ರೆನೊ ಟಾಲಿಸ್ ಮ್ಯಾನ್ ಭಾರತಕ್ಕೆ ಬರುತ್ತಾ? ನಾ ಪತಾ..!
ಫ್ರಾನ್ಸ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ ಅಂತರಾಷ್ಟ್ರೀಯ ಮಾರುಕಟ್ಟೆಗೆ ಅತಿ ನೂತನ ಟಾಲಿಸ್ ಮ್ಯಾನ್ (Talisman) ಸೆಡಾನ್ ಕಾರನ್ನು ಅನಾವರಣಗೊಳಿಸಿದೆ. ಪ್ರಸ್ತುತ ಕಾರು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆಯೇ ಎಂಬುದು ವಾಹನ ಪ್ರೇಮಿಗಳಲ್ಲಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಲ್ಯಾಗೂನಾ ಸೆಡಾನ್ ಕಾರನ್ನು ಟಾಲಿಸ್ ಮ್ಯಾನ್ ಸೆಡಾನ್ ಕಾರು ಬದಲಾಯಿಸಿಕೊಳ್ಳಲಿದೆ. ನೂತನ ಮಾದರಿಯು 2016ನೇ ಸಾಲಿನಲ್ಲಿ ಅನೇಕ ಜಾಗತಿಕ ಮಾರುಕಟ್ಟೆಗಳನ್ನು ಪ್ರವೇಶ ಪಡೆಯಲಿದೆ.

ಇದರ ಮುಂದುವರಿದ ಭಾಗವೆಂಬಂತೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ 2015 ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ರೆನೊ ಸಂಸ್ಥೆಯು ಟಾಲಿಸ್ ಮ್ಯಾನ್ ಸೆಡಾನ್ ಕಾರಿನ ಜೊತೆಗೆ ಎಸ್ಟೇಟ್ ಮಾದರಿಯನ್ನು ಅನಾವರಣಗೊಳಿಸಲಿದೆ.
ಈ ಸಂದರ್ಭದಲ್ಲಿ ವಾಹನ ಪ್ರೇಮಿಗಳು ರೆನೊ ಹೊಸ ಕಾರನ್ನು ಬಳಕ ಸಮೀಪದಿಂದ ನೋಡುವ ಅವಕಾಶ ಪಡೆಯಲಿದ್ದಾರೆ. ಅಂದ ಹಾಗೆ ಟಾಲಿಸ್ ಮ್ಯಾನ್ ಎರಡು ಡೀಸೆಲ್ ಹಾಗೂ ಏಕೈಕ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ. ಇನ್ನು ಆಲ್ ವೀಲ್ ಡ್ರೈವ್ ವ್ಯವಸ್ಥೆಯು ಇರುವ ಸಾಧ್ಯತೆಯಿದೆ.

ಚಾಲನಾ ವಿಧಗಳು
- ಕಂಫರ್ಟ್,
- ಇಕೊ,
- ನ್ಯೂಟ್ರಲ್,
- ಸ್ಪೋರ್ಟ್



Click it and Unblock the Notifications








