ನಾಲ್ಕು ವಿಭಿನ್ನ ರೂಪಗಳಲ್ಲಿ ಫೋಕ್ಸ್ ವ್ಯಾಗನ್ ಬೀಟ್ಲ್

Written By:

ಪ್ರತಿಷ್ಠಿತ 2015 ನ್ಯೂಯಾರ್ಕ್ ಆಟೋ ಶೋದಲ್ಲಿ ಜರ್ಮನಿಯ ಐಕಾನಿಕ್ ಸಂಸ್ಥೆಯಾಗಿರುವ ಫೋಕ್ಸ್ ವ್ಯಾಗನ್ ತನ್ನ ಜನಪ್ರಿಯ ಬೀಟ್ಲ್ ಕಾರಿನ ನಾಲ್ಕು ವಿಶಿಷ್ಟ ಮಾದರಿಗಳನ್ನು ಪರಿಚಯಿಸಿದೆ.

ಒಂದಕ್ಕೊಂದು ವಿಶಿಷ್ಟತೆಯನ್ನು ಕಾಪಾಡಿಕೊಂಡಿರುವ ನೂತನ ಬೀಟ್ಲ್ ಕಾರುಗಳು ವಾಹನ ಪ್ರೇಮಿಗಳಲ್ಲಿ ರೋಚಕತೆಯನ್ನುಂಟು ಮಾಡಿದೆ.

ಫೋಕ್ಸ್ ವ್ಯಾಗನ್ ಬೀಟ್ಲ್

ಫೋಕ್ಸ್ ವ್ಯಾಗನ್ ಬೀಟ್ಲ್

ಬೀಟ್ಲ್ ಡೆನಿಮ್ ಕಾನ್ಸೆಪ್ಟ್,

ಬೀಟ್ಲ್ ಕಾನ್ಸೆಪ್ಟ್ ಆರ್ ಲೈನ್,

ಬೀಟ್ಲ್ ಪಿಂಕ್,

ಬೀಟ್ಲ್ ವೇವ್

ಬೀಟ್ಲ್ ಡೆನಿಮ್ ಕಾನ್ಸೆಪ್ಟ್

ಬೀಟ್ಲ್ ಡೆನಿಮ್ ಕಾನ್ಸೆಪ್ಟ್

ನೂತನ ಫೋಕ್ಸ್ ವ್ಯಾಗನ್ ಬೀಟ್ಲ್ ಡೆನಿಮ್ ಕಾನ್ಸೆಪ್ಟ್ ಮಾದರಿಯು ನೀಲಿ ಮೆಟ್ಯಾಲಿಕ್ ಬಣ್ಣದ ಜೊತೆಗೆ ವಿಶೇಷ ಕಡು ನೀಲಿ ಬಣ್ಣದ ಫ್ಯಾಬ್ರಿಕ್ ರೂಫ್ ಪಡೆದುಕೊಂಡಿದೆ.

ಬೀಟ್ಲ್ ಕಾನ್ಸೆಪ್ಟ್ ಆರ್ ಲೈನ್

ಬೀಟ್ಲ್ ಕಾನ್ಸೆಪ್ಟ್ ಆರ್ ಲೈನ್

ಇದು ಬೀಟ್ಲ್ ಮಾದರಿಯ ಕ್ರೀಡಾ ಮಾದರಿಯಾಗಿರಲಿದೆ. ಇಲ್ಲಿ ಸಂಸ್ಥೆಯು ಒರೆಕ್ಸ್ ವೈಟ್ ಪಿಯರ್ಲ್ ಬಣ್ಣದ ಆಯ್ಕೆಯನ್ನು ನೀಡಿದೆ. ಹಾಗೆಯೇ ಸ್ಪೋರ್ಟಿ ಹೊರಮೈ ಕಿಟ್ ಜೊತೆಗಿರಲಿದೆ.

ಬೀಟ್ಲ್ ಪಿಂಕ್ ಎಡಿಷನ್

ಬೀಟ್ಲ್ ಪಿಂಕ್ ಎಡಿಷನ್

ನಸುಗೆಂಪು ಮಾದರಿಯ ಬೀಟ್ಲ್ ಕಾರು ಹೆಚ್ಚು ಆಕರ್ಷಣೆಗೆ ಪಾತ್ರವಾಗಿದೆ. ಇದರಲ್ಲಿ ಕಪ್ಪು, ಕ್ರೋಮ್ ಹಾಗೂ ಅಲ್ಯೂಮಿನಿಯಂ ಭಾಗಗಳನ್ನು ಜೋಡಣೆ ಮಾಡಲಾಗಿದೆ.

ವೇವ್ ಕಾನ್ಸೆಪ್ಟ್

ವೇವ್ ಕಾನ್ಸೆಪ್ಟ್

ನೂತನ ಫೋಕ್ಸ್ ವ್ಯಾಗನ್ ವೇವ್ ಕಾನ್ಸೆಪ್ಟ್ ಕಾರಿನಲ್ಲಿ ಹಬನೆರೊ ಓರೆಂಜ್ ಮೆಟ್ಯಾಲಿಕ್ ಬಣ್ಣ ಬಳಿಯಲಾಗಿದೆ. ಇದು ಅಮೆರಿಕದ ಸಾಂಪ್ರದಾಯಿಕ ಶೈಲಿಯನ್ನು ಬಿಂಬಿಸುತ್ತದೆ.

English summary
The 2015 New York Auto Show has commenced on 1st April, 2015. German automobile giant Volkswagen has showcased four new versions of their popular hatchback the Beetle.
Story first published: Friday, April 3, 2015, 12:43 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark