ಹೊಸ ವೈಶಿಷ್ಟ್ಯಗಳೊಂದಿಗೆ ತುಂಬಿ ತುಳುಕುತ್ತಿರುವ ಷೆವರ್ಲೆ ಬೀಟ್

Written By:

ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಪ್ರಖ್ಯಾತ ಕಾರು ಬ್ರಾಂಡ್ ಆಗಿರುವ ಷೆವರ್ಲೆ ಸಂಸ್ಥೆಯ ಜನಪ್ರಿಯ ಬೀಟ್ ಸಣ್ಣ ಹ್ಯಾಚ್ ಬ್ಯಾಕ್ ಕಾರು ಹೊಸ ಹೊಸ ವೈಶಿಷ್ಟ್ಯಗಳೊಂದಿಗೆ ತುಂಬಿ ತುಳುಕುತ್ತಿದ್ದು, ಗ್ರಾಹಕರಿಗೆ ಅದ್ಭುತ ಚಾಲನಾ ಅನುಭವ ಖಾತ್ರಿಪಡಿಸಲಿದೆ.

ಏನಿದೆ ವೈಶಿಷ್ಟ್ಯ?

ಹೊರಮೈಯಲ್ಲಿ ಹೊಸತಾದ ಕ್ರೋಮ್ ಗ್ರಿಲ್, ಹೊಸ ಹೆಡ್ ಲ್ಯಾಂಪ್, ರತ್ನ ಪ್ರಭಾವಿತ ಟೈಲ್ ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಲಿದೆ. ಇನ್ನು ಕಾರಿನೊಳಗಡೆ ಇಂಟೇಗ್ರೇಟಡ್ ಮನರಂಜನಾ ವ್ಯವಸ್ಥೆ, ಯುಎಎಸ್‌ಬಿ, ಆಕ್ಸ್ ಕನೆಕ್ಟಿವಿಟಿ ಮುಂತಾದ ಸೌಲಭ್ಯಗಳಿರಲಿದೆ.

ಷೆವರ್ಲೆ ಬೀಟ್ ಆಫರ್ ಗಾಗಿ ಇಲ್ಲಿ ಕ್ಲಿಕ್ಕಿಸಿರಿ

ಷೆವರ್ಲೆ ಬೀಟ್ ಆಫರ್

ಎಂಜಿನ್ ತಾಂತ್ರಿಕತೆ

ಅಂದ ಹಾಗೆ ನೂತನ ಷೆವರ್ಲೆ ಬೀಟ್ 936 ಸಿಸಿ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸ್ಪಡುತ್ತಿದ್ದು 143 ಎನ್‌ಎಂ ತಿರುಗುಬಲದಲ್ಲಿ 56 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ. ಇನ್ನೊಂದೆಡೆ ಇದರ ಹೆಚ್ಚು ಶಕ್ತಿಶಾಲಿ 1.2 ಲೀಟರ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ 107 ಎನ್‌ಎಂ ತಿರುಗುಬಲದಲ್ಲಿ 77 ಅಶ್ವಶಕ್ತಿ ಉತ್ಪಾದಿಸಲಿದೆ.

ಮೈಲೇಜ್

  • 936 ಸಿಸಿ ಎಂಜಿನ್: 25.4 ಕೀ.ಮೀ.
  • 1.2 ಲೀಟರ್ ಎಂಜಿನ್: 18.6 ಕೀ.ಮೀ.

ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್

ವಾರಂಟಿ, ವಿಮೆ

ಇವೆಲ್ಲದರ ನಡುವೆ ಗ್ರಾಹಕರಿಗೆ ಭರಪೂರ ಆನಂದ ನೀಡುವ ಇರಾದೆಯಲ್ಲಿರುವ ಷೆವರ್ಲೆ 3+2 ವರ್ಧಿತ ವಾರಂಟಿ ಸೇವೆಯನ್ನು ನೀಡುತ್ತಿದೆ. ಇದರ ಜೊತೆ ಜೊತೆಗೆ ಒಂದು ವರ್ಷದ ಉಚಿತ ವಿಮಾ ಸೇವೆಯು ಲಭ್ಯವಾಗಲಿದೆ.

ಹಾಗಿದ್ದರೆ ಇನ್ಯಾಕೆ ತಡ ಇಲ್ಲಿ ಕೊಟ್ಟಿರುವ ಲಿಂಕ್ ಕ್ಲಿಕ್ಲಿಸಿ ಆಫರ್ ನಿಮ್ಮದಾಗಿಸಿರಿ. ಈ ಆಫರ್ ಸೀಮಿತ ಅವಧಿಯ ವರೆಗೆ ಮಾತ್ರ ಲಭ್ಯವಿರಲಿದೆ.

English summary
The All-New Chevrolet Beat - Stunning New Features And More!

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark