ಮಹೀಂದ್ರ ಟಿಯುವಿ300 ಆಟೋಮ್ಯಾಟಿಕ್ ಕಾರಿಗೆ ಭಾರಿ ಬೇಡಿಕೆ

Written By:

ವಾಹನೋದ್ಯಮ ಮೂಲದಿಂದ ಲಭ್ಯವಿರುವ ಮಾಹಿತಿಗಳ ಪ್ರಕಾರ ಮಹೀಂದ್ರ ಟಿಯುವಿ300 ಕ್ರೀಡಾ ಬಳಕೆಯ ವಾಹನಕ್ಕೆ (ಎಸ್‌ಯುವಿ) ಭಾರಿ ಬೇಡಿಕೆ ಹೆಚ್ಚಾಗುತ್ತಿದೆ. ಈ ಪೈಕಿ ಆಟೋಮ್ಯಾಟಿಕ್ ಮಾದರಿಗೆ ಗ್ರಾಹಕರು ಹೆಚ್ಚಿನ ಒಲವು ತೋರಿರುವುದಾಗಿ ತಿಳಿದು ಬಂದಿದೆ.

Also Read: ಬೆಂಗಳೂರು ಪ್ರವೇಶಿಸಿದ ಮಹೀಂದ್ರ ಟಿಯುವಿ300

ಮಹೀಂದ್ರ ಟಿಯುವಿ300 ಇದುವರೆಗೆ 12,000 ಯುನಿಟ್ ಗಳ ಬುಕ್ಕಿಂಗ್ ದಾಖಲಿಸಿದ್ದು, ಈ ಪೈಕಿ ಶೇಕಡಾ ಅರ್ಧಕ್ಕಿಂತಲೂ ಹೆಚ್ಚು ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಮಾದರಿಗೆ ಬೇಡಿಕೆ ದಾಖಲಾಗಿದೆ.

ಮಹೀಂದ್ರ ಟಿಯುವಿ300 ಆಟೋಮ್ಯಾಟಿಕ್ ಕಾರಿಗೆ ಭಾರಿ ಬೇಡಿಕೆ

ಮಹೀಂದ್ರ ಟಿಯುವಿ300 ಪ್ರಾರಂಭಿಕ ಬೆಲೆ ಪ್ರತಿಸ್ಪರ್ಧಿ ಇಕೊಸ್ಪೋರ್ಟ್ ಗಿಂತಲೂ ಒಂದು ಲಕ್ಷದಷ್ಟು (7.12 ಲಕ್ಷ ರು.) ಕಡಿಮೆಯಾಗಿದೆ. ಅಂತೆಯೇ ಟಿ6 ಪ್ಲಸ್ ಹಾಗೂ ಟಿ8 ಪ್ಲಸ್ ಗಳೆಂಬ ಎರಡು ಎಎಂಟಿ ಮಾದರಿಗಳು ಅನುಕ್ರಮವಾಗಿ 8.76 ಲಕ್ಷ ರು. ಹಾಗೂ 9.37 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ಇಲ್ಲಿ ಎಕ್ಸ್ ಶೋ ರೂಂ ಬೆಂಗಳೂರು ಬೆಲೆಯನ್ನು ಕೊಡಲಾಗಿದೆ.

ಮಹೀಂದ್ರ ಟಿಯುವಿ300 ಆಟೋಮ್ಯಾಟಿಕ್ ಕಾರಿಗೆ ಭಾರಿ ಬೇಡಿಕೆ

2015 ಸೆಪ್ಟೆಂಬರ್ 10ರಂದು ಮಾರುಕಟ್ಟೆ ಪ್ರವೇಶಿಸಿದ್ದ ಟಿಯುವಿ300 ನಿಧಾನವಾಗಿ ಜನಪ್ರಿಯತೆ ಸಾಧಿಸುತ್ತಿದೆ. ಅಲ್ಲದೆ ಬಹಳ ಕಾಲದ ಅಭಿವೃದ್ಧಿ ಹಾಗೂ ಅಧ್ಯಯನದ ಬಳಿಕ ಈ ರಫ್ ಆ್ಯಂಡ್ ಟಫ್ ಯುದ್ಧ ಟ್ಯಾಂಕ್ ನಿಂದ ಪ್ರೇರಣೆ ಪಡೆದ ಎಸ್ ಯುವಿ ರಚಿಸಲಾಗಿದೆ.

ಮಹೀಂದ್ರ ಟಿಯುವಿ300 ಆಟೋಮ್ಯಾಟಿಕ್ ಕಾರಿಗೆ ಭಾರಿ ಬೇಡಿಕೆ

ಅಕ್ಟೋಬರ್ ತಿಂಗಳಲ್ಲಿ 4551 ಯುನಿಟ್ ಗಳ ಮಾರಾಟ ದಾಖಲಿಸಿರುವ ಟಿಯುವಿ300 ವಾಹನ ವಿಭಾಗದಲ್ಲಿ ಮಹೀಂದ್ರ ಒಟ್ಟಾರೆ ಮಾರಾಟ ಶೇರು ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಮಹೀಂದ್ರ ಟಿಯುವಿ300 ಆಟೋಮ್ಯಾಟಿಕ್ ಕಾರಿಗೆ ಭಾರಿ ಬೇಡಿಕೆ

ಇದರ 1.5 ಲೀಟರ್, ತ್ರಿ ಸಿಲಿಂಡರ್ ಎಂ ಹಾಕ್80 ಡೀಸೆಲ್ ಎಂಜಿನ್ 230 ಎನ್ ಎಂ ತಿರುಗುಬಲದಲ್ಲಿ 84 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೆ ಫೈವ್ ಸ್ಪೀಡ್ ಮ್ಯಾನುವಲ್ ಹಾಗೂ ಎಎಂಟಿ ಗೇರ್ ಬಾಕ್ಸ್ ಹೊಂದಿದೆ.

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

  • ಟಿ4: 7.12 ಲಕ್ಷ ರು.
  • ಟಿ4 ಪ್ಲಸ್: 7.47
  • ಟಿ6: 7.77
  • ಟಿ6 ಪ್ಲಸ್: 8.03 ಲಕ್ಷ ರು.
  • ಟಿ6 ಪ್ಲಸ್ ಆಟೋ ಶಿಫ್ಟ್: 8.76 ಲಕ್ಷ ರು.
  • ಟಿ8: 8.64 ಲಕ್ಷ ರು.
  • ಟಿ8 ಆಟೋ ಶಿಫ್ಟ್: 9.37 ಲಕ್ಷ ರು.
ಇವನ್ನೂ ಓದಿ

01. ಮಹೀಂದ್ರ ಟಿಯುವಿ300 Vs ಫೋರ್ಡ್ ಇಕೊಸ್ಪೋರ್ಟ್: ನಿಮ್ಮ ಆಯ್ಕೆ ಯಾವುದು?

02. ಮಹೀಂದ್ರ ಟಿಯುವಿ300; ಸಮಗ್ರ ವಿವರಗಳು

English summary
Half The Bookings For The Mahindra TUV 300 Are for AMT Variant
Story first published: Tuesday, November 10, 2015, 10:16 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark