'2015 ಐಎಫ್ ಡಿಸೈನ್ ಅವಾರ್ಡ್' ಬಾಚಿದ ಹ್ಯುಂಡೈ ಐ20

Posted By:

ಹ್ಯುಂಡೈ ಈಗ ಅಂತರಾಷ್ಟ್ರೀಯ ಮಾನ್ಯತೆಗೂ ಪಾತ್ರವಾಗಿದ್ದು, ಪ್ರತಿಷ್ಠಿತ '2015 ಐಎಫ್ ಡಿಸೈನ್ ಅವಾರ್ಡ್' ಪ್ರಶಸ್ತಿಗೆ ಜನಪ್ರಿಯ ಐ20 ಪಾತ್ರವಾಗಿದೆ. ಆಟೋಮೊಬೈಲ್ಸ್, ವಾಹನ ಹಾಗೂ ಬೈಕ್ಸ್ ವಿಭಾಗದಲ್ಲಿ ಉತ್ಪನ್ನ ಶಿಸ್ತನ್ನು ತೋರಿರುವ ಹೊಸ ತಲೆಮಾರಿನ ಹ್ಯುಂಡೈ ಐ20 ಪ್ರಶಸ್ತಿಗೆ ಅರ್ಹವಾಗಿದೆ.

ಹೊಸ ಹ್ಯುಂಡೈ ಐ20 ಕಾರು ಸಂಸ್ಥೆಯ ಫ್ಲೂಯಿಡಿಕ್ ಸ್ಕಲ್ಕ್ಚರ್ ಡಿಸೈನ್ ತತ್ವಶಾಸ್ತ್ರವನ್ನು ಅನುಸರಿಸಿಕೊಂಡು ಬಂದಿದೆ. ಕಾರಿನ ಮೇಲೆ ಹಾದು ಹೋಗುವ ಶುಭ್ರ ಹಾಗೂ ದಿಟ್ಟ ರೇಖೆಗಳು ಮತ್ತು ಹೆಕ್ಸಾಜನಲ್ ಗ್ರಿಲ್ ಪ್ರಮುಖ ಆಕರ್ಷಣೆಯಾಗಿದೆ.

ಈ ನಿಟ್ಟಿನಲ್ಲಿರುವ ಯುರೋಪ್‌ನಲ್ಲಿರುವ ಹ್ಯುಂಡೈ ಡಿಸೈನ್ ಸೆಂಟರ್ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಂಡಿದೆ. ಇದರ ಮುಂಭಾಗವು ಶಕ್ತಿಯ ಸಂಕೇತವಾಗಿದರೆ ಬಂದಿರುವ ಸಿ ಪಿಲ್ಲರ್ ವಿಶಿಷ್ಟತೆಯನ್ನು ಕಾಪಾಡಿಕೊಂಡಿದೆ. ಇನ್ನು ಕಾರಿನೊಳಗೆ ಪಿಯಾನೊ ಬ್ಲ್ಯಾಕ್ಸ್ ಫಿನಿಶಿಂಗ್ ಕಾಣಬಹುದಾಗಿದೆ. ಜೊತೆಗೆ ಮೃದುವಾದ ಸ್ಪರ್ಶದ ಜೊತೆಗೆ ನಿಖರತೆಗೆ ಆದ್ಯತೆಗೆ ಕೊಡಲಾಗಿದೆ.

ಕಳೆದ 60 ವರ್ಷಗಳಿಂದ ಐಎಫ್ ಡಿಸೈನ್ ಪ್ರಶಸ್ತಿಯನ್ನು ನೀಡಲಾಗುತ್ತಾ ಬರಲಾಗುತ್ತದೆ. ಅಂತೆಯೇ ವಿವಿಧ ವಿಭಾಗಗಳಲ್ಲಾಗಿ ಪ್ರಶಸ್ತಿಯನ್ನು ನಿರ್ಧರಿಸಲಾಗುತ್ತದೆ. ಈ ಬಾರಿ 53 ರಾಷ್ಟ್ರಗಳಿಂದಾಗಿ 5,000ದಷ್ಟು ಪ್ರವೇಶಗಳು ದಾಖಲಾಗಿದ್ದವು. ಆದರೆ ಇವೆಲ್ಲವನ್ನು ಹಿಮ್ಮೆಟ್ಟಿಸುವಲ್ಲಿ ಹ್ಯುಂಡೈ ಐ20 ಯಶ ಕಂಡಿದೆ.

ಕಾರು ಹೋಲಿಸಿ

ಹ್ಯುಂಡೈ ಎಲೈಟ್ ಐ20
ಹ್ಯುಂಡೈ ಎಲೈಟ್ ಐ20 ಮಾದರಿ ಆಯ್ಕೆ ಮಾಡಿ
-- ಹೋಲಿಕೆಗಾಗಿ ಆಯ್ಕೆ ಮಾಡು --
English summary
Hyundai has received international recognition for its vehicle design from the iF Design Awards jury. The New Generation i20 has won the iF Design Award 2015 in the "Product" discipline, under the "Automobiles / Vehicles / Bikes" category.
Story first published: Tuesday, February 3, 2015, 15:01 [IST]
Please Wait while comments are loading...

Latest Photos