ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ತೆರೆದಿತೇ ಟ್ರೈಲ್‌ಬ್ಲೇಜರ್?

Written By:

ಕಳೆದ ಕೆಲವು ಸಮಯಗಳಿಂದ ಅತಿ ನೂತನ ಷೆವರ್ಲೆ ಟ್ರೈಲ್ ಬ್ಲೇಜರ್ ಭಾರತ ಮಾರುಕಟ್ಟೆಗೆ ಆಗಮನಕ್ಕೆ ಸಂಬಂಧಿಸಿದಂತೆ ಸುದ್ದಿಗಳು ಬರುತ್ತಲೇ ಇದೆ. ಅಷ್ಟಕ್ಕೂ ಅಮೆರಿಕ ಮೂಲದ ಐಕಾನಿಕ್ ಸಂಸ್ಥೆಯ ಅತಿ ನೂತನ ಟ್ರೈಲ್ ಬ್ಲೇಜರ್ ಮಾದರಿಯು ಭಾರತದ ಕ್ರೀಡಾ ಬಳಕೆಯ ವಾಹನದ ವಿಭಾಗದಲ್ಲಿ ಹೊಸ ಅಧ್ಯಾಯ ತೆರೆದಿತೇ ಎಂಬುದು ಬಹಳ ಕುತೂಹಲಕ್ಕೀಡು ಮಾಡಿದೆ.

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಷೆವರ್ಲೆ ಟ್ರೈಲ್ ಬ್ಲೇಜರ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಹಬ್ಬದ ಆವೃತ್ತಿಯ ಸಂಭ್ರಮಾಚರಣೆಯ ಅಂಗವಾಗಿ ದೇಶದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ. ಅಷ್ಟಕ್ಕೂ ಟ್ರೈಲ್ ಬ್ಲೇಜರ್ ಒಂದು ಪ್ರೀಮಿಯಂ ಎಸ್‌ಯುವಿ ಆಗಿರಲಿದೆಯೇ ? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ...

To Follow DriveSpark On Facebook, Click The Like Button
ಷೆವರ್ಲೆ ಟ್ರೈಲ್‌ಬ್ಲೇಜರ್: ಫಾರ್ಚ್ಯುನರ್ ಗೆ ಸರಿಸಾಟಿಯಾದಿತೇ ?

ನಿಮ್ಮ ಮಾಹಿತಿಗಾಗಿ 2015ನೇ ಸಾಲಿನಲ್ಲಿ ಷೆವರ್ಲೆ ಒಂದೇ ಒಂದು ಮಾದರಿಯನ್ನು ದೇಶದಲ್ಲಿ ಬಿಡುಗಡೆ ಮಾಡಿಲ್ಲ. ಹಾಗಾಗಿ ಅಮೆರಿಕ ಮೂಲದ ಸಂಸ್ಥೆಗಿದು ಅತ್ಯಂತ ದೊಡ್ಡ ಬಿಡುಗಡೆ ಸಮಾರಂಭವಾಗಲಿದೆ.

ಷೆವರ್ಲೆ ಟ್ರೈಲ್‌ಬ್ಲೇಜರ್: ಫಾರ್ಚ್ಯುನರ್ ಗೆ ಸರಿಸಾಟಿಯಾದಿತೇ ?

ಟ್ರೈಲ್ ಬ್ಲೇಜರ್ ಒಂದು ಪ್ರೀಮಿಯಂ ಎಸ್‌ಯುವಿ ಆಗಿರಲಿದ್ದು, 4x2 ಚಾಲನಾ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ. ಇದು ಕೇವಲ 9.89 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ.

ಷೆವರ್ಲೆ ಟ್ರೈಲ್‌ಬ್ಲೇಜರ್: ಫಾರ್ಚ್ಯುನರ್ ಗೆ ಸರಿಸಾಟಿಯಾದಿತೇ ?

2068 ಕೆ.ಜಿ ತೂಕದ ಷೆವರ್ಲೆ ಟ್ರೈಲ್ ಬ್ಲೇಜರ್ ಎಸ್‌ಯುವಿ 2.8 ಲೀಟರ್ ಡೀಸೆಲ್ ಟರ್ಬೊಚಾರ್ಜ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದ್ದು, 500.13 ಎನ್‌ಎಂ ತಿರುಗುಬಲದಲ್ಲಿ 197 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 6 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಷೆವರ್ಲೆ ಟ್ರೈಲ್‌ಬ್ಲೇಜರ್: ಫಾರ್ಚ್ಯುನರ್ ಗೆ ಸರಿಸಾಟಿಯಾದಿತೇ ?

ಹಾಗಿದ್ದರೂ ಟ್ರೈಲ್ ಬ್ಲೇಜರ್ ಕ್ರೀಡಾ ಬಳಕೆಯ ವಾಹನವು ಥಾಯ್ಲೆಂಡ್ ಘಟಕದಿಂದ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಭಾರತವನ್ನು ತಲುಪಲಿದೆ. ಅಂದರೆ ಇದು ದೇಶದಲ್ಲಿ 28 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ ಎಂದು ಅಂದಾಜಿಸಲಿದೆ.

ಷೆವರ್ಲೆ ಟ್ರೈಲ್‌ಬ್ಲೇಜರ್: ಫಾರ್ಚ್ಯುನರ್ ಗೆ ಸರಿಸಾಟಿಯಾದಿತೇ ?

ಭಾರತದಲ್ಲಿ ಪ್ರೀಮಿಯಂ ಎಸ್‌ಯುವಿಗಳ ಸಾಲಿನಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಟೊಯೊಟಾ ಫಾರ್ಚ್ಯುನರ್ ಜೊತೆಗೆ ಹ್ಯುಂಡೈ ಸಾಂಟಾಫೆ ಹಾಗೂ ಫೋರ್ಡ್ ಎಂಡೀವರ್ ಮಾದರಿಗಳಿಗೆ ನೂತನ ಷೆವರ್ಲೆ ಟ್ರೈಲ್ ಬ್ಲೇಜರ್ ಎಸ್‌ಯುವಿ ಪೈಪೋಟಿಯನ್ನು ಒಡ್ಡಲಿದೆ.

ಷೆವರ್ಲೆ ಟ್ರೈಲ್‌ಬ್ಲೇಜರ್: ಫಾರ್ಚ್ಯುನರ್ ಗೆ ಸರಿಸಾಟಿಯಾದಿತೇ ?

ಇನ್ನು ಮುಂಬರುವ ದಿನಗಳಲ್ಲಿ ದೇಶದಲ್ಲಿ ಷೆವರ್ಲೆ ಸಂಸ್ಥೆಯು ಬಿಡುಗಡೆ ಮಾಡಲಿರುವ ಇತರ ಮಾದರಿಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಕೆಲವು ಸಮಯಗಳ ಹಿಂದೆಯಷ್ಟೇ ಸ್ಪಿನ್ ಬಹು ಬಳಕೆಯ ವಾಹನವನ್ನು (ಎಂಪಿವಿ) ಅನಾವರಣಗೊಳಿಸಿತ್ತು. ಅಲ್ಲದೆ ಈಗಾಗಲೇ ಮಾರುಕಟ್ಟೆಯಲ್ಲಿರುವ ಷೆವರ್ಲೆ ಎಂಜಾಯ್ ಎಂಪಿವಿ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

English summary
Trailblazer From Chevrolet To Redefine Indian SUV Segment
Story first published: Tuesday, October 6, 2015, 17:11 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark