ಹ್ಯುಂಡೈ ಕ್ರೆಟಾಗೆ ಭಾರಿ ಬೇಡಿಕೆ; ಕಾರಣ ಏನು ?

ಕೆಲವು ತಿಂಗಳುಗಳ ಹಿಂದೆಯಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಹ್ಯುಂಡೈ ಕ್ರೆಟಾ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಕ್ಕೆ (ಎಸ್‌ಯುವಿ) ಭಾರಿ ಬೇಡಿಕೆ ವ್ಯಕ್ತವಾಗುತ್ತಿದ್ದು, ಮುಂಗಡ ಬುಕ್ಕಿಂಗ್ ಮಾಡಿದ ಗ್ರಾಹಕರು ತಮ್ಮ ಕಾರಿನ ಆಗಮನಕ್ಕಾಗಿ ಆರು ತಿಂಗಳಷ್ಟು ಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

2015 ಜುಲೈ 21 ಬಿಡುಗಡೆಗೂ ಮುನ್ನವೇ 10,000 ಯುನಿಟ್ ಗಳಷ್ಟು ಮುಂಗಡ ಬುಕ್ಕಿಂಗ್ ದಾಖಲಿಸಿರುವ ಹ್ಯುಂಡೈ ಕ್ರೆಟಾ ಆಗಲೇ 40,000 ಯುನಿಟ್ ಗಳ ಬುಕ್ಕಿಂಗ್ ಸಂಖ್ಯೆಯನ್ನು ದಾಟಿದೆ. ಅಷ್ಟಕ್ಕೂ ನೂತನ ಹ್ಯುಂಡೈ ಕ್ರೆಟಾ ಇಷ್ಟೊಂದು ಪ್ರಯಾಣದಲ್ಲಿ ವಾಹನ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಲಿರುವ ಕಾರಣಗಳೇನು ? ಮುಂದಕ್ಕೆ ಓದಿ

ಅದ್ಭುತ ರಸ್ತೆ ಸಾನಿಧ್ಯ

ಅದ್ಭುತ ರಸ್ತೆ ಸಾನಿಧ್ಯ

ಒಂದೇ ವಾಕ್ಯದಲ್ಲಿ ಹೇಳಬೇಕಾದರೆ ಪರಿಣಾಮಕಾರಿ ವಿನ್ಯಾಸ ಮೈಗೂಡಿಸಿರುವ ಬಂದಿರುವ ಹ್ಯುಂಡೈ ಕ್ರೆಟಾ, ಅದ್ಭುತ ರಸ್ತೆ ಸಾನಿಧ್ಯವೇ ಕಾರಿನ ಆಕರ್ಷಣೆಗೆ ಕಾರಣವಾಗಿದೆ. ಅಲ್ಲದೆ ಎಲ್ಲ ಹಂತದಲ್ಲೂ ಮಾರುತಿ ಎಸ್ ಕ್ರಾಸ್ ಮಾದರಿಯನ್ನು ಹಿಮ್ಮೆಟ್ಟಿಸಿದೆ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಈ ವಿಭಾಗದಲ್ಲಿ ರೆನೊ ಡಸ್ಟರ್, ಮಹೀಂದ್ರ ಎಕ್ಸ್‌ಯುವಿ500 ಹಾಗೂ ಮಾರುತಿ ಎಸ್-ಕ್ರಾಸ್ ಮಾದರಿಗಳನ್ನು ಪರಿಗಣಿಸಿದಾಗ ನೂತನ ಕ್ರೆಟಾ ತಾಜಾತನದ ವಿನ್ಯಾಸವನ್ನು ಪಡೆದುಕೊಂಡಿದೆ.

ವಿನ್ಯಾಸ ಸ್ಪೂರ್ತಿ

ವಿನ್ಯಾಸ ಸ್ಪೂರ್ತಿ

ಹ್ಯುಂಡೈ ಫ್ಲೂಯಿಡಿಕ್ 2.0 ಡಿಸೈನ್ ತಂತ್ರಗಾರಿಕೆಯಿಂದ ಸ್ಪೂರ್ತಿ ಪಡೆದಿರುವ ಹ್ಯುಂಡೈ ಕ್ರೆಟಾ, ದೇಶದ ಅತ್ಯಂತ ಜನಪ್ರಿಯ ಐ20 ಹ್ಯಾಚ್ ಬ್ಯಾಕ್ ಕಾರಿನ ತಳಹದಿಯಲ್ಲಿ ನಿರ್ಮಾಣವಾಗಿದೆ.

ಆಯಾಮ

ಆಯಾಮ

4270 ಎಂಎಂ ಉದ್ದ, 1780 ಎಂಎಂ ಅಗಲ, 1630 ಎಂಎಂ ಎತ್ತರ ಹಾಗೂ 2590 ಎಂಎಂ ಚಕ್ರಾಂತರವನ್ನು ಹೊಂದಿರುವ ಹ್ಯುಂಡೈ ಕ್ರೆಟಾ, ರೆನೊ ಡಸ್ಟರ್ ಹಾಗೂ ನಿಸ್ಸಾನ್ ಟೆರನೊಗಿಂತಲೂ ಹೆಚ್ಚು ಸ್ಥಳಾವಕಾಶವನ್ನು ಪಡೆದುಕೊಂಡಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಪೆಟ್ರೋಲ್ (ರು.ಗಳಲ್ಲಿ)

1.6 ಲೀಟರ್ ಡ್ಯುಯಲ್ ವಿಟಿವಿಟಿ 6 ಸ್ಪೀಡ್ ಮ್ಯಾನುವಲ್ ಬೇಸ್: 869,888

1.6 ಲೀಟರ್ ಡ್ಯುಯಲ್ ವಿಟಿವಿಟಿ 6 ಸ್ಪೀಡ್ ಮ್ಯಾನುವಲ್ ಎಸ್: 969,077

1.6 ಲೀಟರ್ ಡ್ಯುಯಲ್ ವಿಟಿವಿಟಿ 6 ಸ್ಪೀಡ್ ಮ್ಯಾನುವಲ್ ಎಸ್ಎಕ್ಸ್ ಪ್ಲಸ್: 1,134,453

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಡೀಸೆಲ್ (ರು.ಗಳಲ್ಲಿ)

1.4 ಲೀಟರ್ ಸಿಆರ್‌ಡಿಐ 6 ಸ್ಪೀಡ್ ಮ್ಯಾನುವಲ್ ಬೇಸ್: 958,892

1.4 ಲೀಟರ್ ಸಿಆರ್‌ಡಿಐ 6 ಸ್ಪೀಡ್ ಮ್ಯಾನುವಲ್ ಎಸ್: 1,055,870

1.4 ಲೀಟರ್ ಸಿಆರ್‌ಡಿಐ 6 ಸ್ಪೀಡ್ ಮ್ಯಾನುವಲ್ ಎಸ್ ಪ್ಲಸ್: 1,160,504

1.6 ಲೀಟರ್ ಸಿಆರ್‌ಡಿಐ ವಿಜಿಟಿ 6 ಸ್ಪೀಡ್ ಮ್ಯಾನುವಲ್ ಎಸ್ ಎಕ್ಸ್: 1,175,594

1.6 ಲೀಟರ್ ಸಿಆರ್‌ಡಿಐ ವಿಜಿಟಿ 6 ಸ್ಪೀಡ್ ಮ್ಯಾನುವಲ್ ಎಸ್ ಎಕ್ಸ್ ಪ್ಲಸ್: 1,285,310

1.6 ಲೀಟರ್ ಸಿಆರ್‌ಡಿಐ ವಿಜಿಟಿ 6 ಸ್ಪೀಡ್ ಮ್ಯಾನುವಲ್ ಎಸ್ ಎಕ್ಸ್ (ಐಚ್ಛಿಕ): 1,379,338

1.6 ಲೀಟರ್ ಸಿಆರ್‌ಡಿಐ ವಿಜಿಟಿ 6 ಸ್ಪೀಡ್ ಆಟೋಮ್ಯಾಟಿಕ್ ಎಸ್ ಎಕ್ಸ್ ಪ್ಲಸ್: 1,376,910

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

1.6 ಲೀಟರ್ ಪೆಟ್ರೋಲ್ : 123 ಅಶ್ವಶಕ್ತಿ, ಮ್ಯಾನುವಲ್

1.6 ಲೀಟರ್ ಸಿಆರ್‌ಡಿಐ ವಿಜಿಟಿ ಡೀಸೆಲ್ ಎಂಜಿನ್ : 128 ಅಶ್ವಶಕ್ತಿ, ಮ್ಯಾನುವಲ್

ಆಟೋಮ್ಯಾಟಿಕ್ 1.4 ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ : 90 ಅಶ್ವಶಕ್ತಿ, ಮ್ಯಾನುವಲ್

ಸುರಕ್ಷತೆ

ಸುರಕ್ಷತೆ

  • ಡ್ಯುಯಲ್ ಏರ್ ಬ್ಯಾಗ್,
  • ಬದಿ ಮತ್ತು ಕರ್ಟೈನ್ ಏರ್ ಬ್ಯಾಗ್,
  • ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ರಿ
  • ವರ್ಸ್ ಪಾರ್ಕಿಂಗ್ ಕ್ಯಾಮೆರಾ,
  • ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ (ಇಎಸ್‌ಸಿ),
  • ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್ (ವಿಎಸ್ಎಂ),
  • ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಕಂಟ್ರೋಲ್ (ಎಚ್ಎಸಿ)
  • ವಿಶಿಷ್ಟತೆ, ಅನುಕೂಲತೆ

    ವಿಶಿಷ್ಟತೆ, ಅನುಕೂಲತೆ

    • ಎಫ್‌ಎಟಿಸಿ (FATC) ಜೊತೆ ಕ್ಲಸ್ಟರ್ ಐಯನೈಜರ್ (Cluster ionizer),
    • ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್,
    • ಹಿಂದುಗಡೆಯೂ ಎಸಿ ವೆಂಟ್ಸ್,
    • ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್,
    • ಆಡಿಯೋ ವಿಡಿಯೋ ನೇವಿಗೇಷನ್ ಸಿಸ್ಟಂ (ಎವಿಎನ್),
    • 5 ಇಂಚಿನ ಟಚ್ ಸ್ಕ್ರೀನ್ ಆಡಿಯೋ ಸಿಸ್ಟಂ,
    • ಸೂಪರ್ ವಿಷನ್ ಕ್ಲಸ್ಟರ್,
    • ಸ್ಮಾರ್ಟ್ ಕೀ ಜೊತೆ ಪುಶ್ ಬಟನ್ ಸ್ಟ್ಯಾರ್ಟ್,
    • 17 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್,
    • ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
    • ಎಲ್‌ಇಡಿ ಸ್ಥಾನಿಕ ಲ್ಯಾಂಪ್, ಲೆಥರ್ ಸೀಟು,
    • ಮೈಲೇಜ್:

      ಮೈಲೇಜ್:

      • ಕ್ರೆಟಾ ಪೆಟ್ರೋಲ್ 1.6: 15.29 km/l
      • ಕ್ರೆಟಾ ಡೀಸೆಲ್ 1.4: 21.38 km/l
      • ಕ್ರೆಟಾ ಡೀಸೆಲ್ 1.6 ಮ್ಯಾನುವಲ್: 19.67 km/l
      • ಕ್ರೆಟಾ ಡೀಸೆಲ್ 1.6 ಆಟೋಮ್ಯಾಟಿಕ್: 17.01 km/l

Most Read Articles

Kannada
English summary
Six Months Waiting Period For Hyundai Creta In India
Story first published: Friday, October 16, 2015, 12:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X