2016ರಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಭಾರತಕ್ಕೆ

Written By:

ಜರ್ಮನಿಯ ಐಷಾರಾಮಿ ಸಂಸ್ಥೆಯಾಗಿರುವ ಫೋಕ್ಸ್ ವ್ಯಾಗನ್ ತನ್ನ ಶಕ್ತಿಶಾಲಿ ಪೊಲೊ ಜಿಟಿಐ ಕಾರನ್ನು 2016ನೇ ಸಾಲಿನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಸಂಬಂಧ ಚಕನ್ ಘಟಕದಲ್ಲಿ ಟೆಸ್ಟಿಂಗ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಹೆಚ್ಚು ಶಕ್ತಿಶಾಲಿ ಕಾರು ಬಯಸುವವರಿಗೆ ಫೋಕ್ಸ್ ವ್ಯಾಗನ್ ಜಿಟಿ ಅತ್ಯುತ್ತಮ ಆಯ್ಕೆಯಾಗಿರಲಿದೆ. ಇದರ 1.8 ಲೀಟರ್ ಟಿಎಸ್‌ಐ ಪೆಟ್ರೋಲ್ ಎಂಜಿನ್ 320 ಎನ್‌ಎಂ ತಿರುಗುಬಲದಲ್ಲಿ 189.30 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 7 ಸ್ಪೀಡ್ ಡಿಎಸ್‌ಜಿ ಗೇರ್ ಬಾಕ್ಸ್ ಇದರಲ್ಲಿರಲಿದೆ.

 

ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ

6.7 ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುವ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಗಂಟೆಗೆ ಗರಿಷ್ಠ 236 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಈಗ ದೇಶದಲ್ಲಿ ಮಾರಾಟದಲ್ಲಿರುವ ಮಾರಾಟಕ್ಕಿಂತಲೂ ವಿಭಿನ್ನ ಸ್ವರೂಪವನ್ನು ಹೊಸ ಆವೃತ್ತಿಯು ಪಡೆಯಲಿದೆ. ಇದು ಹೆಚ್ಚು ವಿಶಾಲವಾದ ಬಾಡಿ ಕಿಟ್, ಏರೋಡೈನಾಮಿಕ್ ಫ್ರಂಟ್ ಬಂಪರ್, 17 ಇಂಚುಗಳ ಅಲಾಯ್ ವೀಲ್, ಫ್ರಂಟ್ ಗ್ರಿಲ್ ಜೊತೆ ಕೆಂಪು ರೇಖೆ, ಜಿಟಿಐ ಬ್ಯಾಡ್ಜಿಂಗ್, ಕ್ರೋಮ್ ಡ್ಯುಯಲ್ ಎಕ್ಸಾಸ್ಟ್ ಪೈಪ್ಸ್, ಸ್ಪಾಯ್ಲರ್ ಮತ್ತು ಡಿಫ್ಯೂಸರ್ ಪಡೆಯಲಿದೆ.

ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ

ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಮುಖಾಂತರ ಭಾರತವನ್ನು ತಲುಪಲಿರುವ ಫೋಕ್ಸ್ ವ್ಯಾಗನ್ ಜಿಟಿಐ ಕಾರಿಗೆ ದೇಶದಲ್ಲಿ ನೇರ ಪ್ರತಿಸ್ಪರ್ಧಿಗಳಿಲ್ಲ. ಅಲ್ಲದೆ ಅತ್ಯುತ್ತಮ ಮಾರಾಟ ಗುರಿಯಿರಿಸಿಕೊಂಡಿದೆ.

English summary
Volkswagen Polo GTI To Be Launched In India By Mid-2016
Story first published: Saturday, November 28, 2015, 10:34 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark