ಕಾರನ್ನೇ ಜಾಸ್ತಿ ಆಶ್ರಯಿಸಿಕೊಂಡಿರುವ ದೆಹಲಿ ನೌಕರರು!

By Nagaraja

ಯಾವತ್ತಾದರೂ ಯೋಚನೆ ಮಾಡಿ ನೋಡಿರುವೀರಾ ? ದೇಶದ ಪ್ರಮುಖ ನಗರಗಳ ಪೈಕಿ ಅತಿ ಹೆಚ್ಚು ಮಂದಿ ನೌಕರರು ಕಾರು, ವ್ಯಾನ್ ಅಥವಾ ಜೀಪ್ ನಲ್ಲಿ ಸಂಚರಿಸುವ ಪ್ರಮಾಣ ಎಲ್ಲಿ ಹೆಚ್ಚಿರಬಹುದು ? ಇದು ಅತಿ ಹೆಚ್ಚು ವಾಹನ ದಟ್ಟಣೆಯಿರುವ ನಮ್ಮ ಬೆಂಗಳೂರು ನಗರ ಅಲ್ಲ, ನರೆಯ ಚೆನ್ನೈ ಅಲ್ಲ, ವಾಣಿಜ್ಯ ನಗರಿ ಮುಂಬೈ ಕೂಡಾ ಅಲ್ಲ ಎಂಬುದು ಗಮನಾರ್ಹ. ಹಾಗಿದ್ದರೆ ಇನ್ಯಾವುದು ?

Also Read: ಬಾತುಕೋಳಿಯಿಂದ ಸಾಧ್ಯವಾದ್ದಲ್ಲಿ ನಮ್ಮಿಂದ ಏಕೆ ಸಾಧ್ಯವಿಲ್ಲ ?

ಹೌದು, 2011 ಜನಗಣತಿ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅತ್ಯಧಿಕ ಸಂಖ್ಯೆಯ ನೌಕರರು ಪ್ರಯಾಣಕ್ಕಾಗಿ ಕಾರು, ವ್ಯಾನ್ ಅಥವಾ ಜೀಪ್ ಬಳಕೆ ಮಾಡುತ್ತಿದ್ದಾರೆ. ಈ ಪಟ್ಟಿಯನ್ನು ಚೆನ್ನೈ, ಮುಂಬೈ, ಕೋಲ್ಕತ್ತಾ ಹಾಗೂ ಬೆಂಗಳೂರು ನಗರಗಳು ಹಿಂಬಾಲಿಸುತ್ತಿದೆ.

 ಕಾರನ್ನೇ ಜಾಸ್ತಿ ಆಶ್ರಯಿಸಿಕೊಂಡಿರುವ ದೆಹಲಿ ನೌಕರರು!

2011 ಜನಗಣತಿ ವರದಿ ಪ್ರಕಾರ ದೆಹಲಿಯಲ್ಲಿ ಅತ್ಯಧಿಕ ಅಂದರೆ ಶೇಕಡಾ 10.79ರಷ್ಟು ಮಂದಿ ಕೆಲಸಗಾರರು ಪ್ರಯಾಣಕ್ಕಾಗಿ ಕಾರು ಅಥವಾ ಜೀಪ್ ಅಥವಾ ವ್ಯಾನ್ ಬಳಕೆ ಮಾಡುತ್ತಿದ್ದಾರೆ.

 ಕಾರನ್ನೇ ಜಾಸ್ತಿ ಆಶ್ರಯಿಸಿಕೊಂಡಿರುವ ದೆಹಲಿ ನೌಕರರು!

ಈ ಪಟ್ಟಿಯಲ್ಲಿ ಎರಡು ಹಾಗೂ ಮೂರನೇ ಸ್ಥಾನಗಳನ್ನು ಹಂಚಿಕೊಂಡಿರುವ ಚೆನ್ನೈ ಹಾಗೂ ಮುಂಬೈ ನಗರಗಳಲ್ಲಿ ಈ ಪ್ರಮಾಣವು ಅನುಕ್ರಮವಾಗಿ ಶೇಕಡಾ 6.14 ಹಾಗೂ 4.78ರಷ್ಟಾಗಿದೆ.

 ಕಾರನ್ನೇ ಜಾಸ್ತಿ ಆಶ್ರಯಿಸಿಕೊಂಡಿರುವ ದೆಹಲಿ ನೌಕರರು!

ನಾಲ್ಕು ಹಾಗೂ ಐದನೇ ಸ್ಥಾನಗಳಲ್ಲಿ ಕೋಲ್ಕತ್ತಾ ಹಾಗೂ ಬೆಂಗಳೂರು ನಗರಗಳಿದ್ದು, ಅನುಕ್ರಮವಾಗಿ ಶೇಕಡಾ 2.93 ಹಾಗೂ 2.72ರಷ್ಟು ಮಂದಿ ಕೆಲಸಗಾರರು ಕಾರು, ಜೀಪ್ ಅಥವಾ ವ್ಯಾನ್ ಗಳಲ್ಲಿ ಸಂಚರಿಸುತ್ತಾರೆ.

 ಕಾರನ್ನೇ ಜಾಸ್ತಿ ಆಶ್ರಯಿಸಿಕೊಂಡಿರುವ ದೆಹಲಿ ನೌಕರರು!

ಕೇಂದ್ರ ಸಾರಿಗೆ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದೆಹಲಿಯಲ್ಲಿ ಗರಿಷ್ಠ ಸಂಖ್ಯೆಯ ಕಾರುಗಳಿವೆ. ಅದೇ ವೇಳೆ ಮೆಟ್ರೋ ಸೇವೆಯು ನಗರದಲ್ಲಿನ ವಾಹನ ದಟ್ಟಣೆಯನ್ನು ಗಣನೀಯವಾಗಿ ಇಳಿಕೆ ಮಾಡಲು ಸಹಕಾರಿಯಾಗಿದೆ. ವಾರದ ದಿನಗಳಲ್ಲಿ ಬೆಳಗ್ಗೆ 8ರಿಂದ 11 ಗಂಟೆಯ ವರೆಗೆ ಅತಿ ಹೆಚ್ಚು ಸರಿ ಸುಮಾರು ಒಂದು ಲಕ್ಷ ಪ್ರಯಾಣಿಕರು ಮೆಟ್ರೋ ರೈಲು ಸೇವೆಯನ್ನು ಬಳಕೆ ಮಾಡುತ್ತಿದ್ದಾರೆ.

 ಕಾರನ್ನೇ ಜಾಸ್ತಿ ಆಶ್ರಯಿಸಿಕೊಂಡಿರುವ ದೆಹಲಿ ನೌಕರರು!

ದೆಹಲಿ ಮೆಟ್ರೋದಲ್ಲಿ ಬೆಳಗ್ಗೆ ಹಾಗೂ ಸಾಯಂಕಾಲ ಅತಿ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದು, ರೈಲು ಕಿಕ್ಕಿರಿದು ತುಂಬುವಂತಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಮತ್ತೆ ಕಾರನ್ನು ಆಯ್ಕೆ ಮಾಡುವಂತೆ ಪ್ರೇರೇಪಿಸುತ್ತದೆ. ಅಲ್ಲದೆ ಕಾರುಗಳು ಪ್ರತಿಷ್ಠೆಯ ಸಂಕೇತವೂ ಹೌದು ಎಂಬುದನ್ನು ಪ್ರಯಾಣಿಕರೊಬ್ಬರು ಅಭಿಪ್ರಾಯಪಡುತ್ತಾರೆ.

 ಕಾರನ್ನೇ ಜಾಸ್ತಿ ಆಶ್ರಯಿಸಿಕೊಂಡಿರುವ ದೆಹಲಿ ನೌಕರರು!

ಇನ್ನೊಂದೆಡೆ ಚೆನ್ನೈನಲ್ಲಿ ಕಳಪೆ ಸಂಪರ್ಕ ಹಾಗೂ ಸಾರಿಗೆ ವ್ಯವಸ್ಥೆಗಳಿಗಳಿಂದಾಗಿ ಅನೇಕ ವೃತ್ತಿಪರರು ಕಾರು ಹಾಗೂ ವ್ಯಾನ್ ಗಳನ್ನು ಆಯ್ಕೆ ಮಾಡುವಂತಾಗಿದೆ. ಇಲ್ಲೂ ಪ್ರಯಾಣಿಕರು ಹೇಳುವಂತೆಯೇ ಕಾರು ಅಥವಾ ಆಟೋ ಇಲ್ಲದೆ ಕಚೇರಿಗೆ ತಲುಪುವುದು ಕಷ್ಟಕರವಾಗಿದೆ ಎಂಬುದು ಉಲ್ಲೇಖಿಸಲಾಗಿದೆ.

 ಕಾರನ್ನೇ ಜಾಸ್ತಿ ಆಶ್ರಯಿಸಿಕೊಂಡಿರುವ ದೆಹಲಿ ನೌಕರರು!

ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ಕೆಲಸ ಮಾಡುವವರು ಬಸ್ ಹಾಗೂ ರೈಲುಗಳಂತಹ ಸಾರ್ವಜನಿಕ ಸಂಚಾರ ವ್ಯವಸ್ಥೆಗಳನ್ನು ಒಂದು ಪರಿಧಿಯ ವರೆಗೆ ಮಾತ್ರ ಬಳಕೆ ಮಾಡುತ್ತಿದ್ದಾರೆ. ತದಾ ಬಳಿಕ ಆಟೋ, ಕ್ಯಾಬ್ ಅಥವಾ ಕಾರುಗಳನ್ನು ಆಶ್ರಯಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸಲಾಗಿದೆ.

 ಕಾರನ್ನೇ ಜಾಸ್ತಿ ಆಶ್ರಯಿಸಿಕೊಂಡಿರುವ ದೆಹಲಿ ನೌಕರರು!

ಅದೇ ರೀತಿ ಕೋಲ್ಕತ್ತಾ ನಗರದಲ್ಲಿ ಶೇಕಡಾ 3ರಷ್ಟು ಕೆಲಸಗಾರರು ಮಾತ್ರ ಕೆಲಸಕ್ಕೆ ತೆರಳುವಾಗ ಕಾರನ್ನು ಬಳಕೆ ಮಾಡುತ್ತಾರೆ. ಉಳಿದಂತೆ ಬಸ್, ರೈಲು, ಟ್ಸಾಕ್ಸಿ ಹಾಗೂ ಆಟೋಗಳಂತಹ ಸಾರ್ವಜನಿಕ ಸಂಚಾರ ಮಾರ್ಗವನ್ನು ಬಳಕೆ ಮಾಡುತ್ತಾರೆ.

 ಕಾರನ್ನೇ ಜಾಸ್ತಿ ಆಶ್ರಯಿಸಿಕೊಂಡಿರುವ ದೆಹಲಿ ನೌಕರರು!

ಅತಿ ಸಮರ್ಥ್ಯ ಲೋಕಲ್ ರೈಲ್ವೇ ಜಾಲವನ್ನು ಹೊಂದಿರುವ ಕೋಲ್ಕತ್ತಾದಲ್ಲಿ ಒಂದು ದಿನದಲ್ಲಿ 35 ಲಕ್ಷ ಮಂದಿ ಸಂಚರಿಸುತ್ತಾರೆ. ಈ ಪೈಕಿ ನಗರದ ಪ್ರಮುಖ ಕಚೇರಿಗಳನ್ನು ತಲುಪುವ ಇಲ್ಲಿನ ಮೆಟ್ರೋ ದೈನಂದಿನ ಐದು ಲಕ್ಷ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದೆ. ಅಂತೆಯೇ ಟ್ಸಾಕ್ಸಿಗಳಲ್ಲಿ 16 ಲಕ್ಷ ಮಂದಿ ಹಾಗೂ ಶೇಕಡಾ 6ರಿಂದ 7ರಷ್ಟು ಟ್ರಾಂಗಳಲ್ಲಿ ಸಂಚರಿಸುತ್ತಾರೆ.

 ಕಾರನ್ನೇ ಜಾಸ್ತಿ ಆಶ್ರಯಿಸಿಕೊಂಡಿರುವ ದೆಹಲಿ ನೌಕರರು!

ವಿಶ್ವ ಬ್ಯಾಂಕ್ ನಿಂದ ದೇಶದ ಅತ್ಯಂತ ಸಮರ್ಥನೀಯ ಸಾರಿಗೆ ವ್ಯವಸ್ಥೆ ಎಂಬ ಹೆಗ್ಗಳಿಕೆಗೂ ಕೋಲ್ಕತ್ತಾ ನಗರ ಪಾತ್ರವಾಗಿದೆ.

ಇವನ್ನೂ ಓದಿ

ಜಗತ್ತಿನ 10 ವಾಹನ ನಿಬಿಡ ಜಂಕ್ಷನ್

Most Read Articles

Kannada
Read more on ದೆಹಲಿ delhi
English summary
Census Data: Delhi, Chennai Tops The List For Highest Commuters By Car
Story first published: Tuesday, November 17, 2015, 11:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X