ಏಕಕಾಲಕ್ಕೆ 100ಕ್ಕೂ ಹೆಚ್ಚು ನಗರಗಳಲ್ಲಿ ಟಾಟಾ ಬೋಲ್ಟ್ ಬಿಡುಗಡೆ

Written By:

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಬಹುನಿರೀಕ್ಷಿತ ಮಾದರಿಯಾಗಿರುವ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರು ಜನವರಿ 20ರಂದು ಏಕಕಾಲಕ್ಕೆ ದೇಶದ 100ಕ್ಕೂ ಹೆಚ್ಚು ನಗರಗಳಲ್ಲಿ ಬಿಡುಗಡೆಯಾಗಲಿದೆ.

ಸಣ್ಣ ಕಾರು ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಲಿರುವ ಬೋಲ್ಟ್ ಈಗಾಗಲೇ ವಿಮರ್ಶಕರಿಂದ ಮನ್ನಣೆಗೆ ಪಾತ್ರವಾಗಿದೆ. ಟಾಟಾ ಸಂಸ್ಥೆಯು ಮಾರಾಟದ ವಿಚಾರದಲ್ಲೂ ಇದೇ ರೀತಿಯ ಮ್ಯಾಜಿಕ್ ಮಾಡುವ ನಿರೀಕ್ಷೆಯಲ್ಲಿದೆ.

tata bolt

ಜನಪ್ರಿಯ ಮಾರುತಿ ಸ್ವಿಫ್ಟ್‌ಗೆ ಪ್ರತಿಸ್ಪರ್ಧಿಯಾಗಲಿರುವ ಟಾಟಾ ಬೋಲ್ಟ್ 4.25 ಲಕ್ಷ ರು.ಗಳಿಂದ 6.5 ಲಕ್ಷ ರು.ಗಳ ಬೆಲೆ ವ್ಯಾಪ್ತಿಯಲ್ಲಿ ಆಗಮನವಾಗುವ ಸಾಧ್ಯತೆಯಿದೆ. ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಬೋಲ್ಟ್ ಬುಕ್ಕಿಂಗನ್ನು ಟಾಟಾ ಅಧಿಕೃತ ವೆಬ್‌ಸೈಟ್‌ನಲ್ಲಿ ರು. 11,000ಗಳಿಗೆ ಸ್ವೀಕರಿಸಲಾಗುತ್ತಿದೆ.

ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರಿನ ಯಶಸ್ಸಿನ ಬಳಿಕ ಟಾಟಾದ ಅದೇ ಹೊರಿಝೋನೆಕ್ಸ್ಟ್ ಸಿದ್ಧಾಂತದಲ್ಲಿ ಬಿಡುಗಡೆಯಾಗುತ್ತಿರುವ ಎರಡನೇ ಕಾರು ಬೋಲ್ಟ್ ಆಗಿರುತ್ತದೆ. ಇದು ಪೆಟ್ರೋಲ್ ಜೊತೆಗೆ ಡೀಸೆಲ್ ವೆರಿಯಂಟ್‌ಗಳಲ್ಲಿ ಆಗಮನವಾಗಲಿದೆ.

ಇದರ ಪೆಟ್ರೋಲ್ ವೆರಿಯಟ್ 1.2 ಲೀಟರ್ ಟರ್ಬೊಚಾರ್ಜ್ಡ್ ಮಲ್ಟಿ ಪಾಯಿಂಟ್ ಫ್ಯೂಯಲ್ ಇಂಜೆಕ್ಷನ್ (ಎಂಪಿಎಫ್‌ಐ) ರೆವೊಟ್ರಾನ್ ಎಂಜಿನ್ ಪಡೆದುಕೊಳ್ಳಲಿದ್ದು, 90 ಅಶ್ವಶಕ್ತಿ (140 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅದೇ ರೀತಿ ಡೀಸೆಲ್ ಎಂಜಿನ್ 75 ಪಿಎಸ್ ಪವರ್ ಹೊಂದಿರಲಿದೆ.

English summary
Tata will launch the Bolt in 100 cities simultaneously
Story first published: Monday, January 19, 2015, 7:23 [IST]
Please Wait while comments are loading...

Latest Photos