ದೇಶದ ಅತ್ಯಂತ ನಂಬಿಕೆಗ್ರಸ್ತ ಕಾರು - ನ್ಯಾನೋ 'ಹ್ಯಾಟ್ರಿಕ್' ಸಾಧನೆ

Written By:

ಅನೇಕರಿಗೆ ಟಾಟಾ ನ್ಯಾನೋ ಬಗ್ಗೆ ಒಳ್ಳೆಯ ಅಭಿಪ್ರಾಯ ಇರಲಾರದು. ಆದರೆ 'ಬ್ರಾಂಡ್ ಟ್ರಸ್ಟ್ ರಿಪೋರ್ಟ್, ಇಂಡಿಯಾ ಸ್ಟಡಿ 2015' ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದೇಶದ ಅತ್ಯಂತ ನಂಬಿಕೆಗ್ರಸ್ತ ಹ್ಯಾಚ್‌ಬ್ಯಾಕ್ ಕಾರೆಂಬ ಗೌರವಕ್ಕೆ ನ್ಯಾನೋ ಪಾತ್ರವಾಗಿದೆ.

ಈ ಮೂಲಕ ಸತತವಾಗಿ ಮೂರನೇ ವರ್ಷವೂ ನಂಬಿಕೆಗ್ರಸ್ತ ಕಾರೆಂಬ ಗೌರವ ಗಿಟ್ಟಿಸಿಕೊಂಡಿರುವ ನ್ಯಾನೋ 'ಹ್ಯಾಟ್ರಿಕ್' ಸಾಧನೆ ಮಾಡಿದೆ. ನಿಮ್ಮ ಮಾಹಿತಿಗಾಗಿ ಬ್ರಾಂಡ್ ಟ್ರಸ್ಟ್ ರಿಪೋರ್ಟ್, ಇಂಡಿಯಾ ಸ್ಟಡಿ 2015 ಒಟ್ಟು 270 ವಿಭಾಗಗಳಲ್ಲಾಗಿ 19,000 ಯೂನಿಕ್ ಬ್ರಾಂಡ್‌ಗಳಿಂದ 1,000ದಷ್ಟು ನಂಬಿಕೆಗ್ರಸ್ತ ಬ್ರಾಂಡ್‌ಗಳನ್ನು ಪಟ್ಟಿ ಮಾಡಿತ್ತು. ಕಳೆದ ವರ್ಷವಷ್ಟೇ ನ್ಯಾನೋ ಟ್ವಿಸ್ಟ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಇದು ಯುವ ಸೇರಿದಂತೆ ಎಲ್ಲ ವಿಭಾಗದ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು.

tata nano twist

ನ್ಯಾನೋ ಪರವಾಗಿ ದೇಶದ ನಂಬಿಕೆಗ್ರಸ್ತ ಹ್ಯಾಚ್ ಬ್ಯಾಕ್ ಪ್ರಶಸ್ತಿ ಸ್ವೀಕರಿಸುತ್ತಾ ಮಾತನಾಡಿರುವ ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನ ವಾಣಿಜ್ಯ ವಿಭಾಗದ (ಪಿವಿಬಿಯು) ಮಾರ್ಕೆಟಿಂಗ್ ಕಮ್ಯೂನಿಕೇಷನ್ಸ್ ಮುಖ್ಯಸ್ಥ ಡೆಲ್ನಾ ಅವಾರಿ "ಟಾಟಾ ಮೋಟಾರ್ಸ್ ಸತತವಾಗಿ ಮೂರನೇ ಬಾರಿ ನಂಬಿಕೆಗ್ರಸ್ತ ಪ್ರಶಸ್ತಿ ಸ್ವೀಕರಿಸಲು ಹೆಮ್ಮೆಯಾಗುತ್ತಿದ್ದು, ಸಂಸ್ಥೆಯ ನೂತನ ಹೊರಿಜೊನೆಕ್ಸ್ಟ್ ನೀತಿಯು ಗ್ರಾಹಕರಲ್ಲಿ ಹೆಚ್ಚಿನ ನಂಬಿಕೆಯನ್ನುಂಟು ಮಾಡಿದೆ" ಎಂದಿದ್ದಾರೆ.

ಅಂದ ಹಾಗೆ ಟಾಟಾ ನ್ಯಾನೋ ಟ್ವಿಸ್ಟ್ ಎಕ್ಸ್‌ಟಿ 624 ಸಿಸಿ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸ್ಪಡುತ್ತಿದ್ದು, 37 ಅಶ್ವಶಕ್ತಿ (51 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು 4 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಕೂಡಾ ಪಡೆದಿದೆ. ಬ್ರಾಂಡ್ ಟ್ರಸ್ಟ್ ರಿಪೋರ್ಟ್ (ಇಂಡಿಯಾ) ಸ್ಟಡಿ, ವಾರ್ಷಿಕವಾಗಿ ದೇಶದ್ಯಾಂತ ಪ್ರಾಥಮಿಕ ಅಧ್ಯಯನವನ್ನು ನಡೆಸಿಕೊಂಡು ಬರುತ್ತಿದೆ. ಇದು ಸಮಗ್ರ ಅಧ್ಯಯನ ವರದಿಯನ್ನು ಕಲೆ ಹಾಕಿಕೊಂಡು ದೇಶದ ನಂಬಿಕೆಗ್ರಸ್ತ ಕಾರನ್ನು ಆಯ್ಕೆ ಮಾಡುತ್ತಿದೆ. 

English summary
Brand Trust Report, India Study, 2015 has awarded the Tata Nano, as the most trusted hatchback. This is the third time in a row that the small car by Tata has won this award.
Story first published: Monday, March 2, 2015, 12:32 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark