ಫೋಕ್ಸ್‌ವ್ಯಾಗನ್‌ನಿಂದ ಬಜೆಟ್ ಕಾರು ಬರುತ್ತಾ?

Written By:

ಗುಣಮಟ್ಟದ ಕಾರುಗಳನ್ನು ಉತ್ಪಾದಿಸುವುದರಲ್ಲಿ ಹೆಸರು ಮಾಡಿರುವ ಜರ್ಮನಿಯ ಫೋಕ್ಸ್ ವ್ಯಾಗನ್ ಸಂಸ್ಥೆಯೀಗ, ಭಾರತ ಸೇರಿದಂತೆ ಬೆಳೆದು ಬರುತ್ತಿರುವ ಮಾರುಕಟ್ಟೆಗೆ ಬಜೆಟ್ ಕಾರನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಇದರ ಮೊದಲ ಅಂಗವಾಗಿ ವಾಹನಗಳಿಗೆ ಅತಿ ಹೆಚ್ಚಿನ ಬೇಡಿಕೆಯಿರುವ ಚೀನಾ ಮಾರುಕಟ್ಟೆಯಲ್ಲಿ ಫೋಕ್ಸ್ ವ್ಯಾಗನ್ ಬಜೆಟ್ ಬ್ರಾಂಡ್ ಪರಿಚಯವಾಗಲಿದೆ. ಚೀನಾದಲ್ಲಿ ಕಾರ್ಮಿಕ ಶುಲ್ಕ ಕಡಿಮೆಯಾಗಿರುವುದು ಫೋಕ್ಸ್ ವ್ಯಾಗನ್ ಇಂತಹದೊಂದು ಯೋಜನೆಗೆ ಪ್ರೇರಣೆಯಾಗಿದ್ದು, ಅಲ್ಲಿಂದಲೇ ಅಭಿವೃದ್ಧಿಯಾಗಲಿದೆ.

To Follow DriveSpark On Facebook, Click The Like Button
ಫೋಕ್ಸ್ ವ್ಯಾಗನ್

ಇದರ ಮುಂದುವರಿದ ಭಾಗವೆಂಬಂತೆ ಭಾರತದಲ್ಲೂ ಕಡಿಮೆ ಬೆಲೆಯ ಕಾರುಗಳು ಬಿಡುಗಡೆಯಾಗಲಿದೆ. ಆದರೆ ಇವೆಲ್ಲವೂ ನನಸಾಗಲು ಇನ್ನು ಎರಡರಿಂದ ಮೂರು ವರ್ಷಗಳಷ್ಟು ಸಮಯ ಕಾಯಬೇಕಾಗಿದೆ.

ಹಾಗಿದ್ದರೂ ಕಾರಿನ ಗುಣಮಟ್ಟ ಹಾಗೂ ಸುರಕ್ಷತೆಯಲ್ಲಿ ಯಾವುದೇ ರಾಜಿಗೂ ಸಂಸ್ಥೆ ಸಿದ್ಧವಿಲ್ಲ. ಇವೆಲ್ಲವನ್ನು ಮೈಗೂಡಿಸಿಕೊಂಡು ಕಡಿಮೆ ದರದಲ್ಲಿ ಫೋಕ್ಸ್ ವ್ಯಾಗನ್ ಹೇಗೆ ನೂತನ ಕಾರು ತಯಾರಿಸಲಿದೆ ಎಂಬುದು ವಾಹನ ಪ್ರೇಮಿಗಳಲ್ಲಿ ಕುತೂಹಲಕ್ಕೆ ಎಡೆ ಮಾಡಿದೆ. ಅಂತೆಯೇ ಸದ್ಯಕ್ಕೆ ಕಾರು ಯಾವ ತಳಹದಿಯಲ್ಲಿ ನಿರ್ಮಾಣವಾಗಲಿದೆ ಎಂಬುದರ ಬಗ್ಗೆಯೂ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.

English summary
Now the German manufacturer is planning on introducing a budget friendly brand in newly emerging markets.
Story first published: Wednesday, July 1, 2015, 10:01 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark