ಡಸ್ಟರ್ 4x4, ಟೆರೆನೊ ಆಲ್ ‌ವೀಲ್ ಡ್ರೈವ್ ನಿರೀಕ್ಷಿಸಿ

By Nagaraja

ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಬಳಕೆ ಮಾಡುವವರ ಪಾಲಿಗೆ ಆಲ್ ವೀಲ್ ಡ್ರೈವ್ ಅತಿ ಪ್ರಾಮುಖ್ಯವೆನಿಸುತ್ತದೆ. ಇದು ಎಸ್‌ಯುವಿ ಚಾಲನೆಯನ್ನು ಇನ್ನಷ್ಟು ಸುಲಭವಾಗಿಸಲಿದೆ.

ಇಷ್ಟೆಲ್ಲ ಆದರೂ ಸಮಕಾಲೀನ ಮಾರುಕಟ್ಟೆಯಲ್ಲಿ ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ತಮ್ಮ ಕಾಂಪಾಕ್ಟ್ ಎಸ್‌ಯುವಿ ಕಾರಿನಲ್ಲಿ 4x4 ಡ್ರೈವ್ ವ್ಯವಸ್ಥೆ ನೀಡಲು ಹಿಂಜರಿಯುತ್ತದೆ. ರೆನೊ ಡಸ್ಟರ್, ನಿಸ್ಸಾನ್ ಟೆರನೊ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಈ ಸಾಲಿಗೆ ಸೇರಿಕೊಂಡಿದೆ.

ಡಸ್ಟರ್ 4x4, ಟೆರೆನೊ ಆಲ್ ‌ವೀಲ್ ಡ್ರೈವ್ ನಿರೀಕ್ಷಿಸಿ

ಇದರ ಹಿಂದಿರುವ ಪ್ರಮುಖ ಕಾರಣವೆಂದರೆ ಸಾಮಾನ್ಯ ಆವೃತ್ತಿಗಳಿಗೆ ಹೋಲಿಸಿದರೆ ಆಲ್ ವೀಲ್ ಡ್ರೈವ್ ಸ್ವಲ್ಪ ದುಬಾರಿಯೆನಿಸುತ್ತದೆ. ಹಾಗೆಯೇ ಇದು ಹೆಚ್ಚು ಭಾರ ಹೊಂದಿರಲಿದೆ. ಅಷ್ಟೇ ಅಲ್ಲದೆ ಇಂಧನ ಕ್ಷಮತೆಯನ್ನು ಸಹ ಕಡಿಮೆ ಮಾಡಲಿದೆ.

ಡಸ್ಟರ್ 4x4, ಟೆರೆನೊ ಆಲ್ ‌ವೀಲ್ ಡ್ರೈವ್ ನಿರೀಕ್ಷಿಸಿ

ಮೇಲೆ ತಿಳಿಸಿದ ಎಲ್ಲ ವಿಚಾರಗಳಿಗೆ ಭಾರತೀಯ ಗ್ರಾಹಕರು ಅತಿ ಹೆಚ್ಚು ಮಹತ್ವವನ್ನು ಕೊಡುವುದರಿಂದ ಫೋರ್ ವೀಲ್ ಡ್ರೈವ್ ಪರಿಚಯಿಸಲು ವಾಹನ ತಯಾರಕ ಸಂಸ್ಥೆಗಳು ಹಿಂದೇಟು ಹಾಕುತ್ತಿದೆ.

ಡಸ್ಟರ್ 4x4, ಟೆರೆನೊ ಆಲ್ ‌ವೀಲ್ ಡ್ರೈವ್ ನಿರೀಕ್ಷಿಸಿ

ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ದೇಶದಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಇದರಂತೆ ನೂತನ ಫೋರ್ ವೀಲ್ ಡ್ರೈವ್ ಪರಿಚಯಿಸಲು ಡಸ್ಟರ್ ಹಾಗೂ ಟೆರನೊ ಮುನ್ನುಗ್ಗುತ್ತಿದೆ.

ಡಸ್ಟರ್ 4x4, ಟೆರೆನೊ ಆಲ್ ‌ವೀಲ್ ಡ್ರೈವ್ ನಿರೀಕ್ಷಿಸಿ

ವರದಿಗಳ ಪ್ರಕಾರ ಪ್ರಸಕ್ತ ಸಾಲಿನ ದ್ವಿತಿಯಾರ್ಧದಲ್ಲಿ ರೆನೊ ಡಸ್ಟರ್ 4x4 ಹಾಗೂ ನಿಸ್ಸಾನ್ ಟೆರನೊ ಆಲ್ ವೀಲ್ ಡ್ರೈವ್ ಪರಿಚಯವಾಗಲಿದೆ. ಈ ಸೌಲಭ್ಯಗಳು ಟಾಪ್ ವೆರಿಯಂಟ್‌ಗಳಲ್ಲಿ (ಡಸ್ಟರ್ ಆರ್‌‌xಝಡ್, ಟೆರನೊ ಎಕ್ಸ್‌ವಿ) ಮಾತ್ರ ಲಭ್ಯವಾಗಲಿದೆ.

ಡಸ್ಟರ್ 4x4, ಟೆರೆನೊ ಆಲ್ ‌ವೀಲ್ ಡ್ರೈವ್ ನಿರೀಕ್ಷಿಸಿ

ಡಸ್ಟರ್ ಆರ್xಝಡ್ ಹಾಗೂ ಟೆರನೊ ಎಕ್ಸ್‌ವಿ ಡೀಸೆಲ್ ಫ್ರಂಟ್ ವೀಲ್ ಡ್ರೈವ್ ಕಾರುಗಳು ಅನುಕ್ರಮವಾಗಿ 12.67 ಹಾಗೂ 12.78 ಲಕ್ಷ ರು.ಗಳಷ್ಟು ದುಬಾರಿಯಾಗಿದೆ. ಅಂದರೆ ಇದೀಗ ಆಗಮನವಾಗಲಿರುವ 4x4 ವರ್ಷನ್‌ ಇದಕ್ಕಿಂತಲೂ 75,000 ರು.ಗಳಿಂದ 1 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಲಿದೆ.

Most Read Articles

Kannada
English summary
However, in light of growing demand and to bring about differentiation and to get new customers the Renault Nissan Alliance is said to have decided in favour launching four wheel drive variants of their compact SUVs, the Duster & Terrano.
Story first published: Thursday, March 13, 2014, 10:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X