5 ಲಕ್ಷ ಮಾರಾಟ ಗುರಿಯಿರಿಸಿಕೊಂಡಿರುವ ಹ್ಯುಂಡೈ

Written By:

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಇಂಡಿಯಾ ದೇಶಿಯ ವಾಹನ ಮಾರುಕಟ್ಟೆಯಲ್ಲಿ ಐದು ಲಕ್ಷ ಯುನಿಟ್‌ಗಳ ಮಾರಾಟದ ಗುರಿಯಿರಿಸಿಕೊಂಡಿದೆ.

ಕಳೆ ಸಾಲಿನಲ್ಲಿ 4.11 ಲಕ್ಷ ಯುನಿಟ್‌ಗಳ ಮಾರಾಟ ಸಾಧಿಸಿರುವ ಹ್ಯುಂಡೈ, ಎರಡು ಹೊಸ ಮಾದರಿಗಳ ಬೆಂಬಲದೊಂದಿಗೆ ತನ್ನ ಗುರಿ ತಲುಪುವ ನಿರೀಕ್ಷೆಯಲ್ಲಿದೆ.

To Follow DriveSpark On Facebook, Click The Like Button
hyundai verna

ಈಗಷ್ಟೇ ಮಧ್ಯಮ ಗಾತ್ರದ ವೆರ್ನಾ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಿರುವ ಹ್ಯುಂಡೈ, ಮಾರಾಟಕ್ಕೆ ಉತ್ತೇಜನ ನೀಡುವ ಭರವಸೆಯಲ್ಲಿದೆ. ಮುಂದಿನ ದಿನಗಳ ವೆರ್ನಾ ಗಮನಾರ್ಹ ಮಾರಾಟ ಸಾಧಿಸುವುದಾಗಿ ಹ್ಯುಂಡೈ ಮೋಟಾರು ಇಂಡಿಯಾ ಲಿಮಿಟೆಡ್ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಹಿರಿಯ ಉಪಾಧ್ಯಕ್ಷರೂ ಆಗಿರುವ ರಾಕೇಶ್ ಶ್ರೀವಾಸ್ತವಾ ತಿಳಿಸಿದ್ದಾರೆ.

ಇದಲ್ಲದೆ ಪ್ರಸಕ್ತ ಸಾಲಿನಲ್ಲಿ ಕ್ರಾಸೋವರ್ ಹಾಗೂ ಪ್ರಿಮೀಯಂ ಹ್ಯಾಚ್‌ಬ್ಯಾಕ್ ಕಾರನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹ್ಯುಂಡೈ ಹೊಂದಿದೆ.

English summary
Hyundai India targets 5 lakh sales mark in the domestic market
Story first published: Thursday, February 19, 2015, 18:31 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark