2016ರಲ್ಲಿ ದಟ್ಸನ್ ಅಗ್ಗದ ಕಾರು ಭಾರತಕ್ಕೆ
ದಟ್ಸನ್ ಬಜೆಟ್ ಕಾರು ಮಾಲಿಕತ್ವದ ಜಪಾನ್ ಮೂಲಕ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್, ಮುಂದಿನ ವರ್ಷ ಮಗದೊಂದು ಅಗ್ಗದ ಮಾದರಿ ದೇಶಕ್ಕೆ ಪರಿಚಯಿಸಲಿದೆ. ಈಗಗಾಲೇ ದಟ್ಸನ್ ಬ್ರಾಂಡ್ ನಲ್ಲಿ ಎರಡು ಮಾದರಿಗಳನ್ನು ಪರಿಚಯಿಸಿರುವ ನಿಸ್ಸಾನ್ ಗ್ರಾಹಕರ ಕೈಗೆಟುಕುವ ದರಗಳಲ್ಲಿ ನೂತನ ಮಾದರಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.
ಇದುವರೆಗೆ ಭಾರತದಲ್ಲಿ ಬಿಡುಗಡೆಯಾದ ದಟ್ಸನ್ ಮಾದರಿಗಳು:
- ಹ್ಯಾಚ್ ಬ್ಯಾಕ್ ವಿಭಾಗ - ದಟ್ಸನ್ ಗೊ
- ಎಂಪಿವಿ ವಿಭಾಗ - ದಟ್ಸನ್ ಗೊ ಪ್ಲಸ್ (4 ಮೀಟರ್ ಒಳಗಡೆ)


2016ನೇ ಸಾಲಿನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ನಿಸ್ಸಾನ್ ಹಾಗೂ ದಟ್ಸನ್ ತಳಹದಿಯಲ್ಲಿ ನಿರ್ಮಾಣವಾಗಲಿದೆ. ಇದನ್ನು 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪರಿಚಯಿಸಲಾಗಿದ್ದು ರೆಡಿ-ಗೊ ಕಾನ್ಸೆಪ್ಟ್ ಮಾದರಿಯಿಂದ ಪ್ರೇರಣೆ ಪಡೆದು ರಚಿಸಲಾಗುವುದು.

ವಿಶೇಷವೆಂದರೆ ಐ2 ಎಂಬ ಹೆಸರು ಪಡೆದುಕೊಂಡಿರುವ ದಟ್ಸನ್ ಸಣ್ಣ ಕಾರು ಭಾರತದಲ್ಲೇ ತಯಾರಿಯಾಗಲಿದೆ. ಇದು ಸ್ಪರ್ಧಾತ್ಮಕ ಬೆಲೆ ಕಾಪಾಡಲು ಸಹಕಾರಿಯಾಗಲಿದೆ. ಒಟ್ಟಿನಲ್ಲಿ ಸುರಕ್ಷತೆ ಮುಂತಾದ ಗುಣಮಟ್ಟತೆಯನ್ನು ಕಾಯ್ದುಕೊಳ್ಳುವಲ್ಲಿ ದಟ್ಸನ್ ಹೇಗೆ ಯಶಸ್ವಿಯಾಗಲಿದೆ ಎಂಬುದು ಮುಂದಿನ ದಿನಗಳಲ್ಲಷ್ಟೇ ತಿಳಿದು ಬರಲಿದೆ.


Click it and Unblock the Notifications








