2016ರಲ್ಲಿ ಹ್ಯುಂಡೈನಿಂದ ಎಂಪಿವಿ ಬಿಡುಗಡೆ

Written By:

ಕ್ರೆಟಾ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನದ (ಎಸ್‌ಯುವಿ) ಬಳಿಕ ಉಪಯುಕ್ತ ವಾಹನ ವಿಭಾಗದತ್ತವೂ ತನ್ನ ಚಿತ್ತ ಹಾಯಿಸಿರುವ ದಕ್ಷಿಣ ಕೊರಿಯಾ ಮೂಲದ ಜನಪ್ರಿಯ ಸಂಸ್ಥೆ ಹ್ಯುಂಡೈ, 2016ನೇ ಸಾಲಿನಲ್ಲಿ ಬಹು ಬಳಕೆಯ ವಾಹನವನ್ನು (ಎಂಪಿವಿ) ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಕಳೆದ ದಿನವಷ್ಟೇ ಹ್ಯುಂಡೈ ಕ್ರೆಟಾ ಮಿನಿ ಎಸ್ ಯುವಿ ಭಾರತದಲ್ಲಿ ಭರ್ಜರಿ ಜಾಗತಿಕ ಬಿಡುಗಡೆ ಕಂಡಿತ್ತು. ಈ ಮೂಲಕ ಪ್ರೀಮಿಯಂ ವಿಭಾಗದಲ್ಲೂ ಹ್ಯುಂಡೈ ಹೆಚ್ಚಿನ ಮಾರಾಟವನ್ನು ನಿರೀಕ್ಷಿಸುತ್ತಿದೆ.

ಹ್ಯುಂಡೈ ಎಂಪಿವಿ

ಈ ಸಂದರ್ಭದಲ್ಲಿ ಭಾರತದಲ್ಲಿ ಭವಿಷ್ಯ ಯೋಜನೆಯನ್ನು ವ್ಯಕ್ತಪಡಿಸಿರುವ ಹ್ಯುಂಡೈ, ಮುಂದಿನ ವರ್ಷ ಎಂಪಿವಿ ಕೊಡುಗೆಯನ್ನು ನೀಡಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಭಾರತದಲ್ಲಿ ಎಂಪಿವಿಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿರುವುದು ಹ್ಯುಂಡೈ ಪೂರಕವಾದ ನಿಲುವಿಗೆ ಪ್ರೇರಣೆಯಾಗಿದೆ.

2012ರಲ್ಲೇ ಹ್ಯುಂಡೈ ಸಂಸ್ಥೆಯು ಹೆಕ್ಸಾ ಸ್ಪೇಸ್ ಕಾನ್ಸೆಪ್ಟ್ ಕಾರನ್ನು ಪ್ರದರ್ಶಿಸಿತ್ತು. ನೂತನ ಎಂಪಿವಿ ಮಾದರಿಯು ಇದೇ ತಳಹದಿಯಲ್ಲಿ ನಿರ್ಮಾಣವಾಗಲಿದೆಯೇ ಎಂಬುದು ಕುತೂಹಲವೆನಿಸಿದೆ.

ಹ್ಯುಂಡೈ ಎಂಪಿವಿ

ನೂತನ ಎಂಪಿವಿ ಕಾರು ಸಹ ಸಂಸ್ಥೆಯ ಹೊಸತಾದ ಫ್ಯೂಯಿಡಿಕ್ 2.0 ವಿನ್ಯಾಸ ತತ್ವಶಾಸ್ತ್ರವನ್ನು ಪಡೆಯಲಿದೆ. ಪ್ರಸ್ತುತ ಕೆಟ್ರಾ ಆಯೋಮ್ಯಾಟಿಕ್ ಲಭ್ಯವಿದ್ದು, ನೂತನ ಎಂಪಿವಿ ಮಾದರಿಯಲ್ಲೂ ಇದನ್ನು ನಿರೀಕ್ಷೆ ಮಾಡಬಹುದಾಗಿದೆ.

ಇವೆಲ್ಲದಕ್ಕೂ ಮಿಗಿಲಾಗಿ 2016ರ ವರ್ಷಾರಂಭದಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ನೂತನ ಎಂಪಿವಿ ಮಾದರಿ ಅನಾವರಣಗೊಳ್ಳುವ ಸಾಧ್ಯತೆಯೂ ಇದೆ.

English summary
The Korean based automobile manufacturer has confirmed that they are working on new platforms. Among their new products Hyundai will introduce its first MPV in the country.
Story first published: Wednesday, July 22, 2015, 12:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark