ರೆನೊ ಕ್ವಿಡ್ ಪ್ರಾಯೋಗಿಕ ಸಂಚಾರ ಪರೀಕ್ಷೆ; ಬಿಡುಗಡೆ ಯಾವಾಗ?

Written By:

ಬಹುನಿರೀಕ್ಷಿತ ರೆನೊ ಕ್ವಿಡ್ ಬಿಡುಗಡೆ ಇನ್ನು ಹತ್ತಿರವಾಗುತ್ತಿರುವುದಕ್ಕೆ ಮುನ್ಸೂಚನೆಗಳು ಲಭಿಸ ತೊಡಗಿದ್ದು, ಚೆನ್ನೈ ರಸ್ತೆಯಲ್ಲಿ ಪ್ರಾಯೋಗಿಕ ಸಂಚಾರ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ.

ನೂತನ ರೆನೊ ಕ್ವಿಡ್ ಬಗ್ಗೆ ನಿಮಗೆ ಗೊತ್ತಿಲ್ಲವಾದ್ದಲ್ಲಿ ಈ ಬಗೆಗಿನ ಕೆಲವೊಂದು ಕುತೂಹಲದಾಯಕ ಮಾಹಿತಿಗಳನ್ನು ನಾವಿಲ್ಲಿ ಬಹಿರಂಗ ಮಾಡಲಿದ್ದೇವೆ.

ರೆನೊ ಕ್ವಿಡ್

ಫ್ರಾನ್ಸ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ, ಕಳೆದ ಮೇ ತಿಂಗಳಲ್ಲಿ ಚೆನ್ನೈನಲ್ಲಿ ಹೊಚ್ಚ ಹೊಸ ರೆನೊ ಕ್ವಿಡ್ ಕಾರನ್ನು ಅನಾವರಣಗೊಳಿಸಿತ್ತು. ಇದ ದಶಕದಿಂದಲೂ ಭಾರತ ವಾಹನ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಆಲ್ಟೊ ಕಾರಿಗೆ ನೇರ ಪ್ರತಿಸ್ಪರ್ಧಿಯಾಗಲಿದ್ದು, ಭಾರಿ ಸಂಚಲನವನ್ನುಂಟು ಮಾಡುವ ಸಾಧ್ಯತೆಯಿದೆ.

ರೆನೊ ಕ್ವಿಡ್ ಸಣ್ಣ ಕಾರಿನ ಅಂದಾಜು ಬೆಲೆ ಮೂರರಿಂದ ನಾಲ್ಕು ಲಕ್ಷ ರು.ಗಳಾಗಿರಲಿದೆ. ಅಂತೆಯೇ 800 ಸಿಸಿ ಎಂಜಿನ್ ಆಳವಡಿಕೆಯಾಗುವ ಸಾಧ್ಯತೆಯಿದೆ. ಮಗದೊಂದು ಮೂಲದ ಪ್ರಕಾರ ಒಂದು ಲೀಟರ್ ಎಂಜಿನ್ ನೊಂದಿಗೆ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಆಯ್ಕೆಯೂ ಸಿಗಲಿದೆ.

ಕೆಲವು ಗಮನಾರ್ಹ ವೈಶಿಷ್ಟ್ಯಗಳು ಇಂತಿದೆ:

  • ಎಸಿ,
  • 2 ಡಿನ್ ಆಡಿಯೋ ಸಿಸ್ಟಂ,
  • ಬ್ಲೂಟೂತ್,
  • ಪವರ್ ವಿಂಡೋ,
  • ಮೀಡಿಯಾ ನೇವಿಗೇಷನ್,
  • ಏಳು ಇಂಚುಗಳ ಪರದೆ

ಅಂತಿಮವಾಗಿ ರೆನೊ ಕ್ವಿಡ್ ಮುಂಬರುವ ದೀಪಾವಳಿ ಹಬ್ಬದ ಆವೃತ್ತಿಯ ಅಸುಪಾಸಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಆದರೆ ಈ ಬಗ್ಗೆ ಸಂಸ್ಥೆಯಿಂದ ಇನ್ನಷ್ಟೇ ಅಧಿಕೃತ ಪುಷ್ಠೀಕರಣ ಸಿಗಬೇಕಿದೆ.

ಅದ್ಭುತ ರಸ್ತೆ ಸಾನಿಧ್ಯದೊಂದಿಗೆ ರೆನೊ ಕ್ವಿಡ್ ಪರೀಕ್ಷೆ

Read more on ರೆನೊ renault
English summary
Renault Kwid Caught Testing, Looks Better On Road Than Competitors
Story first published: Wednesday, August 12, 2015, 7:07 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark