ ಡ್ರೈವಿಂಗ್ ಮೋಡ್‌ಗಳಿರುತ್ತದೆ. ಇದರಲ್ಲಿ ಬಳಸಲಾಗಿರುವ ಬಹುತೇಕ ಬಿಡಿಭಾಗಗಳನ್ನು ಮರು ಬಳಕೆ ಕೂಡಾ ಮಾಡಬಹುದಾಗಿದೆ. ಇವೆಲ್ಲವೂ ಬಿಎಂಡಬ್ಲ್ಯು ಐ8 ಹೈಬ್ರಿಡ್ ಕಾರನ್ನು ಸಂಪೂರ್ಣ ಪರಿಸರ ಸ್ನೇಹಿ ಎನಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ.

English summary
German luxury automobile manufacturer has stepped into the hybrid era of vehicles. BMW had showcased and launched its i8 hybrid plug-in vehicle in several countries. They promised to bring the sports hybrid to India as well.
Story first published: Friday, January 9, 2015, 7:58 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark