ಹ್ಯುಂಡೈ ಕಾರುಗಳಿಗೆ ತಟ್ಟಿದ ಬೆಲೆ ಏರಿಕೆ ಬಿಸಿ

Written By:

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಇಂಡಿಯಾ, ದೇಶದಲ್ಲಿ ತನ್ನೆಲ್ಲ ಶ್ರೇಣಿಗಳ ಕಾರುಗಳಿಗೆ ಬೆಲೆ ಏರಿಕೆಗೊಳಿಸಲು ನಿರ್ಧರಿಸಿದೆ. ಹಾಗಿದ್ದರೂ ತನ್ನ ಬೆಲೆ ಏರಿಕೆ ನೀತಿಯಿಂದ ಈಗಷ್ಟೇ ಬಿಡುಗಡೆಗೊಂಡಿರುವ ಕ್ರೆಟಾ ಕ್ರೀಡಾ ಬಳಕೆಯ ವಾಹನವನ್ನು ಹೊರತುಪಡಿಸಲಾಗಿದೆ.

ದಕ್ಷಿಣ ಕೊರಿಯಾ ಮೂಲದ ವಾಹನ ಸಂಸ್ಥೆಯಾಗಿರುವ ಹ್ಯುಂಡೈ, ಗರಿಷ್ಠ 30,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಿದೆ. ನೂತನ ಬೆಲೆ ಏರಿಕೆ ನೀತಿಯು 2015 ಆಗಸ್ಟ್ 1ರಿಂದಲೇ ಜಾರಿಗೆ ಬರಲಿದೆ.

ಹ್ಯುಂಡೈ

ಹಾಗಿದ್ದರೂ ನಿರ್ದಿಷ್ಟ ಮಾದರಿಗಳಿಗೆ ಎಷ್ಟೆಷ್ಟು ಬೆಲೆ ಏರಿಕೆ ಅನ್ವಯವಾಗಲಿದೆ ಎಂಬುದೀಗ ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಸಂಸ್ಥೆಯು ದೇಶದಲ್ಲಿ 10 ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಅವುಗಳೆಂದರೆ,

  • ಇಯಾನ್,
  • ಐ10,
  • ಗ್ರಾಂಡ್ ಐ10,
  • ಎಕ್ಸ್ ಸೆಂಟ್,
  • ಎಲೈಟ್ ಐ20
  • ಎಲೈಟ್ ಐ20 ಆಕ್ಟಿವ್,
  • 4 ಎಸ್ ಫ್ಲೂಯಿಡಿಕ್ ವೆರ್ನಾ,
  • ಎಲಂಟ್ರಾ,
  • ಸಾಂಟಾಫೆ ಮತ್ತು
  • ಕ್ರೆಟಾ.

ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಹ್ಯುಂಡೈ ಸಂಸ್ಥೆಯು, ನಿರ್ಮಾಣ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಪರಿಸ್ಥಿತಿಯಲ್ಲಿ ಬೆಲೆ ಏರಿಕೆ ಅನಿವಾರ್ಯವೆನಿಸಿದೆ ಎಂದಿದೆ.

English summary
Hyundai India Hike Price Across Models; Creta Unaffected Currently
Story first published: Saturday, July 25, 2015, 16:20 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark