ಬೋಲ್ಟ್ ಪ್ರಚಾರಕ್ಕಾಗಿ ಮಗದೊಂದು ಜಾಹೀರಾತಿನ ಪರಿಚಯ

Written By:

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರಿನ ಪ್ರಚಾರಾರ್ಥ ಮಗದೊಂದು ಆಕರ್ಷಕ ಜಾಹೀರಾತುವೊಂದನ್ನು ಬಿಡುಗಡೆ ಮಾಡಿದೆ.

ಇದು ಬೋಲ್ಟ್ ಪ್ರಚಾರಾರ್ಥ ಟಾಟಾದಿಂದ ಬಿಡುಗಡೆಯಾಗುತ್ತಿರುವ ಎರಡನೇ ವೀಡಿಯೋ ಆಗಿದೆ. ಈ ಬಾರಿ ಟಾಟಾದ ಹೊಸ ಕನೆಕ್ಟ್ ನೆಕ್ಸ್ಟ್ ಸಿದ್ಧಾಂತದ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.

To Follow DriveSpark On Facebook, Click The Like Button
tata bolt

ಆರಂಭದಲ್ಲಿ ಗೆಟ್ ಸೆಟ್ ಬೋಲ್ಟ್ ಎಂಬ ಟಿ.ವಿ. ಜಾಹೀರಾತು ಬಿಡುಗಡೆ ಮಾಡಿದ ಟಾಟಾ ಮಲ್ಟಿ ಡ್ರೈವ್ ಮಾದರಿಯನ್ನು ಪರಿಚಯಿಸಿತ್ತು. ಇದರಲ್ಲಿ ಇಕೊ, ಸಿಟಿ ಹಾಗೂ ಸ್ಪೋರ್ಟ್ ಮಾದರಿಗಳನ್ನು ಗಮನ ಕೇಂದ್ರಿಕರಿಸಲಾಗಿತ್ತು.

ಡ್ಯುಯಲ್ ಏರ್ ಬ್ಯಾಗ್, ಒಂಬತ್ತನೇ ತಲೆಮಾರಿನ ಬಾಷ್ ಎಬಿಎಸ್ ಸಿಸ್ಟಂ, ಇಬಿಡಿ, ಕಾರ್ನರ್ ಸ್ಟೆಬಿಲಿಟಿ ಹಾಗೂ ಸ್ಮಾರ್ಟ್ ಫೋನ್ ಸಂಪರ್ಕಿತ ಮ್ಯಾಪ್ ಮೈ ಸಿಸ್ಟಂ ಟಾಟಾ ಬೋಲ್ಟ್ ಕಾರಿನ ಇತರ ವೈಶಿಷ್ಟ್ಯಗಳಾಗಿದೆ.

ಹೊಸ ಟಾಟಾ ಬೋಲ್ಟ್ ಪೆಟ್ರೋಲ್ ಹಾಗೂ ಡೀಸೆಲ್ ಬೆಂಗಳೂರು ಎಕ್ಸ್ ಶೋ ರೂಂ ಪ್ರಾರಂಭಿಕ ದರಗಳು ಅನುಕ್ರಮವಾಗಿ 4.50 ಹಾಗೂ 5.59 ಲಕ್ಷ ರು.ಗಳಿಷ್ಟಿದೆ.

ವೀಡಿಯೋ ವೀಕ್ಷಿಸಿ

<iframe width="600" height="450" src="https://www.youtube.com/embed/bIArHR6cHhE" frameborder="0" allowfullscreen></iframe>
English summary
Tata Motors is betting high on the success of their new hatchback. They have already launched their first TVC for Bolt called ‘Get Set Bolt'. Now the manufacturer is aggressively promoting their vehicle and has come up with a second TVC for their all new vehicle.&#13;
Story first published: Saturday, January 31, 2015, 8:29 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark