ಸಕತ್ ಸ್ಟೈಲಿಷ್ ನಿಸ್ಸಾನ್ ಟೆರೆನೊ ವಿಶೇಷ ಆವೃತ್ತಿ ಬಿಡುಗಡೆ

By Nagaraja

ಹಾಗೊಂದು ವೇಳೆ ನಿಸ್ಸಾನ್ ಟೆರನೊ ಖರೀದಿ ಮಾಡುವ ಉದ್ದೇಶವಾದರೂ ಇದೆಯೇ ? ಹಾಗಿದ್ರೆ ಸ್ವಲ್ಪ ಇಲ್ಲಿ ಗಮನವಿಟ್ಟು ಕೇಳಿ. ನಿಸ್ಸಾನ್ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಕಾಂಪಾಕ್ಟ್ ಎಸ್ ಯುವಿ ಟೆರೆನೊ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಈ ನೂತನ ಮಾದರಿಯು 'ಟೆರನೊ ಗ್ರೂವ್' ಎಂದೆನಿಸಿಕೊಳ್ಳಲಿದೆ. ಕೇವಲ ಸೀಮಿತ 250 ಮಾದರಿಗಳು ಮಾತ್ರ ಇದು ನಿರ್ಮಾಣವಾಗಲಿದ್ದು, 11.45 ಲಕ್ಷ ರು.ಗಳಷ್ಟು ದೆಹಲಿ ಎಕ್ಸ್ ಶೋ ಬೆಲೆಯನ್ನು ಪಡೆದುಕೊಂಡಿದೆ. ಅಷ್ಟೇ ಯಾಕೆ ಬಾಲಿವುಡ್ ನಟ ಶುಶಾಂತ್ ರಾಜಪೂತ್ ಈ ಕಾರಿನ ಪ್ರಚಾರವನ್ನು ಮಾಡಲಿದ್ದಾರೆ.

ಸಕತ್ ಸ್ಟೈಲಿಷ್ ನಿಸ್ಸಾನ್ ಟೆರೆನೊ ವಿಶೇಷ ಆವೃತ್ತಿ ಬಿಡುಗಡೆ

ಪ್ರೀಮಿಯಂ ಎಸ್ ಯುವಿ ಎಂಬ ಹೊಸ ಹಣೆಪಟ್ಟಿಯೊಂದಿಗೆ ಹೆಚ್ಚು ಜನಪ್ರಿಯತೆ ಕಾಪಾಡಿಕೊಂಡಿರುವ ಟೆರನೊ ಈಗಾಗಲೇ ತನ್ನದೇ ಆದ ಮಾರಾಟ ವಲಯವನ್ನು ರೂಪಿಸಿದೆ. ಇದರಂತೆ ಮಾರಾಟಕ್ಕೆ ಇನ್ನಷ್ಟು ಉತ್ತೇಜನ ನೀಡುವ ಪ್ರಯತ್ನವನ್ನು ಜಪಾನ್ ನ ದೈತ್ಯ ಸಂಸ್ಥೆ ಮಾಡುತ್ತಿದೆ.

ಸಕತ್ ಸ್ಟೈಲಿಷ್ ನಿಸ್ಸಾನ್ ಟೆರೆನೊ ವಿಶೇಷ ಆವೃತ್ತಿ ಬಿಡುಗಡೆ

ನೂತನ ನಿಸ್ಸಾನ್ ಗ್ರೂವ್ ಮಾದರಿಯಲ್ಲಿ ಫಾಗ್ ಲ್ಯಾಂಪ್ ಸುತ್ತಲೂ ಕ್ರೋಮ್ ಆವರಣವನ್ನು ಕಾಣಬಹುದಾಗಿದೆ. ಇದು ಇನ್ನಷ್ಟು ಆಕರ್ಷಣೆಗೆ ಕಾರಣವಾಗಿದೆ.

ಸಕತ್ ಸ್ಟೈಲಿಷ್ ನಿಸ್ಸಾನ್ ಟೆರೆನೊ ವಿಶೇಷ ಆವೃತ್ತಿ ಬಿಡುಗಡೆ

ಅದೇ ರೀತಿ ವಿಶೇಷ ವೈಶಿಷ್ಟ್ಯಗಳನ್ನು ಪಡೆಯಲಿದೆ. ಈ ಪೈಕಿ ಎಲ್ ಇಡಿ ಸ್ಕಫ್ ಪ್ಲೇಟ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಸಕತ್ ಸ್ಟೈಲಿಷ್ ನಿಸ್ಸಾನ್ ಟೆರೆನೊ ವಿಶೇಷ ಆವೃತ್ತಿ ಬಿಡುಗಡೆ

ಹಾಗೆಯೇ ವಿಶೇಷ ಫ್ಲೋರ್ ಮ್ಯಾಟ್ ಗಳನ್ನು ನೀವು ಕಾಣಬಹುದಾಗಿದೆ. ಇವೆಲ್ಲದರಲ್ಲೂ ಟೆರನೊ ಲಾಂಛನವನ್ನು ಕಾಣಬಹುದಾಗಿದೆ.

ಸಕತ್ ಸ್ಟೈಲಿಷ್ ನಿಸ್ಸಾನ್ ಟೆರೆನೊ ವಿಶೇಷ ಆವೃತ್ತಿ ಬಿಡುಗಡೆ

ಇನ್ನು ಹಿಂದುಗಡೆ ಬಾಗಿಲಿನ ಅಂಚಿನಲ್ಲೂ ಕ್ರೋಮ್ ರೇಖೆಯನ್ನು ನೋಡಬಹುದಾಗಿದೆ.

ಸಕತ್ ಸ್ಟೈಲಿಷ್ ನಿಸ್ಸಾನ್ ಟೆರೆನೊ ವಿಶೇಷ ಆವೃತ್ತಿ ಬಿಡುಗಡೆ

ಒಟ್ಟಿನಲ್ಲಿ ಸಾಮಾನ್ಯ ಮಾದರಿಗಿಂತಲೂ ದೇಶದ ಗ್ರಾಹಕರು ಹೆಚ್ಚು ಬಯಸುವ ಕ್ರೋಮ್ ಫಿನಿಶಿಂಗ್ ನೀಡಲಾಗಿದೆ. ಮೇಲ್ಗಡೆ ರೂಫ್ ರೈಲ್ ನಲ್ಲೂ ಇದು ಪ್ರತಿಫಲಿಸುತ್ತಿದೆ.

ಸಕತ್ ಸ್ಟೈಲಿಷ್ ನಿಸ್ಸಾನ್ ಟೆರೆನೊ ವಿಶೇಷ ಆವೃತ್ತಿ ಬಿಡುಗಡೆ

ನೂತನ ವಿಶೇಷ ಮಾದರಿಯ ಪ್ರಮುಖ ಆಕರ್ಷಣೆಯೆಂದರೆ ರಾಕ್ ಫೋರ್ಡ್ ಫಾಸ್ ಗೇಟ್ ಸೌಂಡ್ ಸಿಸ್ಟಂ ಆಗಿರಲಿದೆ. ಗರಿಷ್ಠ ನಿರ್ವಹಣೆಯ ಕಾರು ಆಡಿಯೋ ವ್ಯವಸ್ಥೆಗಳಲ್ಲಿ ರಾಕ್ ಫೋರ್ಡ್ ಮುಂಚೂಣಿಯಲ್ಲಿದೆ.

ಸಕತ್ ಸ್ಟೈಲಿಷ್ ನಿಸ್ಸಾನ್ ಟೆರೆನೊ ವಿಶೇಷ ಆವೃತ್ತಿ ಬಿಡುಗಡೆ

ಟೈಲ್ ಲ್ಯಾಂಪ್ ಸಹ ಕ್ರೋಮ್ ನಿಂದ ಆವರಿಸಲ್ಪಟ್ಟಿದೆ. ಈಗ ಆಕರ್ಷಕ ವೀಡಿಯೋಗಾಗಿ ಮುಂದಿನ ಸ್ಲೈಡ್ ನತ್ತ ಮುಂದುವರಿಯಿರಿ.

ನಿಸ್ಸಾನ್ ಟೆರೆನೊ ಗ್ರೂಪ್ ವಿಶೇಷ ಆವೃತ್ತಿ

Most Read Articles

Kannada
English summary
Nissan India has launched its limited edition model of Terrano compact SUV. The Japanese manufacturer has christened this model as Terrano Groove.
Story first published: Thursday, May 14, 2015, 15:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X