ಫೋಕ್ಸ್ ವ್ಯಾಗನ್ ಶಕ್ತಿಶಾಲಿ ಪೊಲೊ ಜಿಟಿಐ ಭಾರತಕ್ಕೆ; 10 ಗಮನಾರ್ಹ ಅಂಶಗಳು

Written By:

ಸಕತ್ ಪವರ್ ಫುಲ್ ಹಾಗೂ ಅಷ್ಟೇ ದುಬಾರಿ ಗಾಡಿಯೊಂದು ಭಾರತಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ಹೌದು, ಎಲ್ಲ ಹೊಸತದ ಫೋಕ್ಸ್ ವ್ಯಾಗನ್ 2015 ಪೊಲೊ ಜಿಟಿಐ ಇನ್ನು ಕೆಲವೇ ಸಮಯದೊಳಗೆ ಭಾರತದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ.

ಈ ಸಂಬಂಧ ಜರ್ಮನಿಯ ಈ ದುಬಾರಿ ಹ್ಯಾಚ್ ಬ್ಯಾಕ್ ಕಾರಿನ ಪ್ರಯೋಗಾರ್ಥ ಸಂಚಾರ ಪ್ರಯೋಗ ದೇಶದ ರಸ್ತೆಯಲ್ಲಿ ಭರದಿಂದ ಸಾಗುತ್ತಿದೆ. ಅಂದಾಜು 17ರಿಂದ 20 ಲಕ್ಷ ರು.ಗಳ ಅಸುಪಾಸಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿರುವ 2015 ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಕಾರಿನ ಬಗೆಗಿನ 10 ಗಮನಾರ್ಹ ಪಾಯಿಂಟ್ಸ್ ಗಳನ್ನು ಇಲ್ಲಿ ಕೊಡಲಾಗುವುದು.

To Follow DriveSpark On Facebook, Click The Like Button
01. ವೇಗಕ್ಕೆ ಸವಾಲೇ ಇಲ್ಲ

01. ವೇಗಕ್ಕೆ ಸವಾಲೇ ಇಲ್ಲ

ಭಾರತೀಯ ಗ್ರಾಹಕರಿಗೆ ಹೊಸ ಅನುಭವವಾಗಲಿರುವ 2015 ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ, 6.7 ಸೆಕಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಗಂಟೆಗೆ ಗರಿಷ್ಠ 236 ಕೀ.ಮೀ. ವೇಗದಲ್ಲಿ ಹೋಗುವ ಸಾಮರ್ಥ್ಯ ಹೊಂದಿದೆ.

02. ಪರಿಣಾಮಕಾರಿ ಹ್ಯಾಂಡ್ಲಿಂಗ್

02. ಪರಿಣಾಮಕಾರಿ ಹ್ಯಾಂಡ್ಲಿಂಗ್

ಸದಾ ನಿರ್ಮಾಣ ಗುಣಮಟ್ಟತೆಯಲ್ಲಿ ಉನ್ನತ ಮಟ್ಟವನ್ನು ಕಾಯ್ದುಕೊಂಡಿರುವ ಫೋಕ್ಸ್ ವ್ಯಾಗನ್ ತನ್ನ ಜನಪ್ರಿಯ ಜಿಟಿಐ ಮಾದರಿಯಲ್ಲೂ ಇದನ್ನು ಕಾಪಾಡಿಕೊಂಡಿದೆ.

03. ಅಂತರಾಷ್ಟ್ರೀಯ ಮಾನ್ಯತೆಯ ಎಂಜಿನ್

03. ಅಂತರಾಷ್ಟ್ರೀಯ ಮಾನ್ಯತೆಯ ಎಂಜಿನ್

ನೂತನ 2015 ಫೋಕ್ಸ್ ವ್ಯಾಗನ್ ಜಿಟಿಐ ಕಾರಲ್ಲಿ 1.8 ಲೀಟರ್ (189 ಅಶ್ವಶಕ್ತಿ) ಮತ್ತು 1.4 ಲೀಟರ್ (148 ಅಶ್ವಶಕ್ತಿ) ಟಿಎಸ್‌ಐ ಎಂಜಿನ್ ಆಳವಡಿಸಲಾಗಿದೆ. ಅಂತರಾಷ್ಟ್ರೀಯ ಮಾನ್ಯತೆ ಪಡೆದ ಇದಕ್ಕಿಂತ ಮಿಗಿಲಾದ ಎಂಜಿನ್ ಇನ್ನು ಬೇಕೇ?

04. ಡಿಎಸ್ ಜಿ ಗೇರ್ ಬಾಕ್ಸ್

04. ಡಿಎಸ್ ಜಿ ಗೇರ್ ಬಾಕ್ಸ್

ನೂತನ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಕಾರಲ್ಲಿ ಆರು ಅಥವಾ ಏಳು ಸ್ಪೀಡಿನ ಡಿಎಸ್ ಜಿ ಗೇರ್ ಬಾಕ್ಸ್ ಆಯ್ಕೆಯೂ ಲಭ್ಯವಿರುತ್ತದೆ.

05. ವಿಶ್ವಾಸಾರ್ಹತೆ

05. ವಿಶ್ವಾಸಾರ್ಹತೆ

ಫೋಕ್ಸ್ ವ್ಯಾಗನ್ ಸಂಸ್ಥೆಯ ವಿಶ್ವಾಸಾರ್ಹತೆಯೇ ಸಂಸ್ಥೆಗೆ ಕೈಗನ್ನಡಿಯಾಗಲಿದೆ. ಅಲ್ಲದೆ ಜಿಟಿಐ ಜೊತೆ ಪೊಲೊ ಜಿಟಿ ಮಾದರಿಯು ಬಿಡುಗಡೆಯಾಗುವ ಸಾಧ್ಯತೆಯಿದೆ.

06. ಹೆಚ್ಚು ಸುರಕ್ಷತೆ

06. ಹೆಚ್ಚು ಸುರಕ್ಷತೆ

ಭದ್ರತೆಯ ವಿಚಾರದಲ್ಲೂ ಯಾವುದೇ ರಾಜಿಗೂ ತಯಾರಾಗದ ಫೋಕ್ಸ್ ವ್ಯಾಗನ್, ಇಸಿಎಸ್, ಚಾಲಕ ಅಲರ್ಟ್ ಸಿಸ್ಟಂ, ಎಬಿಎಸ್, ಫ್ರಂಟ್ ರಿಯರ್ ಡಿಸ್ಕ್ ಬ್ರೇಕ್, ಆಟೋಮ್ಯಾಟಿಕ್ ಢಿಕ್ಕಿ ಬ್ರೇಕಿಂಗ್ ಸಿಸ್ಟಂ ಮುಂತಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

07. ಅಂದಾಜು ಬೆಲೆ

07. ಅಂದಾಜು ಬೆಲೆ

ನೂತನ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ, ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದ್ದು, ಅಂದಾಜು 17ರಿಂದ 20 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

 08. ವಿಶೇಷತೆಗಳು

08. ವಿಶೇಷತೆಗಳು

  • ಕ್ರೀಡಾ ಮಾದರಿ,
  • ಪರಿಷ್ಕೃತ ಹೆಡ್ ಲೈಟ್ ಜೊತೆಗೆ ಡೇಟೈಮ್ ರನ್ನಿಂಗ್ ಲೈಟ್ಸ್,
  • ಪರಿಷ್ಕೃತ ಬಂಪರ್,
  • ಸೈಡ್ ಸ್ಕರ್ಟ್,
  • ಡಬಲ್ ಬ್ಯಾರೆಲ್ ಎಕ್ಸಾಸ್ಟ್,
  • ವಿಭಿನ್ನ ಅಲಾಯ್ ವೀಲ್
  • ಒಳಮೈಯ್ಲಿ ಅಲ್ಯೂಮಿನಿಯಂ ಪೆಡಲ್,
  • ಜಿಟಿಐ ಸ್ಟೀರಿಂಗ್ ವೀಲ್,
  • ಸ್ಪೋರ್ಟಿ ಸೀಟು
09. ಫೈವ್ ಡೋರ್ ವರ್ಷನ್

09. ಫೈವ್ ಡೋರ್ ವರ್ಷನ್

ಯುರೋಪ್ ನಲ್ಲಿ ತ್ರಿ ಹಾಗೂ ಫೈವ್ ಡೋರ್ ವರ್ಷನ್ ಗಳಲ್ಲಿ ಲಭ್ಯವಿರುತ್ತದೆ. ಆದರೆ ಭಾರತದ ಆವೃತ್ತಿಯು ಫೈವ್ ಡೋರ್ ವರ್ಷನ್ ನಲ್ಲಿ ಮಾತ್ರ ಮಾರಾಟವಾಗುವ ಸಾಧ್ಯತೆಯಿದೆ.

 10. ಜಿಟಿಐ ಪರಂಪರೆ

10. ಜಿಟಿಐ ಪರಂಪರೆ

1970ರ ದಶಕದಿಂದಲೇ ಗ್ರಾಂಡ್ ಟೂರರ್ ಇಂಜೆಕ್ಷನ್ ಪರಂಪರೆಯನ್ನು ಹೊತ್ತುಕೊಂಡು ಬಂದಿರುವ ಫೋಕ್ಸ್ ವ್ಯಾಗನ್ ಇದೇ ಐಕಾನಿಕ್ ಪಟ್ಟಿಯನ್ನು ಉಳಿಸೆಕೊಂಡು ಹೋಗುವ ಇರಾದೆಯಲ್ಲಿದೆ.

English summary
The Rad, Mad 2015 Volkswagen Polo GTI: Why Should You Buy It?
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark