2017 ಹ್ಯುಂಡೈ ಎಲಂಟ್ರಾ ಸೇಫ್; ಪ್ರಸಕ್ತ ಸಾಲಿನಲ್ಲೇ ಭಾರತ ಪ್ರವೇಶ

Written By:

ಆರನೇ ತಲೆಮಾರಿನ ಹ್ಯುಂಡೈ ಎಲಂಟ್ರಾ, ಅಮೆರಿಕ ಇನ್ಸೂರನ್ಸ್ ಇನ್ಸ್ಟಿಟ್ಯೂಟ್ ಫಾರ್ ಹೈವೇ ಸೇಫ್ಟಿ ವಿಭಾಗದಿಂದ ಗರಿಷ್ಠ ಭದ್ರತಾ ರಾಂಕಿಂಗನ್ನು ಗಿಟ್ಟಿಸಿಕೊಂಡಿದೆ. ಇಲ್ಲಿ ಗಮನಾರ್ಹ ಸಂಗತಿಯೆಂದರೆ 2017 ಹ್ಯುಂಡೈ ಎಲಂಟ್ರಾ ಪ್ರಸಕ್ತ ಸಾಲಿನಲ್ಲೇ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಆಗಲೇ ಅಮೆರಿಕ ಮಾರುಕಟ್ಟೆಯನ್ನು ಪ್ರವೇಶಿಸಿರುವ ಆರನೇ ತಲೆಮಾರಿನ ಎಲಂಟ್ರಾ ಸೆಡಾನ್ ಕಾರು, ಸೆಪ್ಟೆಂಬರ್ ಮೊದಲ ವಾರದಲ್ಲಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

2017 ಹ್ಯುಂಡೈ ಎಲಂಟ್ರಾ ಸೇಫ್; ಪ್ರಸಕ್ತ ಸಾಲಿನಲ್ಲೇ ಭಾರತ ಪ್ರವೇಶ

ಹೈವೇ ಲಾಸ್ ಡಾಟಾ ಇನ್ಸ್ಟಿಟ್ಯೂಟ್ ಆಗಿರುವ ಅಮೆರಿಕ ಇನ್ಸೂರನ್ಸ್ ಇನ್ಸ್ಟಿಟ್ಯೂಟ್ ಫಾರ್ ಹೈವೇ ಸೇಫ್ಟಿ, ಐದು ವಿಭಾಗಗಳಲ್ಲಾಗಿ ಢಿಕ್ಕಿ ಪರೀಕ್ಷೆಯನ್ನು ಹಮ್ಮಿಕೊಂಡಿತ್ತು.

2017 ಹ್ಯುಂಡೈ ಎಲಂಟ್ರಾ ಸೇಫ್; ಪ್ರಸಕ್ತ ಸಾಲಿನಲ್ಲೇ ಭಾರತ ಪ್ರವೇಶ

ಇವುಗಳು ಮೋಡೆರೇಟ್ ಓವರ್ ಲ್ಯಾಪ್ ಫ್ರಂಟ್, ಚಾಲೆಂಜಿಂಗ್ ಸ್ಮಾರ್ಲ್ ಓವರ್ ಲ್ಯಾಪ್, ರೂಫ್ ಪವರ್, ತಲೆ ನಿಯಂತ್ರಣ ಮತ್ತು ಬದಿಯ ಢಿಕ್ಕಿ ಪರೀಕ್ಷೆಗಳನ್ನು ಒಳಗೊಂಡಿದ್ದವು.

2017 ಹ್ಯುಂಡೈ ಎಲಂಟ್ರಾ ಸೇಫ್; ಪ್ರಸಕ್ತ ಸಾಲಿನಲ್ಲೇ ಭಾರತ ಪ್ರವೇಶ

ಐಚ್ಚಿಕ ಫ್ರಂಟ್ ಕ್ರಾಶ್ ತಡೆ ವ್ಯವಸ್ಥೆಯ ಜೊತೆಗೂ ಲಭ್ಯವಿರುವ ಹ್ಯುಂಡೈ ಎಲಂಟ್ರಾ ವಿವಿಧ ವೇಗ ಮಿತಿಗಳಲ್ಲಾಗಿ ಢಿಕ್ಕಿ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು. ತನ್ಮೂಲಕ ಗರಿಷ್ಠ ಟಾಪ್ ಸೇಫ್ಟಿ ಪಿಕ್ ಪ್ಲಸ್ ರಾಂಕಿಂಗ್ ಗಿಟ್ಟಿಸಿಕೊಂಡಿದೆ.

2017 ಹ್ಯುಂಡೈ ಎಲಂಟ್ರಾ ಸೇಫ್; ಪ್ರಸಕ್ತ ಸಾಲಿನಲ್ಲೇ ಭಾರತ ಪ್ರವೇಶ

ಕ್ರಾಶ್ ಟೆಸ್ಟ್ ಬಳಿಕವೂ ಡೋರ್ ಫ್ರೇಮ್, ಸ್ಟೀರಿಂಗ್ ವೀಲ್, ಇನ್ಸ್ಟ್ರುಮೆಂಟ್ ಪ್ಯಾನೆಲ್ ನಡುವಣ ಮಾನವನ ಪ್ರತಿರೂಪವು ಅತ್ಯಂತ ಸುರಕ್ಷಿತವಾಗಿ ಮೂಡಿಬಂದಿದೆ.

2017 ಹ್ಯುಂಡೈ ಎಲಂಟ್ರಾ ಸೇಫ್; ಪ್ರಸಕ್ತ ಸಾಲಿನಲ್ಲೇ ಭಾರತ ಪ್ರವೇಶ

ಮುಂಭಾಗ ಮತ್ತು ಬದಿಯ ಏರ್ ಬ್ಯಾಗ್ ಗಳನ್ನು ಅತ್ಯಂತ ಜಾಣ್ಮೆಯಿಂದ ಜೋಡಣೆ ಮಾಡಲಾಗಿದ್ದು, ಸಹ ಚಾಲಕನಿಗೆ ಅತಿ ಹೆಚ್ಚು ಭದ್ರತೆಯನ್ನು ಖಾತ್ರಿಪಡಿಸುತ್ತದೆ.

2017 ಹ್ಯುಂಡೈ ಎಲಂಟ್ರಾ ಸೇಫ್; ಪ್ರಸಕ್ತ ಸಾಲಿನಲ್ಲೇ ಭಾರತ ಪ್ರವೇಶ

ವರ್ಷಾರಂಭದಲ್ಲೇ ಅಮೆರಿಕ ಮಾರುಕಟ್ಟೆಯನ್ನು ತಲುಪಿರುವ ಎಲಂಟ್ರಾ ಶಕ್ತಿಶಾಲಿ ಕ್ರೀಡಾ ಆವೃತ್ತಿಯು ವರ್ಷಾಂತ್ಯದ ವೇಳೆಯಾಗುವಾಗ ತಲುಪಲಿದೆ. ಆದರೆ ಭಾರತದಲ್ಲೂ ಕ್ರೀಡಾ ಆವೃತ್ತಿ ಬಿಡುಗಡೆಯಾಗಲಿದೆಯೇ ಎಂಬುದು ತಿಳಿದು ಬಂದಿಲ್ಲ.

2017 ಹ್ಯುಂಡೈ ಎಲಂಟ್ರಾ ಸೇಫ್; ಪ್ರಸಕ್ತ ಸಾಲಿನಲ್ಲೇ ಭಾರತ ಪ್ರವೇಶ

ಎಲಂಟ್ರಾ ಭಾರತ ಆವೃತ್ತಿಯು 2.0 ಲೀಟರ್ ಪೆಟ್ರೋಲ್ ಹಾಗೂ 1.6 ಲೀಟರ್ ಡೀಸೆಲ್ ಮಾದರಿಗಳನ್ನು ಪಡೆಯುವ ಸಾಧ್ಯತೆಯಿದೆ. ಇವೆರಡು ಅನುಕ್ರಮವಾಗಿ 146 (183 ಎನ್ ಎಂ ತಿರುಗುಬಲ) ಹಾಗೂ 134 (306 ಎನ್ ಎಂ ತಿರುಗುಬಲ) ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ವಿಡಿಯೋ ವೀಕ್ಷಿಸಿ

English summary
6th Generation Hyundai Elantra Scores Highest Safety Rating By IIHS
Story first published: Monday, August 1, 2016, 12:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark